ಹಾಸನ: ಕೃಷಿಕ್ ಸರ್ವೋದಯ ಫೌಂಡೇಶನ್ ಇವರವತಿಯಿಂದ ಬ್ಯಾಂಕಿAಗ್, ಐ.ಎ.ಎಸ್., ಕೆ.ಎ.ಎಸ್. ಎಫ್.ಡಿ.ಎ. ಸೇರಿದಂತೆ ಇತರೆ ಸ್ಪರ್ದಾತ್ಮಾಕ ಪರೀಕ್ಷೆಗಳಿಗೆ ೪ ತಿಂಗಳ ಅವಧಿಯ ತರಬೇತಿಯನ್ನು ಹಮ್ಮಿಕೊಳ್ಳಲಾಗಿದ್ದು, ಆಸಕ್ತ ಅರ್ಹ ಆಕಾಂಕ್ಷಿಗಳು ಜೂನ್ ೨೮ರ ಒಳಗೆ ಆನ್ ಲೈನ್ ಮೂಲಕ ಇಲ್ಲವೇ ವಾಟ್ಸಾಪ್ ಮೂಲಕ ನೋಂದಾಯಿಸಿಕೊಳ್ಳಬಹುದಾಗಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ಹೆಮ್ಮಿಗೆ ಮೋಹನ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಗುರುವಾರದಂದು ಮಾತನಾಡಿ, ಹಲವು ವರ್ಷಗಳಿಂದ ಕನ್ನಡಿಗರು ಬ್ಯಾಂಕಿAಗ್ ಪರೀಕ್ಷೆಗಳನ್ನು ಕನ್ನಡದಲ್ಲಿ ಬರೆಯುವುದರಿಂದ ವಂಚಿತರಾಗಿದ್ದು, ಕನ್ನಡಿಗರು ಬ್ಯಾಂಕಿAಗ್ ಪರೀಕ್ಷೆಗಳ ಬಗ್ಗೆ ಹೆಚ್ಚು ಆಸಕ್ತಿ ತೋರಿಸುತ್ತಿರಲಿಲ್ಲ. ಆದರೆ ಇದೇ ಮೊದಲ ಬಾರಿಗೆ ಕೇಂದ್ರ ಸರ್ಕಾರ ರೀಜನಲ್ ರೂರಲ್ ಬ್ಯಾಂಕ್‌ಗಳಲ್ಲಿರುವ ಖಾಲಿ ಹುದ್ದೆಗಳಿಗೆ ಕನ್ನಡ ಮಾಧ್ಯಮದಲ್ಲೇ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿದೆ. ನಮ್ಮ ರಾಜ್ಯದ ಪದವೀಧರ ಉದ್ಯೋಗಾಕಾಂಕ್ಷಿಗಳಿಗೆ ಮತ್ತು ಬ್ಯಾಂಕ್‌ಗಳಲ್ಲಿ ಕನ್ನಡದಲ್ಲಿಯೇ ಗ್ರಾಹಕರು ವ್ಯವಹರಿಸಲು ಅನುಕೂಲವಾಗುತ್ತದೆ. ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಆನ್ಲೆöÊನ್ ಅರ್ಜಿ ಹಾಕಿ ಈ ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು. ಆನ್‌ಲೈನ್ ಅರ್ಜಿ ಸಲ್ಲಿಸಲು ಕಡೆಯ ದಿನಾಂಕ ೨೦೨೧ ಜೂನ್ ೨೮ ಆಗಿದೆ. ಬ್ಯಾಂಕಿAಗ್ ಪರೀಕ್ಷೆಗಳಿಗಾಗಿ ಕೃಷಿಕ್ ಸರ್ವೊದಯ ಫೌಂಡೇಶನ್ ವತಿಯಿಂದ ನುರಿತ ವಿಷಯ ತಜ್ಞರಿಂದ ಆನ್‌ಲೈನ್ ತರಗತಿಗಳನ್ನು ೨೦೨೧ ಜುಲೈ ೧ ರಿಂದ ಪ್ರಾರಂಭಿಸಲಾಗುವುದು. ಇದರ ಜೊತೆಗೆ ಐ.