ಹಾಸನ: ಹೆಚ್.ಡಿ. ದೇವೇಗೌಡರನ್ನು ಪ್ರಧಾನಿಯಿಂದ ಕೆಳಗಿಳಿಸಿದ ಶಾಪ ಪಕ್ಷಕ್ಕೆ ಈ ಪರಿಸ್ಥಿತಿ ಬಂದಿದ್ದು ಎಂದು ಕಾಂಗ್ರೆಸ್ ವಿರುದ್ಧ ವಿರೋಧ ಹೇಳಿಕೆ ನೀಡಿ, ಆದರೇ ಸಿದ್ದರಾಮಯ್ಯ ಇರುವದರಿಂದ ಪಕ್ಷ ಉಳಿದುಕೊಂಡಿದೆ ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣ ಮಾಜಿ ಸಿಎಂ ಪರ ಬ್ಯಾಟಿಂಗ್ ಮಾಡಿ ಗಮನಸೆಳೆದರು.
ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಇರುವುದರಿಂದಲೇ ಕಾಂಗ್ರೆಸ್ ಉಳಿದಿದೆ. ಅವರು ಏನಾದರೂ ಕೈಬಿಟ್ಟರೇ ಪಕ್ಷವನ್ನು ಯಾರು ಮುಳುಗಿಸಬೇಕಾಗಿಲ್ಲ. ಕಾಂಗ್ರೆಸ್ ಪಕ್ಷ ತಾನಾಗಿಯೇ ಮುಳುಗಿ ಹೋಗುತ್ತದೆ. ನಾನೇನು ಇದ್ದದ್ದು ಇದ್ದಂಗೆ ಹೇಳ್ತಿನಿ ಎಂದು ಕಾಂಗ್ರೆಸ್ ಪಕ್ಷವನ್ನು ವಿರೋದಿಸುತ್ತಲೆ ಕೈ ನಾಯಕ ಸಿದ್ದು ಪರ ರೇವಣ್ಣ ಮೆಚ್ಚುಗೆಯ ಮಾತನಾಡಿದರು. ಹೆಚ್.ಡಿ. ದೇವೇಗೌಡರನ್ನ ಮತ್ತು ಹೆಚ್.ಡಿ. ಕುಮಾರಸ್ವಾಮಿಯಣ್ಣನನ್ನ ಮುಗಿಸಿದ್ದು ಕಾಂಗ್ರೆಸ್. ಸಿದ್ದರಾಮಯ್ಯ ಇರೋದಕ್ಕೆ ಕಾಂಗ್ರೆಸ್ ಗೆ ೭೦ ಸೀಟು ಬಂದಿದೆ. ಸಿದ್ದರಾಮಯ್ಯರನ್ನ ಬಿಟ್ಟರೆ ಕಾಂಗ್ರೆಸ್ ಝೀರೊ ಸಂಖ್ಯೆಗೆ ಇಳಿಯುತ್ತದೆ. ದೇವೇಗೌಡರನ್ನ ಪ್ರಧಾನಿ ಹುದ್ದೆಯಿಂದ ಕೆಳಗಿಳಿಸಿದ ಶಾಪದಿಂದಲೇ ಕಾಂಗ್ರೆಸ್ ಪಕ್ಷಕ್ಕೆ ಈ ಪರಿಸ್ಥಿತಿ ಬಂದಿದೆ ಎಂದು ರೇವಣ್ಣ ಆಕ್ರೋಶವ್ಯಕ್ತಪಡಿಸಿದರು.
ಗೃಹ ಸಚಿವರ ಬೇಟಿ ಮಾಡಿದ ವಿಚಾರವಾಗಿ ಮಾತನಾಡಿದ ರೇವಣ್ಣನವರು, ನಮ್ಮ ಹೊಳೆನರಸೀಪುರದಲ್ಲಿ ಪೊಲೀಸ್ ಠಾಣೆ ಕಟ್ಟಡದ ಕಾಮಗಾರಿ ನಡೆಯುತ್ತಿದ್ದು, ಅದು ಅರ್ಧಂಬರ್ದ ಕೆಲಸ ಆಗಿದೆ. ಹಾಗಾಗಿ ಹೋಗಿದ್ದೆನು. ನೀನು ನನ್ನ ಸ್ನೇಹಿತ ಅದ್ರೆ ಮಾಡಿಕೊಡಿ ಎಂದು ಕೇಳಿಕೊಂಡೆ. ಅವರ ಭೇಟಿ ವೇಳೆ ಯಾವುದೇ ರಾಜಕೀಯ ಚರ್ಚೆ ಮಾಡಿರುವುದಿಲ್ಲ. ರಾಜಕೀಯ ಚರ್ಚೆ ಮಾಡೋಕೆ ನಾನೇನುರಾಷ್ಟ್ರೀಯನಾಯಕನಾ? ಗೃಹ ಸಚಿವರು ಹಾಗು ನನ್ನ ಭೇಟಿ ಹಿಂದೆ ರಾಜಕೀಯ ಉದ್ದೇಶ ಇಲ್ಲಾ ಎಂದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು.
