೨೦೨೩ಕ್ಕೆ ಹೆಚ್.ಡಿ. ರೇವಣ್ಣ ರಾಜಕೀಯ ಅಂತ್ಯ

ಹಾಸನ: ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರನ್ನು ಗೌರವಿಸುತ್ತೇನೆ ಆದರೇ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಅವರನ್ನು ಗೌರವಿಸಲು ಯಾವ ಯೋಗ್ಯತೆ ಎಂದು ವಾಗ್ದಾಳಿ ನಡೆಸಿದ ಜಿಲ್ಲಾ ಪಂಚಾಯತ್ ಕೆಡಿಪಿ ಮಾಜಿ ಸದಸ್ಯ ದೇವರಾಜೇಗೌಡ ಅವರು ೨೦೨೩ಕ್ಕೆ ನಿಮ್ಮ ರಾಜಕೀಯ ಅಂತ್ಯವಾಗಲಿದೆ ಎಂದು ಭವಿಷ್ಯ ನುಡಿದರು.


      ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರದಂದು ಮಾತನಾಡಿ, ಹೆಚ್.ಡಿ ರೇವಣ್ಣನವರು ಇದೂವರೆಗೂ ಇಡೀ ಕ್ಷೇತ್ರ ವ್ಯಾಪ್ತಿಯಲ್ಲಿ ಒಬ್ಬನೇ ಒಬ್ಬ ಕೊರೋನಾ ರೋಗಿಗಳ ಆರೋಗ್ಯದ ಬಗ್ಗೆ ಗಮನ ಹರಿಸದೇ ಪ್ರತಿ ನಿತ್ಯ ಜಿಲ್ಲಾ ಕೇಂದ್ರಕ್ಕೆ ಬಂದು ಹೇಳಿಕೆ ನೀಡಿ ಸರ್ಕಾರವನ್ನು ದೋಷಿಸುವುದು ಮತ್ತು ಬ್ಲಾಕ್ ಮೇಲ್ ಮಾಡುವುದು ಚಾಳಿಯಾಗಿದೆ ಹಾಗೂ ಜಿಲ್ಲಾ ಸಚಿವರನ್ನು ಮನೆಗೆ ಕರೆದು ಕೊಂಡುಹೋಗಿ ಅಧಿಕಾರಿಗಳನ್ನು ತನ್ನ ಕಪಿಮುಷ್ಟಿಯಲ್ಲಿ ಇಟ್ಟುಕೊಂಡು ಅವನ ಬೇಳೆ ಬೇಯಿಸಿಕೊಳ್ಳುತ್ತಿರುವುದಾಗಿ ಏಕವಚನದಲ್ಲೆ ಮಾತನಾಡಿದರು. ವಿಶೇಷವಾಗಿ ಸಂವಿಧಾನದ ಅಡಿಯಲ್ಲಿ ತಮ್ಮ ಕರ್ತವ್ಯ ನಿರ್ವಹಿಸಬೇಕಾದ ರೇವಣ್ಣ ಅವರು, ಮಾನ್ಯ ಮುಖ್ಯಮಂತ್ರಿಗಳು ಬಂದಾಗ ಪ್ರೋಟೋಕಾಲ್ ದಿಕ್ಕರಿಸಿ ತನ್ನ ಬೇಳೆ ಬೇಯಿಸಿಕೊಳ್ಳಲು ಕಳ್ಳ ಬಿಲ್ ಬರೆದಿರುವ ಹಣವನ್ನು ಬಿಡುಗಡೆಮಾಡಲು ಕಿವಿಯಲ್ಲಿ ಮನವಿ ಮಾಡಲಾಗಿದೆ. ಆದರೆ ಹೊರಗಡೆ ಬಂದು ಮುಖ್ಯ ಮಂತ್ರಿಗಳಿAದ ಇದೂವರೆಗೂ ಒಂದು ಕಡತಕ್ಕೂ ಸಹಿ ಪಡೆದಿಲ್ಲ. ಅದನ್ನು ಸಾಬೀತು ಪಡಿಸಿದರೆ ನಾನು ರಾಜಕೀಯ ನಿವೃತ್ತಿ ಹೊಂದುತ್ತೇನೆ ಎಂದು ಹೇಳಿಕೆ ನೀಡಿದ್ದಾರೆ. ರೇವಣ್ಣನವರು ಅಧಿಕ ಕಡತಗಳಿಗೆ ಮುಖ್ಯಮಂತ್ರಿಗಳಿAದ ಸಹಿ ಪಡೆದಿರುವ ದಾಖಲೆಯನ್ನು ನಾನು ಮಾದ್ಯಮದ ಮೂಲಕ ಜನತೆಯ ಮುಂದೆ ಇಡುತ್ತೇನೆ. ಆಗ ಅವರು ಕೊಟ್ಟ ಮಾತಿನಂತೆ ರಾಜೀನಾಮೆ ಹಾಗೂ ರಾಜಕೀಯ ನಿವೃತ್ತಿಗೆ ಸಿದ್ಧವಾಗಲಿ ಇಲ್ಲದಿದ್ದರೆ ಜನತೆಯ ಮುಂದೆ ನಾನು ಎಂತವನೆAದು ಎಂದು ಒಪ್ಪಿಕೊಳ್ಳಬೇಕಾಗುತ್ತದೆ ಎಂದು ಸವಾಲು ಹಾಕಿದರು. ರೇವಣ್ಣನಿಗೆ ನೈತಿಕತೆ ಇದ್ದರೆ ಕೂಡಲೇ ೪೫೦೦ ಕೋಟಿ ಕಾಮಗಾರಿಗಳ ತನಿಖೆಯನ್ನು ಸಿ.ಬಿ.ಐ ಗೆ ವಹಿಸಿದರೇ ಆಗ ಯೋಗ್ಯತೆ ಈ ರಾಜ್ಯಕ್ಕೆ ತಿಳಿಯುತ್ತದೆ . ಇಲ್ಲದಿದ್ದರೆ ಅತೀ ಶೀಘ್ರವಾಗಿ ಅವರುಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುತ್ತೇನೆ ಎಂದು ಎಚ್ಚರಿಸಿದರು.

