ಕೊರೋನಾದಲ್ಲಿ ಮೃತರಾದ ಕುಟುಂಬಕ್ಕೆ ೧ ಲಕ್ಷ ರೂಗಳ ಪರಿಹಾರ ಹೆಚ್.ಡಿ. ರೇವಣ್ಣ ಘೋಷಣೆ

ಹಾಸನ : ಹಾಸನ ಹಾಲು ಒಕ್ಕೂಟ ವ್ಯಾಪ್ತಿಯ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳು ಯಾರಾದರೂ ಕರೋನಾ ರೋಗಕ್ಕೆ ತುತ್ತಾಗಿ ಮೃತಪಟ್ಟಿದ್ದಲ್ಲಿ ಅಂತಹವರ ಕುಟುಂಬಗಳಿಗೆ ಗರಿಷ್ಠ ೧ ಲಕ್ಷ ರೂಗಳವರೆಗೆ ಪರಿಹಾರ ಮೊತ್ತವನ್ನು ಹಾಸನ ಹಾಲು ಒಕ್ಕೂಟದಿಂದ ನೀಡಲು ತೀರ್ಮಾನಿಸಲಾಗಿದೆ ಎಂದು ನೂತನ ಹಾಲಿನ ಪೆಟ್ ಬಾಟಲಿ ಯಂತ್ರೋಪಕರಣಗಳ ವೀಕ್ಷಣೆ ವೇಳೆ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಘೋಷಣೆ ಮಾಡಿದರು.


       ನಗರದ ಬಿ.ಎಂ. ರಸ್ತೆ ಬಳಿ ಇರುವ ಹಾಸನ ಹಾಲು ಒಕ್ಕೂಟದ ಡೈರಿಯಲ್ಲಿ ನೂತನವಾಗಿ ನಿರ್ಮಸಿರುವ ಸುವಾಸಿತ ಹಾಲಿನ ಪೆಟ್ ಬಾಟಲ್ ಘಟಕವನ್ನು ವೀಕ್ಷಣೆ ಮಾಡಿದ ನಂತರ ಮಾಧ್ಯಮಕ್ಕೆ ಮಾಹಿತಿ ನೀಡಿದ ಅವರು, ಹಾಸನ ಹಾಲು ಒಕ್ಕೂಟದ ವ್ಯಾಪ್ತಿಯಲ್ಲಿ ನಂದಿನಿ ಹಾಲು ಮತ್ತು ಉತ್ಪನ್ನಗಳನ್ನು ಮಾರಾಟ ಮಾಡುವ ಆಧಿಕೃತ ಪಾರ್ಲರ್ ಗಳ ಏಜೆಂಟರುಗಳು ಹಾಗೂ ಇತರೆ ಅಧಿಕೃತ ಏಜೆಂಟರುಗಳು ಕರೋನಾ ರೋಗಕ್ಕೆ ತುತ್ತಾಗಿ ಮೃತಪಟ್ಟಿದ್ದಲ್ಲಿ ಅಂತಹವರ ಕುಟುಂಬಗಳಿಗೆ ಗರಿಷ್ಠ ೧.೫ ಲಕ್ಷ ರೂಗಳವರೆಗೆ ಪರಿಹಾರ ಮೊತ್ತವನ್ನು ಹಾಸನ ಹಾಲು ಒಕ್ಕೂಟದಿಂದ ನೀಡಲು ತೀರ್ಮಾನಿಸಲಾಗಿದೆ ಎಂದರು. ನೂತನವಾಗಿ ನಿರ್ಮಾಣ ಮಾಡಿರುವ ಸುವಾಸಿತ ಹಾಲಿನ ಬೆಟ್ ಬಾಟಲ್ ಘಟಕ ಹಾಸನ ಹಾಲು ಒಕ್ಕೂಟದ ಮುಖ್ಯ ಡೇರಿ ಆವರಣದಲ್ಲಿ ನಿರ್ಮಾಣ ಮಾಡಿರುವ ಪ್ರತಿ ಗಂಟೆಗೆ ೩೦ ಸಾವಿರ ಪೆಟ್ ಬಾಟಲ್ ಉತ್ಪಾದನಾ ಸಾಮರ್ಥ್ಯದ ಹಾಲಿನ ಉತ್ಪಾದನಾ ಘಟಕಕ್ಕೆ ಈಗಾಗಲೇ ಯಂತ್ರೋಪಕರಣಗಳ ಸರಬರಾಜು ಮತ್ತು ಅಳವಡಿಕೆ ಪೂರ್ಣಗೊಂಡಿದ್ದು, ಪ್ರಾಯೋಗಿಕ ಚಾಲನೆ ಪ್ರಾರಂಭಿಸಲಾಗಿದ್ದು, ಕರೋನಾ ಲಾಕ್ ಡೌನ್ ಅವಧಿ ಮುಗಿದ ನಂತರ ಪ್ರಾಯೋಗಿಕ ಉತ್ಪಾದನೆ ಆರಂಭಿಸಲಾಗುವುದು ಎಂದು ವಿಶ್ವಾಸವ್ಯಕ್ತಪಡಿಸಿದರು. 

