ಹಾಸನ: ಅರಸೀಕೆರೆ ನಗರಸಭೆಯಲ್ಲಿ ಆಯ್ಕೆಗೊಂಡಿರುವ ಜೆಡಿಎಸ್ ಸದಸ್ಯರಿಗೆ ಹಣದ ಆಮಿಷಹೊಡ್ಡಿ ಮುಂಗಡವಾಗಿ ೧೦ ಲಕ್ಷ ರೂಗಳನ್ನು ನೀಡಿರುವ ಬಗ್ಗೆ ಕೂಡಲೇ ಸಮಗ್ರ ಸಿಬಿಐ ತನಿಖೆ ಮಾಡಬೇಕು. ಕೂಡಲೇ ಮುಖ್ಯಮಂತ್ರಿಗಳು ರಾಜೀನಾಮೆ ಕೊಡಬೇಕೆಂದು ಇದೆ ವೇಳೆ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಮತ್ತು ಅರಸೀಕೆರೆ ಕ್ಷೇತ್ರದ ಶಾಸಕ ಕೆ.ಎಂ. ಶಿವಲಿಂಗೇಗೌಡರು ಹಣದ ಬಂಡಲ್ ಮುಂದೆ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರದಂದು ಮದ್ಯಾಹ್ನ ಮಾಧ್ಯಮದೊಂದಿಗೆ ಹೆಚ್.ಡಿ. ರೇವಣ್ಣ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಯವರಿಗೆ ಪ್ರಶ್ನೆ ಮಾಡುತ್ತೆನೆ. ಮುಖ್ಯ ಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎನ್.ಆರ್ ಸಂತೋಷ್ ರವರು ಅರಸೀಕೆರೆ ನಗರಸಭೆ ಅಧಿಕಾರ ಭದ್ರಪಡಿಸಿಕೊಳ್ಳಲು ಅರಸಿಕೇರೆ ವಿಧಾನಸಭೆಗೆ ಚುನಾವಣೆಗೆ ಸ್ಪರ್ಧಿಸುವ ನಿಟ್ಟಿನಲ್ಲಿ ಹಣ ಹಂಚುತ್ತಿದ್ದಾನೆ. ಇತನೆ ನಮ್ಮ ೧೪ ತಿಂಗಳ ಆಡಳಿತಕ್ಕೆ ಟೀಕೆ ಮಾಡಿದ್ದರು. ಈ ಘಟನೆ ಬಗ್ಗೆ ಪ್ರಧಾನಿ ಎನು ಹೇಳುತ್ತಾರೆ ಹೇಳಲಿ. ರಾಜ್ಯದ ಅಡ್ವೋಕೆಟ್ ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಿ ಅರಸೀಕೆರೆ ಮತ್ತು ಹಾಸನ ನಗರಸಭೆ ಎಸ್.ಟಿ. ಮಿಸಲಾತಿ ಬರಲು ಕಾರಣರಾದರು. ಎನ್.ಆರ್ ಸಂತೋಷ್ ಮಾತ್ರೆ ನುಂಗಿದ ಮೇಲೆ ರಾಜಕೀಯ ಕಾರ್ಯದರ್ಶಿಯಾಗಿ ನೇಮಕವಾಗಿದ್ದಾನೆ. ಸಿಕಂದರ್ ಮತ್ತು ಹರ್ಷವರ್ಧನ್ ಮೂಲಕ ಎಲ್ಲಾ ನಗರಸಭೆ ಸದಸ್ಯರಿಗೆ ೧೦ ಲಕ್ಷ ಮುಂಗಡ ಹಣ ಕೊಟ್ಟು ಉಳಿದ ೧೫ ಲಕ್ಷ ಹಣ ನಂತರ ಕೊಡುವುದಾಗಿ ಆಮಿಷ ಒಡ್ಡುವ ಮೂಲಕ ಜಿಲ್ಲಾಧಿಕಾರಿಗೆ ರಾಜಿನಾಮೆ ಕೊಡಿಸಿದ್ದಾರೆ. ನಾಮಪತ್ರ ವಾಪಸು ಪಡೆದ ಒಬ್ಬ ಸದಸ್ಯರ ಮನೆ ಬಳಿ ಬಿಜೆಪಿ ಪಕ್ಷದ ಬೆಂಬಲಿಗರು ರಾತ್ರಿ ಗಲಾಟೆ ಮಾಡಿ ಬೆದರಿಕೆ ಹಾಕಿರುವುದಾಗಿ ಆರೋಪಿಸಿದರು. ಜೆಡಿಎಸ್ ಬಿಟ್ಟು ಬರಲ್ಲ ಅಂದರೂ ಒತ್ತಾಯದಲ್ಲಿ ಸದಸ್ಯರ ಮನೆಗೆ ಸಿಕಂದರ್ ೧೦ ಲಕ್ಷ ಹಣ ಇಟ್ಟು ಬಂದಿದ್ದಾರೆ. ಈ ಹಣ ಎಲ್ಲಿಂದ ಬಂತು. ಇದರ ಬಗ್ಗೆ ಸಿಬಿಐ ತನಿಖೆ ಆಗಬೇಕು. ಈ ಬಗ್ಗೆ ಅರಸೀಕೆರೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡುತ್ತೆವೆ. ಮುಖ್ಯಮಂತ್ರಿಗಳ ಕೆಲವು ವಿಕನೇಷ್ ಇಡಿದುಕೊಂಡು ಮುಖ್ಯಮಂತ್ರಿಗಳಿಗೆ ಬ್ಲಾಕ್ ಮೆಲ್ ಮಾಡಿ ಅರಸೀಕೆರೆ ಎಸ್.ಟಿ.ಮಿಸಲಾತಿ ತಂದಿದ್ದಾನೆ. ನಾನು ಈ ಪ್ರಕರಣ ಸುಪ್ರೀಂಕೋರ್ಟ್ಗೆ ತೆಗೆದುಕೊಂಡು ಹೋಗುತ್ತೆನೆ. ಈ ವಿಚಾರದಲ್ಲಿ ಯಾರೆ ಮಾಡಿದರು ಮುಖ್ಯಮಂತ್ರಿಗಳೆ ನೆರ ಹೊಣೆ. ಕೂಡಲೇ ಸಂತೋಷ ಮೊಬೈಲ್ ಫೋನ್ ವಶಪಡಿಸಿಕೊಂಡು ತನಿಖೆ ಮಾಡಲಿ. ರಾಜ್ಯದಲ್ಲಿ ಕಾನೂನು ಇಲ್ಲ ಎನು ಬೇಕಾದರೂ ಮಾಡುತ್ತಿದ್ದಾರೆ. ಅರಸೀಕೆರೆ ಹಾಸನ ನಗರಸಭೆ ಮೀಸಲಾತಿ ನೀಡಿರುವ ಬಗ್ಗೆ ಸಮಗ್ರ ತನಿಖೆಯಾಗಲಿ. ನಗರಸಭೆ ಸದಸ್ಯ ಎಸ್.ಸಿ. ಜನಾಂಗದ ಮಹಿಳೆ ಮೇಲೆ ದೌರ್ಜನ್ಯ ನಡೆಯುತ್ತಿದೆ. ನೈತಿಕತೆ ಇದ್ದರೆ ಮುಖ್ಯಮಂತ್ರಿ ರಾಜಿನಾಮೆ ನೀಡಬೇಕು .ಅರಸೀಕೆರೆ ತಾಲ್ಲೂಕಿನಲ್ಲಿ ಸರ್ಕಾರಿ ಅಧಿಕಾರಿಗಳ ಬಳಿ ಸಂತೋಷ ಹಣ ವಸೂಲಿ ಮಾಡುತ್ತಿದ್ದಾನೆ. ವರ್ಗಾವಣೆ ದಂದೆ ನಡಸುತ್ತಿದ್ದಾನೆ ಎಂದು ಗಂಭೀರವಾಗಿ ಆರೋಪಿಸಿದರು. .ಎಸ್.ಸಿ./ಎಸ್ಟಿ ಕಾಯ್ದೆಯಡಿ ಸಂತೋಷ್ ವಿರುದ್ದ ಪ್ರಕರಣ ದಾಖಲು ಮಾಡಬೇಕು ಎಂದು ಒತ್ತಾಯಿಸಿ ಕೆಂಡಮAಡಲವಾದರು.