ರಾಜ್ಯದಲ್ಲಿ ಇನ್ನು ಕೊರೊನಾ ಕಡಿಮೆಯಾಗಿರುವುದಿಲ್ಲ. ಇಂತಹ ಕಾಲದಲ್ಲಿ ಕಾಂಗ್ರೆಸ್ ಪಕ್ಷದವರು ಪೆಟ್ರೋಲ್ ಡಬ್ಬ ಹಿಡಿಯೋದು ಬೇಡಾ! ಇವರಿಗೆ ಜನರ ಪ್ರಾಣ ಮುಖ್ಯ ಅಲ್ಲಾ, ಅದರಲ್ಲೂ ಪ್ರಚಾರ ಗಿಟ್ಟಿಸಿಕೊಳ್ಳುವುದು ಮುಖ್ಯ. ರಾಜ್ಯದಲ್ಲಿ ಬಿಜೆಪಿ ಅದಿಕಾರಕ್ಕೆ ಬರಲು ಕಾಂಗ್ರೆಸ್ ಕಾರಣ. ಎರಡೂ ರಾಷ್ಟ್ರೀಯ ಪಕ್ಷಗಳು ಪ್ರಾದೇಶಿಕ ಪಕ್ಷ ಮುಗಿಸಲು ಹೊರಟಿದ್ದಾರೆ. ಕಾಂಗ್ರೆಸ್ ನವರು ಎ ಟೀಂ, ಬಿ ಟೀಂ ಅಂದ್ರು.ಆಮೇಲೆ ನಮ್ಮನ್ನೇ ಬಂದು ತಬ್ಬಿಕೊಂಡರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಬಿಜೆಪಿಯ ಬಿಟೀಂ ಎಂದಿದ್ದ ಕೈ ನಾಯಕರ ವಿರುದ್ದ ರೇವಣ್ಣ ಅಸಮಧಾನವ್ಯಕ್ತಪಡಿಸಿದರು.
ಪ್ರತಿದಿನ ಜನರು ಸಾಯುತ್ತಿದ್ದಾರೆ. ನಿತ್ಯ ಐದುನೂರು, ಆರು ನೂರು ಜನರು ಸಾಯುತ್ತಿದ್ದಾರೆ. ಕಳೆದ ಎರಡು ದಿನಗಳಿಂದ ಕೊರೋನಾ ಕಡಿಮೆ ಆಗಿದ್ದು, ಇದುವರೆಗೂ ರಾಜ್ಯದ ೩೨ ಸಾವಿರ ಕುಟುಂಬಗಳು ಬೀದಿಪಾಲಾಗಿವೆ. ಕೋವಿಡ್ ನಿಂದ ಮೃತರಾದ ಕುಟುಂಬಗಳಿಗೆ ಪರಿಹಾರ ಕೇಳಿದ್ದು ನಾವೇ. ಕಾಂಗ್ರೆಸ್ ನವರು ಪರಿಹಾರ ಕೇಳಿದ್ರಾ?.. ಬಡವರ ಕಾಳಜಿ ಇರೋದಕ್ಕೆ ನಾವು ಕೇಳಿದ್ದೆವು. ಸರ್ಕಾರ ಸ್ವಲ್ಪವಾದರೂ ನೆರವಾಗಿದೆ ಎಂದರು.
