ಅನಗತ್ಯ ಓಡಾಟಕ್ಕೆ ಕೋವಿಡ್ ಟೆಸ್ಟ್ ಶಿಕ್ಷೆ ಪಟ್ಟಣಕ್ಕೆ ಅನಗತ್ಯ ಓಡಾಟಕ್ಕೆ ಬ್ರೇಕ್.


  ಕೋವಿಡ್ ಲಾಕ್ ಡೌನ್ ತಾಲ್ಲೂಕಿನಲ್ಲಿ ಜಾರಿ ಇದ್ದರೂ, ಬಹುತೇಕ ಮಂದಿ ಅನವಶ್ಯಕ ಕಾರಣಗಳನ್ನು ಹೇಳಿಕೊಂಡು ಪಟ್ಟಣದಲ್ಲಿ ಅನಗತ್ಯ ಓಡಾಟ ನಡೆಸುತ್ತಾ ಕೊರೊನಾ ಹೆಚ್ಚಳಕ್ಕೆ ಅನುವು ಮಾಡುತ್ತಿದ್ದಾರೆ ಎಂದು ತಿಳಿದ ಇಲ್ಲಿನ ವೃತ್ತ ನಿರೀಕ್ಷಕ ಯೋಗೀಶ್ ಮತ್ತು ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ವಿಜಯ್ ನೇತೃತ್ವದ ತಂಡ  ನೆಹರುನಗರ ಬಳಿ ಪಟ್ಟಣಕ್ಕೆ ಪ್ರವೇಶಿಸುವ ದ್ವಿಚಕ್ರ ವಾಹನ ಮತ್ತು ಇನ್ನಿತರ ವಾಹನದ ಸವಾರಿಗೆ ಕೋವಿಡ್ ಟೆಸ್ಟ್ ಮಾಡಿಸುವ ಕ್ರಮಕ್ಕೆ ಮುಂದಾಗಿದ್ದು, ಸರಿ ಸುಮಾರು ನೂರಕ್ಕೂ ಹೆಚ್ಚಿನ ಜನರಿಗೆ ಕೊರೊನಾ ಪರೀಕ್ಷೆ ನಡೆಸಿದರು.


    ಬಳಿಕ ಪತ್ರಿಕೆಯೊಂದಿಗೆ ಮಾತನಾಡಿದ ಬೇಲೂರು ವೃತ್ತ ನಿರೀಕ್ಷಕ ಯೋಗೀಶ್, ಇಡೀ ಜಗತ್ತಿನ ಮಾನವ ಜೀವಿಗಳಿಗೆ ಜೀವ ಭಯದ ಭೀತಿ ಮೂಡಿಸಿದ ಕೊರೊನಾ ಎರಡನೇ ಅಲೆ ತೀವ್ರ ವ್ಯಾಪಕವಾಗಿ ಹರಡುವ ಮೂಲಕ ಸಾವಿರಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ. ವಿಶೇಷವಾಗಿ ಎರಡನೇ ಕೊರೊನಾ ಅಲೆಯನ್ನು ಯುವ ಸುಮುದಾಯವೇ ಹೆಚ್ಚು ಬಲಿಯಾಗಿದ್ದು, ನಿಜಕ್ಕೂ ಶೋಚನೀಯ, ಇದಕ್ಕೆ ಕಾರಣ ಬಹುತೇಕ ಯುವಕರು ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಉದಾಸೀನ ನಡವಳಿಕೆ ಮತ್ತು ಅನಗತ್ಯ ಓಡಾಟದಿಂದ ಇಂದು ಕೆಲ ಕುಟುಂಬಗಳು ದುಡಿಯುವ ಕೈಗಳು ಇಲ್ಲದೆ ಅನಾಥರಾಗಿದ್ದಾರೆ. ಇವತ್ತಿಗೂ ಜನರು ಸಣ್ಣ ಪುಟ್ಟ ವಸ್ತುಗಳು ಮತ್ತು ಮಾತ್ರೆ ಔಷಧಿ ನೆಪ ಮಾಡಿಕೊಂಡು ಲಾಕ್ ಡೌನ್ ಸಂರ‍್ಭದಲ್ಲಿ ಪಟ್ಟಣಕ್ಕೆ ಪ್ರವೇಶಿಸಿ ವಾಹನದ ದಟ್ಟಣೆಗೆ ಕಾರಣವಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಆರೋಗ್ಯ ಇಲಾಖೆ ಮತ್ತು ಪೋಲಿಸ್ ಇಲಾಖೆ ಜಂಟಿಯಾಗಿ ನೆಹರು ನಗರದ ಬಳಿ ವಿನಾಃ ಕಾರಣ ಓಡಾಟ ನಡೆಸುವ ಬೈಕ್ ಸವಾರಿಗೆ ಹಾಗೂ ವಾಹನಗಳ ಸವಾರಿಗೆ ಕೋವಿಡ್ ಟೆಸ್ಟ್ ಮಾಡಿಸುವ ಮೂಲಕ ಅವರಿಗೆ ಎಚ್ಚರಿಕೆ ನೀಡಲಾಗಿದೆ. ಸರ‍್ವಜನಿಕರು ರ‍್ಕಾರದ ಕೋವಿಡ್ ನೀತಿ ನಿಯಮಗಳನ್ನು ಅನುಷ್ಠಾನ ಮಾಡಲು ಮುಂದಾಗಿರುವ ಪೋಲಿಸ್ ಇಲಾಖೆ,ಆರೋಗ್ಯ ಮತ್ತು ಕಂದಾಯ ಇಲಾಖೆಗೆ ಸಂಪರ‍್ಣ ಸಹಕಾರ ನೀಡಿದಾಗ ಮಾತ್ರ ಇಂತಹ ಕೊರೊನಾ ಅಟ್ಟಹಾಸಕ್ಕೆ ಬ್ರೇಕ್ ಹಾಕಬಹುದು ಎಂದರು.