     ಈ ಸುವಾಸಿತ ಹಾಲಿನ ಪೆಟ್ ಬಾಟಲ್ ಘಟಕದ ವಿಶೇಷತೆಗಳೆಂದರೆ Uಊಖಿ Pಇಖಿ ಃಔಖಿಖಿಐಇ  ಘಟಕದ ಸಾಮರ್ಥವು ಪ್ರತಿ ಗಂಟೆಗೆ ೩೦,೦೦೦ ಬಾಟಲ್‌ಗಳಿದ್ದು, ದಿನವೊಂದಕ್ಕೆ ೫,೪೦,೦೦೦ ಬಾಟಲ್‌ಗಳನ್ನು ಉತ್ಪಾದಿಸಬಹುದಾಗಿರುತ್ತದೆ. ಈ ಘಟಕದಲ್ಲಿ ಸುವಾಸಿತ ಹಾಲು, ಲಸ್ಸಿ ಹಾಗೂ ಮಸಾಲ ಮಜ್ಜಿಗೆ (೨೦೦ಒಐ) ಗಳಲ್ಲದೇ Uಊಖಿ Pಟಚಿiಟಿ ಒiಟಞ ( ೧೦೦೦ ಒಐ ) ಸಹ ಉತ್ಪಾದಿಸಬಹುದಾಗಿರುತ್ತದೆ.   

      ಸಂಸ್ಕರಣಾ ಮತ್ತು ಫಿಲ್ಲಿಂಗ್ ಯಂತ್ರೋಪಕರಣಗಳು ಸ್ವಯಂಚಾಲಿತವಾಗಿದ್ದು, ಫಿಲ್ಲಿಂಗ್ ಯಂತ್ರಗಳ ಹಾಪರ್‌ಗಳಿಗೆ ಒಂದಡೆ ಪೆಟ್ ಪ್ರೀ ಪಾರ್ಮ್ ಮತ್ತೊಂದೆಡೆ ಕ್ಯಾಪ್‌ಗಳನ್ನು ಫೀಡ್ ಮಾಡುವುದು. ಸ್ವಚ್ಚಗೊಂಡ Pಡಿe - ಜಿoಡಿms ಗಳು ಬೌವರ್ ವಿಭಾಗದಲ್ಲಿ ಅಧಿಕ ತಾಪಮಾನದಲ್ಲಿ ಪರಿವರ್ತನೆಗೊಳ್ಳುತ್ತವೆ. ಬಾಟಲ್‌ಗಳನ್ನು ಡೈಲ್ಯೂಟ್ ಪ್ಯಾರಾಸಟಕ್ ಆಸಿಡ್ ಸೈರಿಲೈಸ್ ಮಾಡಲಾಗುತ್ತದೆ. ಚೇಂಬರ್‌ನಲ್ಲಿ ಮೊದಲೇ ಸ್ಪೆರಿಲೈಸ್ ಮಿಲ್ಕ್ ಲಸ್ಸಿ ಮಸಾಲ ಮಜ್ಜಿಗೆಯನ್ನು ನಿಗದಿತ ಪ್ರಮಾಣದಲ್ಲಿ ತುಂಬಿಸಲಾಗುವುದು ಎಂದರು. ನಂದಿನಿ ಮಾದರಿಯ ಪ್ಲೇವರ್ಡ್ ಮಿಲ್, ಲಸ್ಸಿ, ಮಿಲ್ಕ್ ಶೇಕ್ ಮತ್ತು ಮಸಾಲ ಮಜ್ಜಿಗೆ ಉತ್ಪನ್ನಗಳನ್ನು ದೇಶಾದ್ಯಂತ ನಂದಿನಿ ರೀಟೇಲರ್‌ಗಳ ಮುಖೇನ ಮಾರಾಟಕ್ಕೆ ಬಿಡುಗಡೆ ಮಾಡಲಾಗುವುದು. ಭಾರತೀಯ ಸೇನೆಯಿಂದ ಸಹ ಮೆಗಾ ಡೇರಿ ನಿರ್ಮಾಣ ಯೋಜನೆ ಮಾಡುವ ಗುರಿ ಹೊಂದಲಾಗಿದೆ ಎಂದರು.

