ಹಾಸನ: ತನಗೊಂದು ಪ್ರಚಾರ ಬೇಕು ಎನ್ನುವ ನಿಟ್ಟಿನಲ್ಲಿ ಬ್ರಾಹ್ಮಣ ಪದಗಳ ಅರ್ಥವನ್ನೇ ತಿಳಿದುಕೊಳ್ಳದೇ ನಮ್ಮ ಸಮುದಾಯವನ್ನು ಆಧ್ಯಾತ್ಮಿಕ ಭಯೋತ್ಪಾದಕರು, ದಬ್ಬಾಳಿಕೆ ಎಂದೆಲ್ಲಾ ಪದಗಳನ್ನು ಬಳಸಿ ನಿಂಧಿಸಿರುವ ಚಿತ್ರನಟ ಚೇತನ್ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ಹಾಸನ ಜಿಲ್ಲಾ ಬ್ರಾಹ್ಮಣ ಸಭಾದಿಂದ ಜಿಲ್ಲಾಡಳಿತಕ್ಕೆ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಛೇರಿಗೆ ಮನವಿ ಸಲ್ಲಿಸಲಾಯಿತು.
ಬ್ರಾಹ್ಮಣ ಸಮಾಜ ಮತ್ತು ನಿಷ್ಠಾವಂತ ಬ್ರಾಹ್ಮಣ ಸಮುದಾಯ ಎಂದರೆ ಸರ್ವೆ ಜನಾಃ ಸುಖನೋ ಭವಂತು ಎಂಬ ತತ್ವವನ್ನು ಅಳವಡಿಸಿಕೊಂಡೇ ಜೀವನೋಪಾಯಕ್ಕಾಗಿ ತಂತಮ್ಮ ಕೆಲಸಗಳನ್ನು ಮಾಡುತ್ತಾ, ಎಲ್ಲರ ಹಿತಚಿಂತನೆ ಬಯಸುತ್ತಲೇ ಕರ್ತವ್ಯ ನಿರ್ವಹಿಸುತ್ತಾ ಇದ್ದರೂ ಸಹ ಬ್ರಾಹ್ಮಣ ಸಮಾಜದ ಕುರಿತು ಅವಹೇಳನಕಾರಿ ಮಾತುಗಳನ್ನು ತಮ್ಮ ಪ್ರಚಾರದ ತೆವಲಿಗಾಗಿ ಆಡುತ್ತಲೇ ಇದ್ದಾರೆ. ಇತ್ತೀಚೆಗಷ್ಟೇ ತಾನೊಬ್ಬ ಚಿತ್ರನಟ ತನಗೊಂದು ಪ್ರಚಾರ ಬೇಕು ಎಂಬ ದೃಷ್ಟಿ ಬ್ರಾಹ್ಮಣರಣನ್ನು ಆಧ್ಯಾತ್ಮಿಕ ಭಯೋತ್ಪಾದಕರು, ಸಾರಾಸಗಟಾಗಿ ಬ್ರಾಹ್ಮಣ್ಯದ ದಬ್ಬಾಳಿಕೆ ಎಂದೆಲ್ಲಾ ಪದಗಳನ್ನು ಬಳಸಿ ನಿಂದಿಸಿರುವುದು ನಮ್ಮ ಸಮಾಜದ ಸರ್ವರಿಗೂ ಮಾನಸಿಕ ಆಘಾತ ಉಂಟಾಗಿದೆ ಎಂದು ಬೇಸರವ್ಯಕ್ತಪಡಿಸಿದರು. ಭಯೋತ್ಪಾದನೆಗೂ, ಬ್ರಾಹ್ಮಣ್ಯಕ್ಕೂ, ಆಧ್ಯಾತ್ಮಿಕತೆಗೂ ಎತ್ತಣಿಂದೆತ್ತ ಸಂಬAಧ ಎಂದು ಅಚ್ಚರಿಯಿಂದ ನೋಡುವಂತೆ ಮಾಡಿದೆ. ಇಷ್ಟೇ ಸಾಲದು ಎಂಬAತೆ ಸಾಮಾಜಿಕ ಜಾಲತಾಣಗಳಲ್ಲಿ ಬಿತ್ತರವಾಗಿ ಹರಿದಾಡುತ್ತಲೇ ಇರುವ ಮತ್ತೆರಡು ವಿಚಾರಗಳೆಂದರೆ ಮೌಲಾನಾ ತೌಫಿಕ್ ಪಾರ್ಕರ್ ಎಂಬ ವ್ಯಕ್ತಿ ' ಬ್ರಾಹ್ಮಣತ್ವದ ವಿರುದ್ಧ ಸಮರ ಸಾರಿರುವ ಬೇತನ್‌ಗೆ ಬೆಂಬಲ ಸೂಚಿಸಿ ಪೋಸ್ಟರ್ ಒಂದನ್ನು ಹಾಕಿ ಅದರಲ್ಲಿ ತನ್ನನ್ನು ರಾಷ್ಟಿçÃಯ ಮುಸ್ಲಿಂ ಮೋರ್ಚಾದ ಕರ್ನಾಟಕ ರಾಜ್ಯ ಅಧ್ಯಕ್ಷ ಎಂಬುದಾಗಿ ಪರಿಚಯಿಸಿ ಕೊಂಡಿರುವುದಲ್ಲದೆ ತಮ್ಮ ದೂರವಾಣಿ ಸಂಖ್ಯೆಯನ್ನೂ ಹಾಕಿಕೊಂಡಿದ್ದಾರೆ ಎಂದರು.
ಅದೇ ರೀತಿ ಶಿವಮೊಗ್ಗದ ವಿಪ್ರಯುವ ಪರಿಷತ್ ಪ್ರಧಾನ ಕಾರ್ಯದರ್ಶಿ ಮಿಥುನ್ ಅಯ್ಯಂಗಾರ್ ಎಂಬುವವರು ಮತ್ತೊಬ್ಬರೊಡನೆ ಮಾತನಾಡಿದ ಮಾತುಕತೆಯ ವಿಚಾರಗಳು ಹರಿದಾಡುತ್ತಿದ್ದು, ಅದರಲ್ಲಿ ಮಾತನಾಡಿದ ವ್ಯಕ್ತಿ 'ಬ್ರಾಹ್ಮಣ ಮುಕ್ತ ಸಮಾಜ ನಮ್ಮ ಗುರಿ' ಎಂಬ ಮಾತುಗಳನ್ನು ಆಡಿರುವುದು ಅತ್ಯಂತ ದುರದೃಷ್ಟಕರ ವಿಷಯ. ಜೊತೆಗೆ ತೌಫಿಕ್ ಪಾರ್ಕರ್ ಅವರು ಹಾಕಿರುವ ಪೋಸ್ಟರ್ನಲ್ಲಿ ಇರುವ ನಂಬರ್ ತಮ್ಮದೇ ಎಂದು ಹೇಳಿಕೊಂಡಿದ್ದಾರೆ. ಟೂ ಕಾಲರ್ ಎಂಬ ಆಪ್ ನಲ್ಲಿ ಆ ಸಂಖ್ಯೆಯನ್ನು ನೋಡಿದರೆ ರಾಷ್ಟಿçÃಯ ಲಿಂಗಾಯತ್ ಮೋರ್ಚಾ ಕರ್ನಾಟಕ ಎಂದು ತೋರಿಸುತ್ತದೆ. ಇದು ಯಾರ ನಂಬರ್ ಎಂಬುದೂ ನಿರ್ಧಾರವಾಗಬೇಕಿದೆ. ಮಾನಸಿಕವಾಗಿ ಸದೃಢರಾದರೂ ಸಂಖ್ಯಾದೃಷ್ಟಿಯಿAದ ಅತ್ಯಂತ ಪ್ರಬಲರಲ್ಲದ ಬ್ರಾಹ್ಮಣರ ಮೇಲೆಯೇ ಈ ರೀತಿಯ ಸಾಮಾಜಿಕ ಶಾಬ್ದಕ ದಾಳ ನಿರಂತರ ನಡೆಯುತ್ತಿರುವುದು ಖಂಡನೀಯ. ಬ್ರಾಹ್ಮಣರನ್ನು ತುಳಿದರೆ ಹಿಂದೂ ಧರ್ಮವನ್ನು ವಿಭಜಿಸುವ ಹುನ್ನಾರ ಇದಾಗಿದೆ ಎಂದು ದೂರಿದರು.
