ಸತ್ಯಮಂಗಲ ಗ್ರಾಪಂ ವ್ಯಾಪ್ತಿ ಕೊರೋನಾ ವಾರಿಯರ್ಸ್ಗೆ ಹೇಮಾ ಮೋಹನ್ ಅವರಿಂದ ಆಹಾರದ ಕಿಟ್ ವಿತರಣೆ

ಹಾಸನ: ತಾಲೂಕಿನ ಸತ್ಯಮಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೊರೋನಾ ವಾರಿಯರ್ಸ್ ಆಗಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗಳಿಗೆ ಮತ್ತು ಆಶಾ ಕಾರ್ಯಕರ್ತೆಯರಿಗೆ ದಿನನಿತ್ಯ ಉಪಯೋಗಿಸುವ ಆಹಾರದ ಕಿಟ್ ಮತ್ತು ತರಕಾರಿಯನ್ನು ಗ್ರಾಪಂ ಮಾಜಿ ಅಧ್ಯಕ್ಷೆ ಹೇಮಾ ಮೋಹನ್ ಹಾಗೂ ರಂಗೇಗೌಡರ ಕುಟುಂಬದವರು ವಿತರಣೆ ಮಾಡಿದರು.


     ನಂತರ ಮಾತನಾಡಿದ ಸತ್ಯಮಂಗಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹೆಚ್.ಎಸ್. ಹೇಮಾ ಮೋಹನ್ ಕುಮಾರ್, ಅವರು, ನಮ್ಮ ಮೊಮ್ಮಗಳು ಹುಟ್ಟಿದ್ದು, ಈವೇಳೆ ಸಿಹಿ ಕೊಟ್ಟರೇ ಯಾವ ಪ್ರಯೋಜನವಿಲ್ಲ. ಆದ್ದರಿಂದ ಕೊರೋನಾ ಆವರಿಸಿ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅದರಲ್ಲೂ ನಮ್ಮ ಗ್ರಾಪಂನಲ್ಲಿ ಕರ್ತವ್ಯ ನಿರ್ವಹಿಸುವ ಕೊರೋನಾ ವಾರಿಯರ್ಸ್ಗಳು ತಮ್ಮ ಜೀವದ ಅಂಗನ್ನು ತೊರೆದು ಕೆಲಸ ಮಾಡುತ್ತಿದ್ದಾರೆ. ಪಂಚಾಯಿತಿ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುವ ಎಲ್ಲಾರನ್ನು ಕರೆದು ವಯಕ್ತಿಕವಾಗಿ ಪುಡ್ ಕಿಟ್ ನ್ನು ಕೊಡಲಾಗುತ್ತಿದೆ ಎಂದರು. ಮನುಷ್ಯನಿಗೆ ತನ್ನಲ್ಲಿರುವುದನ್ನು ಮತ್ತೊಬ್ಬರಿಗೆ ಕೊಡುವ ಶಕ್ತಿ ಇದ್ದಾಗ ಕೊಡಲು ಹಿಂಜರಿಯಬಾರದು. ಈ ನಿಟ್ಟಿನಲ್ಲಿ ನಮ್ಮ ಈ ಚಿಕ್ಕ ಸೇವೆ ಮತ್ತೊಬ್ಬರಿಗೆ ಪ್ರೇರಣೆ ಆಗಬೇಕು ಎಂದು ಅಭಿಪ್ರಾಯಪಟ್ಟರು. ಕೊರೋನಾ ವೇಳೆ ಎಲ್ಲಾರಿಗೂ ರಜೆ ಇದ್ದರೇ, ಪಂಚಾಯಿತಿಯಲ್ಲಿ ಕರ್ತವ್ಯ ನಿರ್ವಹಿಸುವ ಸ್ವಚ್ಛತಾಗಾರರು, ನೀರುಗಂಟೆಗಳು, ಆಶಾ ಕಾರ್ಯಕರ್ತೆಯರು ನಿರಂತರವಾಗಿ ತಮ್ಮ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಇದೆ ವೇಳೆ ನೆನಪಿಸಿಕೊಂಡರು.

      ಇದೆ ವೇಳೆ ನಗರಾಭೀವೃದ್ಧಿ ಪ್ರಾಧಿಕಾರದ ಮಾಜಿ ನಿರ್ದೇಶಕ ಎಸ್.ಆರ್. ಮೋಹನ್ ಕುಮಾರ್, ಎಸ್.ಆರ್. ವೆಂಕಟೇಶ್, ಎಸ್.ಆರ್. ರಮೇಶ್, ಕುಮಾರಸ್ವಾಮಿ, ಗ್ರಾಮ ಪಂಚಾಯಿತಿ ಮಾಜಿ  ಸದಸ್ಯರಾದ ಈಶು, ಶಾರದಮ್ಮ, ಗೌರಮ್ಮ ಮತ್ತು ಇಂದ್ರನಗರದ ನಿವಾಸಿಗಳಾದ ಶಿವಕುಮಾರ್, ಸತಿಶ್, ಬಿ. ರಮೇಶ್, ಜಿಲ್ಲಾ ಬಳಕೆದಾರರ ವೇದಿಕೆ ಉಪಾಧ್ಯಕ್ಷ ಹಾಗೂ ನಿವೃತ್ತ ನೌಕರರ ಸಂಘದ ನಿರ್ದೇಶಕ ಎಸ್.ಎ. ರಂಗೇಗೌಡ ಇತರರು ಪಾಲ್ಗೊಂಡಿದ್ದರು.


Post a Comment

Previous Post Next Post