ಬೇಲೂರು :ಇಲ್ಲಿನ ಪೊಲೀಸರಿಗೂ ಸಾಕು ಸಾಕಾಗಿ ಹೋಗಿದೆ. ಜೀವದ ಹಂಗು ತೊರೆದು ಮಳೆ, ಬಿಸಿಲು, ಹಗಲು, ರಾತ್ರಿ ಎನ್ನದೆ ಕರ್ತವ್ಯದಲ್ಲಿ ತೊಡಗಿಕೊಂಡಿದ್ದಾರೆ.
ಅದರಲ್ಲೂ ಈ ಕೊರೊನಾ ಹಾವಳಿ ಆರಂಭವಾದಾಗಿನಿAದ ಅರ‍್ನಸಿ ದುಡಿಯುತ್ತಿರುವ ಪೊಲೀಸರು ಸರ್ಕಾರದ ದಿನಕ್ಕೊಂದು ನಿಯಮಗಳಡಿ ಕರ್ತವ್ಯ ನಿರ್ವಹಿಸಬೇಕಾಗಿ ಬಂದಿರುವುದು ನೋವಿನ ಸಂಗತಿಯೆ ಸರಿ. ಹಾಸನ ಜಿಲ್ಲೆಯಲ್ಲಿ ಕೊರೊನಾ ಪ್ರಕರಣ ಇಳಿಕೆ ಕಾಣದ ಕಾರಣ ಜೂನ್ ೨೧ ರವರಗೆ ಲಾಕ್‌ಡೌನ್ ಮುಂದುವರಿಸಲಾಗಿದೆ. ಒಂದು ದಿನ ಬಿಟ್ಟು ಒಂದು ದಿನ ದಿನಬಳಕೆ ವಸ್ತುಗಳ ವ್ಯಾಪಾರಕ್ಕೆ ಅವಕಾಶ ನೀಡಲಾಗಿದ್ದು ಇದನ್ನೇ ದುರ್ಬಳಕೆ ಮಾಡಿಕೊಳ್ಳುವ ನಮ್ಮ ಜನ ಪೊಲೀಸರ ಸೈರನ್ ಶಬ್ಧ ಕೇಳದೆ ಅಂಗಡಿಗಳ ಬಾಗಿಲು ಮುಚ್ಚದ ಸ್ಥಿತಿಗೆ ತಲುಪಿದ್ದಾರೆ.
ಇದರೊಂದಿಗೆ ವಾಹನ ಸವಾರರೂ ಸಹ ಮನಬಂದAತೆ ವಾಹನಗಳ ಪಟ್ಟಣಕ್ಕೆ ತರುವುದು ಕಂಡುಬರುತ್ತಿದೆ. ಪೊಲೀಸರು ಎಷ್ಟೆಲ್ಲಾ ಕ್ರಮಗಳ ಕೈಗೊಂಡರೂ ಕ್ಯಾರೆ ಎನ್ನದಂತೆ ಬರತೊಡಗಿದ್ದಾರೆ. ಸಕಾರಣವಿಲ್ಲದೆ ಬರುವ ವಾಹನಗಳಿಂದ ತೊಂದರೆ ಆಗುವುದನ್ನು ಮನಗಂಡ ಇಲ್ಲಿನ ಪೊಲೀಸರು, ಇಂದು ಸುರಿಯುವ ಜಡಿ ಮಳೆಯ ನಡುವೆಯೇ ಬೆಳಿಗ್ಗೆ ೬ ಗಂಟೆಯಿAದ ೧೧ ಗಂಟೆಯವರಗೆ ಬಿಡುವು ಇಲ್ಲದಂತೆ ಇಲ್ಲಿನ ನೆಹರೂನಗರದಲ್ಲಿ ಚಿಕ್ಕಮಗಳೂರು ಕಡೆಯಿಂದ ಆಗಮಿಸಿದ ನೂರಾರು ವಾಹನಗಳ ತಡೆದು ವಿಚಾರಣೆ ನಡೆಸಿ ಕಳುಹಿಸುವುದು ಕಂಡುಬAತು.
ಪಿಎಸ್‌ಐ ಎಸ್.ಜಿ.ಪಾಟೀಲ್ ಸುರಿಯುವ ಮಳೆಯಲ್ಲೇ ಜರ್ಕಿನ್ ಹಾಕಿಕೊಂಡು ತಲೆಗೆ ಪ್ಲಾಸ್ಟಿಕ್ ಚೀಲ ಧರಿಸಿಕೊಂಡು ಸಿಬ್ಬಂದಿಗಳಾದ ತಾಂಡವೇಶ್ವರ್ ಹಾಗೂ ಬಿಜಿಲಿ ಇವರೊಂದಿಗೆ ವಾಹನಗಳ ತಪಾಸಣೆ ನಡೆಸಿದರು. ಸರಿಯಾದ ಕಾರಣವಿಲ್ಲದೆ ಸುಕಾಸುಮ್ಮನೆ ವಾಹನ ತಂದವರಿಗೆ ತಿಳುವಳಿಕೆ ಹೇಳಿದ್ದಲ್ಲದೆ ಮಾತಿನ ಬಿಸಿ ಮುಟ್ಟಿಸಿದರು. ಪೊಲೀಸರೂ ಮನುಷ್ಯರೆ, ಒಂದುಕಡೆ ವೈದ್ಯ ಸಿಬ್ಬಂದಿ ಕೊರೊನಾ ಸೋಂಕಿತರ ಚಿಕಿತ್ಸೆಯಲ್ಲಿ ಪ್ರಾಣದ ಹಂಗುತೊರೆದು ಸೇವಾಕಾರ್ಯದಲ್ಲಿ ತೊಡಗಿದ್ದರೆ, ಪೊಲೀಸರು ಮಳೆ, ಬಿಸಿಲು, ದೂಳು ಎನ್ನದೆ ಸೇವಾಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಆದರೆ ಇದಾವುದೂ ನಮಗೆ ಸಂಬAಧಿಸಿದ್ದಲ್ಲ ಎನ್ನುವಂತೆ ಮನಬಂದAತೆ ವಾಹನಗಳೊಂದಿಗೆ ಬರುವವರ ಮನಪರಿವರ್ತನೆ ಏಕಾಗುತ್ತಿಲ್ಲ ಎನ್ನುವುದಕ್ಕೆ ಉತ್ತರ ಸಿಗಲಾರದೇನೊ.
ಬೇಲೂರಿನ ನೆಹರೂನಗರದಲ್ಲಿ ಮಿನಿವಿಧಾನಸೌದಧ ಎದುರು ಚಿಕ್ಕಮಗಳೂರು ಕಡೆಯಿಂದ ಆಗಮಿಸಿರುವ ಸಾಲು ವಾಹನಗಳು