ಅರುಂದತಿ ಎನ್ನೋರನ್ನ ಲಸಿಕೆ ವಿಭಾಗಕ್ಕೆ ನಿಯೋಜನೆ ಮಾಡಲಾಗಿದೆ. ಅವರಿಗೆ ಬಡವರ ಬಗ್ಗೆ ಕಾಳಜಿ ಇದ್ಯೇನ್ರಿ? ಇಂತಹವರನ್ನ ಬದಲಾಯಿಸಿ. ವ್ಯಾಕ್ಸಿನ್ ವಿತರಣೆಯಲ್ಲಿ ಅನ್ಯಾಯ ಆಗುತ್ತಿದೆ ಎಂದು ಗಂಭೀರವಾಗಿ ಆರೋಪಿಸಿದರು. ಕಾಂಗ್ರೆಸ್ ನವರಿಗೆ ಎರಡು ವರ್ಷದಿಂದ ಮೇವು ಕಡಿಮೆಯಾಗಿದೆ. ಹಾಗಾಗಿ ಎಷ್ಟೊತ್ತಿಗೆ ಅಧಿಕಾರಕ್ಕೆ ಬರ್ತೀವೊ ಎಂದು ಪರದಾಡುತ್ತಿದ್ದಾರೆ. ಎರಡೂ ರಾಷ್ಟಿçÃಯ ಪಕ್ಷಗಳು ಅಧಿಕಾರಕ್ಕಾಗಿ ಹೋರಾಡುತ್ತಿದೆ. ನಮ್ಮ ಜಿಲ್ಲೆಗೆ ಬಂದು ಸುಮ್ಮನೆ ಪಕ್ಷ ಸಂಘಟನೆ ಮಾಡಿ ಗಂಭೀರವಾಗಿ ಹೋಗಲಿ ಎಮದು ನಾನು ಡಿ.ಕೆ. ಸುರೇಶ್ ಅವ್ರಿಗೆ ಹೇಳೋದು ಇಷ್ಟೆ. ಅವರು ಇಂತಹ ಸಂಕಷ್ಟಕಾಲದಲ್ಲಿ ಇರುವಾಗ ಸುಮ್ಮನೇ ಆರೋಪ ಮಾಡೋದು ಸರಿ ಅಲ್ಲ. ನೆನ್ನೆ ಟಿವಿನಲ್ಲಿ ಯಾರೋ ಹೇಳಿದ್ದಾರೆ ಈ ವಯ್ಯಸ್ಸಲ್ಲಿ ಅವ್ರನ್ನೇಕೆ ತೆಗೆಯೋಕೆ ಹೋಗ್ತಿರಿ ಅಂತ. ಕಾಂಗ್ರೆಸ್ ಯಾವ ಪರಿಸ್ಥಿತಿ ಇದೆ ಅಂದ್ರೆ .ಬೆಳಗ್ಗೆ ಎದ್ರೆ ಕೆಲ ನಾಯಕರು ಮುಖ್ಯಮಂತ್ರಿ ಮನೆಗೆ ಹೋಗ್ತಾರೆ. ರಾಮನಗರದಲ್ಲಿ ಅವ್ರನ್ನ ಎಮ್ ಪಿ ಮಾಡಲಿಲ್ವ? ಅಧ್ಯಕ್ಷರಿದ್ದೀರಿ ಗಂಭೀರವಾಗಿ ಪಕ್ಷ ಸಂಘಟನೆ ಮಾಡಲಿ. ಸಂಸದರು ಈರೀತಿ ಹೇಳಿಕೆ ನೀಡಿದ್ರೆ ನಿಮ್ಮ ಬಾಲ ಬಿಚ್ಚಬೇಕಾಗುತ್ತೆ. ಸಿಎಮ್ ಮನೆ ಬಾಗಿಲಿಗೆ ಗೋಗಿ ಕುರ್ಚಿ ಉಳಿಸೋಕೆ ಹೋಗಿಲ್ಲ. ಕಾಂಗ್ರೆಸ್ ಮುಖಂಡರುಗಳೇ ಮುಖ್ಯಮಂತ್ರಿ ಉಳಿಬೇಕು ಅಂತ ಹೇಳಿದ್ದಾರೆ. ಯಡಿಯೂರಪ್ಪ ಹಾಸನಕ್ಕೆ ಬಂದಿದ್ದು ಕುರ್ಚಿಉಳಿಸಿಕೊಳ್ಳಲು ಬಂದ್ರು ಅಂತ ಇವರಿಗೆ ಹೇಗೆ ಗೊತ್ತು ಎಂದು ಟಾಂಗ್ ನೀಡಿ ಕಿಡಿಕಾರಿದರು.