ಎ.ಎಸ್, ಕೆ.ಎ.ಎಸ್, ಎಫ್.ಡಿ.ಎ / ಎಸ್.ಡಿ.ಎ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ೪ ತಿಂಗಳ ಅವಧಿಯ ತರಬೇತಿ ಕಾರ್ಯಕ್ರಮವನ್ನು ಜುಲೈ ಒಂದರಿAದ ಪ್ರಾರಂಭಿಸಲಾಗುತ್ತಿದ್ದು, ಆಸಕ್ತ ಅರ್ಹ ಆಕಾಂಕ್ಷಿಗಳು ದಿನಾಂಕ ಜೂನ್ ೨೮ರ ಒಳಗೆ WWW.ಞಡಿishiಞsಚಿಡಿvoಜಚಿಥಿಚಿಜಿouಟಿಜಚಿಣioಟಿ.oಡಿg ಮೂಲಕ ಅಥವಾ ಮೊಬೈಲ್ ಸಂಖ್ಯೆ ೯೯೧೦೩೪೪೩೩೨ / ೮೬೬೦೨೧೭೭೩೯ ಕ್ಕೆ ಕರೆ ಮಾಡಿ / ವಾಟ್ಸ್ ಆಪ್ ಮಾಡಿ ಹೆಸರು ನೋಂದಾಯಿಸಿಕೊಳ್ಳಲು ಕೋರಲಾಗಿದೆ ಎಂದು ಹೇಳಿದರು.
ಕೃಷಿಕ್ ಸರ್ವೋದಯ ಫೌಂಡೇಶನ್ ಒಂದು ನೊಂದಾಯಿತ ಧರ್ಮಾರ್ಥ ಸಂಸ್ಥೆ. ಇದನ್ನು ೧೯೯೨ ರಲ್ಲಿ ಐ.ಎ.ಎಸ್, ನಿವೃತ್ತ ಮಾಜಿ ಅಧ್ಯಕ್ಷರು ಮತ್ತು ಕರ್ನಾಟಕ ಲೋಕಸೇವಾ ಆಯೋಗ ಡಾ.ವೈ.ಕೆ. ಪುಟ್ಟಸೋಮೇಗೌಡರು ಇವರ ಅಧ್ಯಕ್ಷತೆಯಲ್ಲಿ ಸಮಾನ ಮನಸ್ಕರ ಹಿರಿಯ ಐ.ಏ.ಎಸ್, ಐ.ಎಫ್.ಎಸ್ ಅಧಿಕಾರಿಗಳು, ವಿಶ್ವವಿದ್ಯಾಲಯಗಳ ಕುಲಪತಿಗಳು, ವಿದ್ಯಾಸಂಸ್ಥೆ ಪೋಷಕರು ಸೇರಿ ಗ್ರಾಮೀಣ ಪ್ರದೇಶದ ಪ್ರತಿಭಾವಂತ ಯುವಕ / ಯುವತಿಯರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಆತ್ಮಸ್ಥೆರ್ಯದಿಂದ ಭಾಗವಹಿಸುವ ಬಗ್ಗೆ ತರಬೇತಿ ನೀಡಿ ಅವರ ಜೀವನವನ್ನು ರೂಪಿಸಿಕೊಳ್ಳಲು ಅನುವು ಮಾಡಿಕೊಡುವ ಮಹತ್ತರವಾದ ಆಸೆ ಆಕಾಂಕ್ಷೆಗಳನ್ನು ಹೊತ್ತು ಈ ಸಂಸ್ಥೆಯನ್ನು ಸ್ಥಾಪಿಸಲಾಗಿದೆ ಎಂದರು. ಗ್ರಾಮೀಣ ಭಾಗದಿಂದ ಬರುವ ಪ್ರತಿಭಾನ್ವಿತ ವಿದ್ಯಾವಂತ ಯುವಕ / ಯುವತಿಯರಿಗೆ ಅಖಿಲ ಭಾರತ ಮಟ್ಟದ ಆಡಳಿತ ಸೇವೆಗಳಾದ ಐ.ಪಿ.ಎಸ್, ಐ.ಪಿ.ಎಸ್, ಐ.ಎಫ್.ಎಸ್, ರಾಜ್ಯ ಸೇವೆಗಳಾದ ಕೆ.ಪಿ.ಎಸ್ , ಕೆ.ಪಿ.ಎಸ್.