      ಉದ್ದೇಶಿತ ಮೆಗಾ ಡೇರಿ ಸಮುಚ್ಚಯ ನಿರ್ಮಾಣ ಯೋಜನೆಯ ಸಿವಿಲ್ ಕಾಮಗಾರಿಗಳಲ್ಲಿ ಗೋದಾಮುಗಳು, ಯಂತ್ರೋಪಕರಣಗಳ ಸರಬರಾಜು ಮತ್ತು ಅಳವಡಿಕೆ ಮುಂತಾದವುಗಳಿಗೆ ಒಟ್ಟಾರೆ ಯೋಜನಾ ಸುಮಾರು ೫೦೦ ಕೋಟಿ ರೂ. ಅಂದಾಜಿಸಲಾಗಿದೆ. ಸದರಿ ಯೋಜನೆಯು ಪೂರ್ಣಗೊಳ್ಳಲು ೨ ವರ್ಷಗಳ ಕಾಲಾವಧಿ ನಿಗದಿಪಡಿಸಿಕೊಂಡಿದ್ದು, ೨೦೨೩ ರ ಅಂತ್ಯಕ್ಕೆ ಕಾರ್ಯಾರಂಭ ಮಾಡಲು ಯೋಜಿಸಲಾಗಿದೆ ಎಂದರು. ಸಿವಿಲ್ ಕಾಮಗಾರಿಗಳ ಮೊದಲನೇ ಹಂತದ ಕಾಮಗಾರಿಗಳಿಗೆ ಕೆ.ಎಂ.ಎಫ್ ಮುಖಾಂತರ ಟೆಂಡರ್ ಪ್ರಕ್ರಿಯೆ ಕೈಗೊಂಡಿದ್ದು, ಸದ್ಯದಲ್ಲಿಯೇ ಕಾಮಗಾರಿ ಪ್ರಾರಂಭಿಸಲಾಗುವುದು. ಮೆಗಾಡೇರಿ ಯೋಜನೆಯಿಂದ ಒಕ್ಕೂಟದ ಹೆಚ್ಚುವರಿ ಹಾಲಿನಿಂದ ಹಾಲಿನ ಪುಡಿ ಮತ್ತು ಬೆಳೆ ಪರಿವರ್ತನೆ ಇಲ್ಲಿಯೇ ಆಗುವುದರಿಂದ ಹಾಲಿನ ಸಾಗಾಣಿಕಾ ವೆಚ್ಚ ಮತ್ತು ಉತ್ಪನ್ನಗಳ ದಾಸ್ತಾನು ವೆಚ್ಚದಲ್ಲಿ ಮತ್ತು ಪರಿವರ್ತನಾ ವೆಚ್ಚದಲ್ಲಿ ಒಕ್ಕೂಟಕ್ಕೆ ಕೋಟ್ಯಾಂತರ ರೂ.ಗಳು ಉಳಿತಾಯವಾಗುತ್ತದೆ. ಉಳಿತಾಯದ ಹಣವನ್ನು ವ್ಯಾಪ್ತಿಯ ಹಾಲು ಒಕ್ಕೂಟದ ಹಾಲಿನ ದರ ನೀಡಲು, ಖರೀದಿ ಉತ್ಪಾದಕರಿಗೆ ಹೆಚ್ಚಿಸಿ ಉಪಯೋಗಿಸಲಾಗುವುದು ಎಂದು ಹಾಲಿನ ಡೈರಿ ಬಗ್ಗೆ ಮಾಹಿತಿ ನೀಡಿದರು.

   ಇದೆ ವೇಳೆ ಶಾಸಕರಾದ ಸಿ.ಎನ್. ಬಾಲಕೃಷ್ಣ, ವ್ಯವಸ್ಥಾಪಕ ಗೋಪಾಲಯ್ಯ, ಹೆಚ್.ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷ ಚಂದ್ರೇಗೌಡ, ಮಾಜಿ ಅಧ್ಯಕ್ಷ ಹೊನ್ನವಳ್ಳಿ ಸತೀಶ್ ಇತರರು ಉಪಸ್ಥಿತರಿದ್ದರು.


Post a Comment

Previous Post Next Post