ಈಗಾಗಲೇ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರು ಚೇತನ್ ವಿರುದ್ಧ ದೂರು ದಾಖಲಿಸಿದ್ದು, ತ್ವರಿತಗತಿಯಲ್ಲಿ ವಿಚಾರಣೆಯಾಗಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವತ್ತ ಪ್ರಕ್ರಿಯೆಗಳು ಶೀಘ್ರವಾಗಿ ಆಗಬೇಕು. ಜೊತೆಗೆ ಚೇತನ್ ಸೈಕ ಭಾರತೀಯ ಸಂಜಾತನೇ ಅಲ್ಲ ಎಂಬ ಉಲ್ಲೇಖವನ್ನು ಮಾಡಿ ಗಿರೀಶ್ ಭಾರದ್ವಾಜ್ ಎಂಬುವವರು ವಿದೇಶೀಯರ ಪ್ರಾದೇಶಿಕ ನೋಂದಣಿ ಅಧಿಕಾರಿಗೂ ಸಹ ದೂರು ನೀಡಿರುತ್ತಾರೆ. ಇದನ್ನೂ ಗಮನಿಸಿ ಆತನ ಪಾಸ್ಪೋರ್ಟ್ ಮತ್ತು ವೀಸಾ ರದ್ದುಗೊಳಿಸಬೇಕು ಎಂದೂ ಮನವಿ ಮಾಡುತ್ತೇವೆ. ಅಲ್ಲದೆ ಚಿತ್ರನಟ ಚೇತನ್, ಮೌಲಾನಾ ತೌಫಿಕ್ ಪಾರ್ಕರ್ ಮಿಥುನ್ ಅಯ್ಯಂಗಾರ್ ಅವರೊಡನೆ ದೂರವಾಣಿಯಲ್ಲಿ ಮಾತನಾಡಿರುವ ವ್ಯಕ್ತಿಯ ವಿರುದ್ಧ ಕಾನೂನು ಕ್ರಮ ಕೈಗೊಂಡು ಸೂಕ್ತ ಶಿಕ್ಷೆಯಾಗುವಂತೆ ಮಾಡಿ, ಯಾವುದೇ ಸಮಾಜದ ವಿರುದ್ಧ ಯಾರೂ ಅನವಶ್ಯಕವಾಗಿ ಆಧಾರರಹಿತವಾಗಿ ಮಾತನಾಡಬಾರದು ಎಂಬ ಸಂದೇಶ ಎಲ್ಲರಿಗೂ ತಿಳಿಯುವಂತೆ ಮಾಡಲು ಮನವಿ ಮಾಡಲಾಯಿತು.
ಇದೆ ವೇಳೆ ಐ.ಎಂ.ಎ. ಅಧ್ಯಕ್ಷ ಡಾ. ರಮೇಶ್, ಬಬ್ಬೂರು ಕಮ್ಮೆ ಸಂಘದ ಅಧ್ಯಕ್ಷ ಕೆ.ಎಸ್. ನಾಗರಾಜ್, ನಗರ ಬಿಜೆಪಿ ಅಧ್ಯಕ್ಷ ವೇಣುಗೋಪಾಲ್, ಹಾಸನ ಜಿಲ್ಲಾ ಬ್ರಾಹ್ಮಣ ಸಭಾದ ಪ್ರಧಾನ ಕಾರ್ಯದರ್ಶಿ ಟಿ.ಹೆಚ್. ಚಂದ್ರಶೇಖರ್, ಸಹ ಕಾರ್ಯದರ್ಶಿ ಪ್ರಸಾದ್, ವಕೀಲರಾದ ಎನ್.ಎಸ್. ಗೋಪಾಲ್, ಕೌಶಿಕ ಸಂಕೇತಿ ಸಭಾದ ಎ.ಎಸ್. ನಾಗರಾಜ್, ಆರ್. ಗೋಪಾಲ್, ಅರುಣ್, ಪ್ರಣವ್ ಇತರರು ಉಪಸ್ಥಿತರಿದ್ದರು.