ಕಾಲೇಜು ಉಪನ್ಯಾಸಕರು, ಶಾಲಾ ಶಿಕ್ಷಕರು, ಪ್ರಥಮ ದರ್ಜೆ / ದ್ವಿತೀಯ ದರ್ಜೆ ಸಹಾಯಕರು, ಪಿ.ಡಿ.ಓ, ಪಿ.ಸಿ, ಪಿ.ಎಸ್.ಐ, ಬ್ಯಾಂಕಿAಗ್ ಮುಂತಾದ ಹುದ್ದೆಗಳನ್ನು ಯಶಸ್ವಿಯಾಗಿ ಎದುರಿಸಲು ಸಹಾಯಕವಾಗುವ ರೀತಿಯಲ್ಲಿ ಮಾರ್ಗದರ್ಶನ ಮತ್ತು ತರಬೇತಿ ನೀಡುವುದು ಉದ್ದೇಶವಾಗಿದೆ. ಗ್ರಾಮೀಣ ಪ್ರದೇಶದಿಂದ ಬಂದು ಉನ್ನತ ವ್ಯಾಸಂಗ ಮಾಡುತ್ತಿರುವ ಬಡ ಅರ್ಹ ವಿದ್ಯಾರ್ಥಿಗಳಿಗೆ ಶಿಷ್ಯವೇತನ ನೀಡಿ ಪ್ರೋತ್ಸಾಹಿಸುವುದು ಮತ್ತು ವಿದ್ಯಾರ್ಥಿನಿಲಯದ ಅವಕಾಶ ಕಲ್ಪಿಸುವುದು ಸಂಸ್ಥೆಯ ಮೂಲ ಉದ್ದೇಶವಾಗಿದೆ . ಬೆಂಗಳೂರು ಮತ್ತು ಮೈಸೂರು ಶಾಖೆಗಳಲ್ಲಿ ಐ.ಎ.ಎಸ್ / ಕೆ.ಎ.ಎಸ್ , ಬ್ಯಾಂಕಿಗ್ , ಎಫ್.ಡಿ.ಎ / ಎಸ್.ಡಿ.ಎ , ಪಿ.ಎಸ್.ಐ.ಪಿ.ಸಿ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ನುರಿತ ವಿಷಯ ತಜ್ಞರಿಂದ ತರಬೇತಿ ಪಡೆದು ರಾಷ್ಟç ಮತ್ತು ರಾಜ್ಯ ಮಟ್ಟದಲ್ಲಿ ಹುದ್ದೆಗಳನ್ನು ಅಲಂಕರಿಸಿರುತ್ತಾರೆ. ಇದೇ ನಿಟ್ಟಿನಲ್ಲಿ ನಮ್ಮ ಹಾಸನ ಶಾಖೆಯು ಸ್ವಂತ ಕಟ್ಟಡದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗಾಗಿ ೨೫ ಹಾಸಿಗೆಯುಳ್ಳ ಉಚಿತ ವಸತಿ ನಿಲಯ, ಎರಡು ತರಗತಿ ಕೊಠಡಿಗಳು, ಉಚಿತ ಗ್ರಂಥಾಲಯ ಮತ್ತು ಕಂಪ್ಯೂಟರ್ ತರಬೇತಿ ಕೇಂದ್ರ ಹಾಗೂ ಇಂಟರ್‌ನೆಟ್ ಸೌಲಭ್ಯ ಹೊಂದಿದೆ. ಹಾಸನ ಶಾಖೆಯ ವಿಳಾಸ : ಕೃಷಿಕ್ ಸರ್ವೊದಯ ಫೌಂಡೇಶನ್ (ರಿ) ಹಾಸನ ಶಾಖೆ, ಮೊದಲನೇ ಮಹಡಿ, ಕೃಷಿಕ್ ಸರ್ವೋದಯ ಭವನ, ಸಾಲಗಾಮೆ ರಸ್ತೆ ಹಾಸನ ಎಂದು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಕಮಿಟಿ ಸದಸ್ಯ ಬೋರೇಗೌಡ, ನಿರ್ದೇಶಕ ಸುಬ್ಬಸ್ವಾಮಿ, ಕೋಆರ್ಡಿನೇಟರ್ ಗುಡ್ಡೇಗೌಡ, ಶಿವಣ್ಣ ಇತರರು ಉಪಸ್ಥಿತರಿದ್ದರು.