ಡಾ.ವಿಜಯ್. ಆರೋಗ್ಯಾಧಿಕಾರಿ ಸರ‍್ವಜನಿಕ ಆಸ್ಪತ್ರೆ ಬೇಲೂರು.

ಬೇಲೂರು ತಾಲ್ಲೂಕಿನಲ್ಲಿ ಸದ್ಯ ಕೋವಿಡ್ ಸಂಖ್ಯೆ ದಿನ ಕಳೆದಂತೆ ಇಳಿಮುಖವಾಗುತ್ತಿದೆ. ಅದರೂ ಕೊರೊನಾ ನೀತಿ ನಿಯಮಗಳನ್ನು ಕಡ್ಡಾಯವಾಗಿ ಅನುಷ್ಠಾನಕ್ಕೆ ತರಬೇಕು ಎಂದು‌ ಇಲ್ಲಿನ ಪೋಲಿಸ್ ಇಲಾಖೆ ಕೂಡಿ ಸರ‍್ವಜನಿಕರ ಅನಗತ್ಯ ಓಡಾಟಕ್ಕೆ ಕಡಿವಾಣ ಹಾಕುವ ಪ್ರಯತ್ನ ಮಾಡಲಾಗುತ್ತದೆ. ತಾಲ್ಲೂಕಿನಲ್ಲಿ ಈಗಾಗಲೇ ‌ಒಂಬತ್ತು ಕಡೆಯಲ್ಲಿ ಕೋವಿಡ್ ಪರೀಕ್ಷೆ ನಡೆಸಲಾಗುತ್ತದೆ. ಜನರು ಉದಾಸೀನ ಮತ್ತು ಉಡಾಪೆ ರ‍್ತನೆಯಿಂದ ಹೊರ ಬಂದು ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳನ್ನು ಕ್ರಮಬದ್ದವಾಗಿ ಅನುಸರಿಸುವ ಮೂಲಕ ಇಲಾಖೆಗೆ ಪರ‍್ಣ ಬೆಂಬಲ ನೀಡಬೇಕು ಎಂದರು.


ಕೋವಿಡ್ ಟೆಸ್ಟ್ ಗೆ ಅಂಜಿದ ಮಂದಿ.

ಅನಗತ್ಯ ಓಡಾಟಕ್ಕೆ ಪೋಲಿಸರು ಮತ್ತು ಆರೋಗ್ಯ ಇಲಾಖೆ ಕೋವಿಡ್ ಟೆಸ್ಟ್ ಮಾಡಿಸುವ ವಾಸನೆ ತಿಳಿದ ಬಹುತೇಕ ಬೈಕ್ ಸವಾರರು ಪಟ್ಟಣದ ಗಲ್ಲಿರಸ್ತೆಯ ಮೂಲಕ ಪ್ರಯಾಣಕ್ಕೆ ಮುಂದಾದರೆ. ಇನ್ನೂ ಕೆಲವರು ಪಟ್ಟಣದಲ್ಲಿ ಬೈಕ್ ನಿಲ್ಲಿಸಿ ತೆರೆ ಮರೆಯಲ್ಲಿ ಇದಿದ್ದು ಕಂಡುಬಂತು. ಇಲ್ಲ ಸಲ್ಲದ ಕಾರಣ ಹೇಳಿದರೂ ಪೋಲಿಸರು ಮಾತ್ರ ಗೌರವದಿಂದಲೇ ಕೋವಿಡ್ ಪರೀಕ್ಷೆಗೆ ಕಳಿಸುವ ಮೂಲಕ ಅನಗತ್ಯ ಓಡಾಟಕ್ಕೆ ಸ್ವಲ್ಪ ಮಟ್ಟಿಗೆ ಕಡಿವಾಣ ಹಾಕಿದರು.


Post a Comment

Previous Post Next Post