ಹಾಸನ :- ಪೋಲೀಸ್ ಇಲಾಖೆಗೆ ೧೦೧ ಸಂಚಾರಿ ಸೂಚನಾ ಫಲಕಗಳನ್ನು ಯಕ್ಷ ಇಂಟೀರಿಯರ್ಸ್ ಸಂಸ್ಥೆ ವತಿಯಿಂದ ಸಾರ್ವಜನಿಕರ ಅನುಕೂಲಕ್ಕಾಗಿ ಕೊಡುಗೆಯಾಗಿ ಗುರುವಾರದಂದು ಬೆಳಿಗ್ಗೆ ನಗರ ಎನ್ ಆರ್ ವೃತ್ತದಲ್ಲಿ ಹಸ್ತಾಂತರ ಮಾಡಿದರು. ಈ ನಾಮಫಲಕದಲ್ಲಿ ಜಾಹಿರಾತುಗಳನ್ನು ಹೆಚ್ಚು ಬಿಂಭಿಸಲಾಗಿರುವುದು ಸಾರ್ವಜನಿಕರು ದೂರಿದ್ದಾರೆ.
ಯಕ್ಷ ಇಂಟೀರಿಯರ್ ಸಂಸ್ಥೆಯ ಮಾಲೀಕರಾದ ಜಗದೀಶ್ ಅವರು ಮಾತನಾಡಿ, ಸಂಚಾರಿ ಸುರಕ್ಷತಾಗೆ ಅನುಕೂಲವಾಗುವಂತೆ ಈ ರೀತಿಯ ೧೦೧ ಸಂಚಾರಿ ಸೂಚನಾ ಫಲಕವನ್ನು ಪೋಲಿಸ್ ಇಲಾಖೆಗೆ ಹಸ್ತಾರಿಸಲಾಗಿದೆ ಎಂದರು.
ವೃತ್ತ ಪೊಲೀಸ್ ನಿರೀಕ್ಷಕರಾದ ರೇಣುಕಾಪ್ರಸಾದ್ ಅವರು ಮಾತನಾಡಿ, ಸಾರ್ವಜನಿಕರಿಗೆ ಜಾಗೃತಿ ಮೂಡಿಸುವುದಕ್ಕಾಗಿ ಮತ್ತು ಸಂಚಾರಿ ನಿಯಮಕ್ಕೆ ಅನುಕೂಲವಾಗುವಂತೆ ಸೂಚನಾ ಪಲಕ ನೀಡಿರುವುದಕ್ಕೆ ಧನ್ಯವಾದಗಳನ್ನು ಹೇಳಿದರು. ನಾಮ ಫಲಕ ಅಳವಡಿಸಲು ಈಗಾಗಲೇ ಪ್ರಮುಖ ಸ್ಥಳ ಗುರುತಿಸಿಲಾಗಿದ್ದು, ಆ ಸ್ಥಳಕ್ಕೆ ಹಾಕಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಚಾರಿ ಪೊಲೀಸ್ ಸಬ್ ಇನ್ಸ್ ಪೆಟ್ಟರ್ ಜಿತೇಂದ್ರ , ಮಂಜುಳಾ ಇತರರು ಉಪಸ್ಥಿತರಿದ್ದರು