ಹಾಸನ: ಲಾಕ್ ಡೌನ್ ಜಾರಿಗೆ ಬಂದು ಒಂದು ತಿಂಗಳಾದರೂ ನಿಯಮವನ್ನು ಕಠಿಣ ಮಾಡದವರು ಮುಖ್ಯಮಂತ್ರಿಗಳು ಹಾಸನಕ್ಕೆ ಆಗಮಿಸುವ ಹಿನ್ನಲೆಯಲ್ಲಿ ನಗರದ ಬಹುತೇಕ ರಸ್ತೆಗಳಲ್ಲಿ ಬ್ಯಾರಿಕೇಡ್ ಮತ್ತು ಬೊಂಬುವನ್ನು ಅಡ್ಡದಾಗಿ ಹಾಕಲಾಗಿದೆ ಎಂದು ಕಾಂಗ್ರೆಸ್ ಮುಖಂಡ ಮತ್ತು ವಕೀಲರ ಸಂಘದ ಮಾಜಿ ಅಧ್ಯಕ್ಷ ದೇವರಾಜೇಗೌಡ ಗಂಭೀರವಾಗಿ ಆರೋಪಿಸಿದರು.
ಪತ್ರಿಕಾಗೋಷ್ಠೀಯಲ್ಲಿ ಬುಧವಾರ ಮಾತನಾಡಿ, ಮೊದಲನೆ ಕೊರೋನಾ ಅಲೆಯಲ್ಲಿ ಸರಕಾರವು ಕಠಿಣ ಕ್ರಮಕೈಗೊಂಡಿತ್ತು. ಆದರೇ ಎರಡನೇ ಅಲೆಯಲ್ಲಿ ಅಷ್ಟೊಂದು ಕ್ರಮ ಇರಲಿಲ್ಲ. ಇಂದು ಸಾವಿರಾರು ಸಂಖ್ಯೆಯಲ್ಲಿ ಕೊರೋನಾ ಪಾಸಿಟಿವ್ ಮತ್ತು ಸಾವಿನ ಸಂಖ್ಯೆ ಹೆಚ್ಚಿಗೆ ಬರಲು ಕಾರಣವಾಗಿದೆ. ಲಾಕ್ ಡೌನ್ ವಿಚಾರವಾಗಿ ಜಿಲ್ಲಾಡಳಿತವು ಇಲ್ಲಿವರೆಗೂ ಸೂಕ್ತವಾದ ತೀರ್ಮಾನಕೈಗಳ್ಳಲಿಲ್ಲ. ಇಲ್ಲಿವರೆಗೂ ಅಲ್ಲಲ್ಲಿ ರಸ್ತೆಗೆ ಬ್ಯಾರಿಕೇಡ್, ಬೊಂಬು ಹಾಕಿರಲಿಲ್ಲ. ಆದರೇ ಮುಖ್ಯಮಂತ್ರಿಗಳು ಹಾಸನಕ್ಕೆ ಬರುವ ಹಿನ್ನಲೆಯಲ್ಲಿ ಕಳೆದ ಎರಡು ದಿನಗಳಿಂದ ಎಲ್ಲಾ ರಸ್ತೆಗಳಿಗೂ ಅಡ್ಡದಾಗಿ ಬ್ಯಾರಿಕೇಡ್ ಹಾಕಿರಬಹುದು. ಇದೆ ಕೆಲಸವನ್ನು ಒಂದು ತಿಂಗಳ ಹಿಂದೆ ಮಾಡಿದ್ದರೇ ಇಷ್ಟೊಂದು ಕೊರೋನಾ ಹರಡುತ್ತಿರಲಿಲ್ಲ ಎಂದರು. ಕಾನೂನು ಕ್ರಮ ತೆಗೆದುಕೊಳ್ಳುವಲ್ಲಿ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ವಿಫಲವಾಗಿದೆ ಎಂದು ಹೇಳಿದರು.
