ಹಾಸನ: ನಗರದ ಬಿ.ಎಂ. ರಸ್ತೆ ಬಳಿ ಇರುವ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಆಹಾರದ ಕಿಟ್ ಗಳನ್ನು ನೂರಾರು ಜನ ಅಲ್ಪಸಂಖ್ಯಾತರಿಗೆ ವಿತರಿಸಿದರು.
ಇದೆ ವೇಳೆ ಮಾತನಾಡಿದ ಕಾಂಗ್ರೆಸ್ ಮುಖಂಡ ಹೆಚ್.ಕೆ. ಮಹೇಶ್ ಮತ್ತು ಬನವಾಸೆ ರಂಗಸ್ವಾಮಿ ಅವರು, ಕೊರೋನಾ ಆವರಿಸಿ ಜನರು ತತ್ತರಿಸಿ ಹೋಗಿದ್ದಾರೆ. ಅದರಲ್ಲೂ ಲಾಕ್ ಡೌನ್ ನಿಂದ ದುಡಿಮೆ ಇಲ್ಲದೆ ಬಡವರು ಮತ್ತು ಅಲ್ಪಸಂಖ್ಯಾತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷದವತಿಯಿಂದ ಇದುವರೆಗೂ ಸಾವಿರಾರು ಜನರಿಗೆ ಪ್ರತಿನಿತ್ಯ ಬಳಸುವ ಆಹಾರ ಸಾಮಾಗ್ರಿಗಳನ್ನು ಕೊಡುವ ಮೂಲಕ ನೆರವಾಗುತ್ತಿರುವುದಾಗಿ ಹೇಳಿದರು.
ಇದೆ ವೇಳೆ ಕಾಂಗ್ರೆಸ್ ಮುಖಂಡರಾದ ಬಾಗೂರು ಮಂಜೇಗೌಡ, ಬನವಾಸೆ ರಂಗಸ್ವಾಮಿ, ಸಮದ್, ಅಕ್ರಂ, ಕುಮಾರಸ್ವಾಮಿ, ಆರಿಫ್, ಫಾರುಕ್, ಅಸ್ಲಾಪಾಷಾ, ತಾರಾಚಂದನ್, ಟಿಪ್ಪು ಸಂಘರ್ಷ ಸಮಿತಿ ಅಧ್ಯಕ್ಷ ಮುಬಾಶೀರ್ ಅಹಮದ್, ಕಡಾಖಡಿ ಫೀರ್ ಸಾಹೇಬ್, ಅಶು ಆಸೀಪ್ ಇತರರು ಪಾಲ್ಗೊಂಡಿದ್ದರು.
Tags
ಹಾಸನ