ಅರಸೀಕೆರೆ ಕ್ಷೇತ್ರದ ಶಾಸಕರಾದ ಕೆ.ಎಂ. ಶಿವಲಿಂಗೇಗೌಡ ಮಾತನಾಡಿ. ಅರಸೀಕೆರೆ ನಗರಸಭೆಯಲ್ಲಿ ಬಿಜೆಪಿ ಪಕ್ಷಕ್ಕೆ ಬಹುಮತ ಇಲ್ಲದ ಕಾರಣ, ಸಭೆ ನಡೆಸಲು ಆಗದೆ ಇರುವುದರಿಂದ ಬಹುಮತ ಪಡೆಯಲು ನಗರಸಭೆ ಸದಸ್ಯರಿಗೆ ಹಣದ ಆಮಿಷ ನೀಡಿ. ನಗರಸಭೆ ಗುತ್ತಿಗೆ ಕೊಡಿಸುವುದಾಗಿ ರಾತ್ರೋ ರಾತ್ರಿ ಅಪರೆಷನ್ ಕಮಲ ಮಾಡಿದ್ದಾರೆ. ಸಂತೋಷ್ ಬೆಂಬಲಿಗರ ಬೆದರಿಕೆಗೆ ನಗರ ಸಭೆ ಸದಸ್ಯೆ ಮನೆ ಬಿಟ್ಟು ಹೋಗಿದ್ದರು. ನಗರಸಭೆಯಲ್ಲಿ ೧೬ ಸದಸ್ಯರು ಹಾಗು ಶಾಸಕರು ಸಂಸದರ ಮತ ಸೇರಿ ೧೮ ಬಹುಮತ ಜೆಡಿಎಸ್ ಗೆ ಇದೆ. ಜೆಡಿಎಸ್ ಗೆ ಎಲ್ಲಾ ನಗರಸಭೆ ಸದಸ್ಯರನ್ನು ಸೆಳೆಯಲು ಬಾರಿ ಪ್ರಯತ್ನ ಮಾಡಿದ್ದಾರೆ. ನಗರಸಭೆ ಸದಸ್ಯರು ಜೆಡಿಎಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡದೆ ನೆರವಾಗಿ ಜಿಲ್ಲಾಧಿಕಾರಿಗೆ ನೀಡಿದ್ದಾರೆ. ಅರಸೀಕೆರೆ ೧೫ ವರ್ಷಗಳ ಕಾಲ ಶಾಂತಿಯುತವಾಗಿತ್ತು. ರಾಜಕೀಯ ಕಾರ್ಯದರ್ಶಿ ಅರಸೀಕೆರೆಗೆ ಬಂದ ಮೇಲೆ ಕ್ಷೇತ್ರದ ಶಾಂತಿ ಹಾಳಾಗಿ ಹೋಗಿದೆ ಎಂದು ಬೇಸರವ್ಯಕ್ತಪಡಿಸಿದರು.
ಆಮಿಷಕ್ಕೆ ಒಳಗಾದ ನಗರಸಭೆ ಸದಸ್ಯರು ಮಾತನಾಡಿ, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಸಂತೋಷ್ ಬೆಂಬಲಿಗನಾದ ಸಿಕಂದರ್ ಎಂಬುವನು ಸರ್ಕಾರ ನಮ್ಮ ಕೈಲಿದೆ. ನಾವು ಎನು ಬೇಕಾದರೂ ಮಾಡಿಸುತ್ತೆನೆ ಎಂದು ಬೆದರಿಸುತ್ತಿದ್ದಾನೆ. ನಗರಸಭೆ ಆಯುಕ್ತರು ಬಿಜೆಪಿ ಪಕ್ಷದ ಎಜೆಂಟ್ ಅವನೆ ನಗರಸಭೆ ಸದಸ್ಯರಿಗೆ ಆಮಿಷ ಹೊಡ್ಡುತ್ತಿದ್ದಾನೆ ಎಂದು ದೂರಿದರು.