ಬಡವರಿಗೆ, ಕೂಲಿಕಾರ್ಮಿಕರಿಗೆ ಕೇವಲ ೨ ಸಾವಿರ ರೂಗಳನ್ನು ಕೊಡುವುದಾಗಿ ಘೋಷಿಸಿದ್ದಾರೆ. ಆದರೇ ಅದು ಇದು ತೀರ ಕಡಿಮೆ, ಎಷ್ಟು ಜನರಿಗೆ ಸಿಕ್ಕಿದೆ ಗೊತ್ತಿಲ್ಲ. ಕೋವಿಡ್ ವ್ಯಾಕ್ಸಿನ್ ವಿಚಾರವಾಗಿ ಕಳೆದ ಮೂರು ದಿನಗಳ ಹಿಂದೆ ೨ ಸಾವಿರ ಜನ ಆಟೋ ಚಾಲಕರಿಗೆ ಕೊಡಿಸಿದರು. ಹಣ ಕೊಟ್ಟರು ಸಿಗದಿದ್ದ ಲಸಿಕೆ ಶಾಸಕರಿಗೆ ಹೇಗೆ ಸಿಕ್ಕಿತು ಎಂದು ಪ್ರಶ್ನಿಸಿ ಈಬಗ್ಗೆ ತನಿಖೆ ಮಾಡಬೇಕು ಎಂದು ಆಗ್ರಹಿಸಿದರು. ಒಂದು ಪಕ್ಷದ ಮೂಲಕ ಲಸಿಕೆ ಕೊಡಿಸಿರುವುದು ಜಿಲ್ಲಾಡಳಿತ ನಡೆ ಒಳ್ಳೆಯದಲ್ಲ. ರಾಜಕೀಯ ಒತ್ತಡದಿಂದಲೂ, ಇಲ್ಲವೇ ಕೆಲಸ ಮಾಡುವ ಇಚ್ಛ ಶಕ್ತಿ ಇಲ್ಲವೊ? ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಕೂಡ ಸುಮ್ಮನೆ ಬಂದು ಹೇಳಿಕೆ ಕೊಟ್ಟು ಹೋಗುತ್ತಿದ್ರು. ಹಾಸನ ಜಿಲ್ಲೆಯಲ್ಲಿ ೭ ಜನ ಶಾಸಕರು ಇದ್ದು, ಪ್ರತಿನಿತ್ಯ ಈ ಶಾಸಕರಲ್ಲಿ ಒಂದಲ್ಲ ಒಂದು ಹೇಳಿಕೆಗಳು ಇರುತ್ತದೆ. ಅದರಲ್ಲೂ ಪ್ರಮುಖವಾಗಿ ಹೆಚ್.ಡಿ. ರೇವಣ್ಣನವರು. ಲಾಕ್ ಡೌನ್ ವಿಚಾರವಾಗಿ ಹೆಚ್ಚಿನ ಒತ್ತಡ ತಂದು ಜಾರಿ ಮಾಡಿಸಬಹುದಿತ್ತು. ಆಕೆಲಸವನ್ನು ಜೆಡಿಎಸ್ ಶಾಸಕರು ಯಾರು ಮಾಡಲಿಲ್ಲ. ಇನ್ನು ಬಿಜೆಪಿ ಶಾಸಕರಂತು ಯಾವ ಪ್ರಯತ್ನ ಮಾಡಲಿಲ್ಲ. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಜಿಲ್ಲೆಯ ಜನತೆ ನರಳ ಬೇಕಾಗಿದೆ ಎಂದು ಬೇಸರವ್ಯಕ್ತಪಡಿಸಿದರು. ಪ್ರಧಾನ ಮಂತ್ರಿಗಳು ಎಲ್ಲಾರಿಗೂ ಉಚಿತ ಲಸಿಕೆ ಕೊಡುತ್ತೇವೆ ಎಂದು ಹೇಳಿರುವುದು ಸಂತೋಷದ ವಿಚಾರ. ಇದನ್ನು ಜೂನ್ ೨೧ ರಿಂದ ಕೊಡುವುದಾಗಿ ಹೇಳಿದ್ದು, ಅಲ್ಲಿವರೆಗೂ ಇನ್ನೆಷ್ಟು ಸಾವು-ನೋವು ಸಂಭವಿಸಬಹುದು ಬಗ್ಗೆ ಯೋಚಿಸಿಲ್ಲ ಎಂದು ದೂರಿದರು.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಕುಮಾರ್, ಶಿವಕುಮಾರ್, ರವಿಕುಮಾರ್ ಇತರರು ಉಪಸ್ಥಿತರಿದ್ದರು.