     ಹತ್ತಾರು ವರ್ಷಗಳಿಂದ ಹಾಸನ ಜಿಲ್ಲೆಯಲ್ಲಿ ಜಾಂಡಾ ಊರಿರುವ ಅಧಿಕಾರಿಗಳನ್ನು ಜಿಲ್ಲೆಯಿಂದ ಎತ್ತಂಗಡಿ ಮಾಡಿ ಪ್ರಾಮಾಣಿಕ ಅಧಿಕಾರಿಗಳನ್ನು ಜಿಲ್ಲೆಗೆ ಹಾಕಲು ಮಾನ್ಯ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡುತ್ತೇನೆ. ಹೊಳೇನರಸೀಪುರ ಪುರಸಭೆ ಸದಸ್ಯರು ಅತೀ ಶೀಘ್ರವಾಗಿ ಅವರ ಅಧಿಕಾರ ಕಳೆದುಕೊಂಡು ಅವರ ಸದಸ್ಯತ್ವ ಕಳೆದುಕೊಳ್ಳಲಿದ್ದಾರೆ. ಅತೀ ಶೀಘ್ರದಲ್ಲಿ ಮರು ಚುನಾವಣೆ ನಡೆಯಲಿದ್ದು, ಜಿಲ್ಲೆಯಲ್ಲಿ ಪಕ್ಷವನ್ನ ಸಂಘಟನೆ ಮಾಡಿ ಮುಂದಿನ ದಿನಗಳಲ್ಲಿ ಅಧಿಕಾರ ತರುವುದು ನನ್ನ ಪ್ರಮುಖ ಗುರಿಯಾಗಿದೆ. ಇದಕ್ಕೆ ಜಿಲ್ಲಾ ಸಚಿವರು ಹಾಗೂ ಮಾನ್ಯ ಮುಖ್ಯಮಂತ್ರಿಗಳ ಸಹಕಾರದೊಂದಿಗೆ ಅಭಿವೃದ್ಧಿಗೆ ಒತ್ತುಕೊಟ್ಟು ಹಾಗೂ ನನ್ನ ಕ್ಷೇತ್ರದ ಜನರ ಆಶೀರ್ವಾದದೊಂದಿಗೆ ನನ್ನ ಹೋರಾಟವನ್ನು ಇದೇ ರೀತಿ ಮುಂದುವರೆಸಿ ರೇವಣ್ಣನವರ ಕುಟುಂಬ ಮತ್ತು ರಾಜಕೀಯಕ್ಕೆ ಅಂತ್ಯ ಹಾಡುತ್ತೇನೆ. ವಿಶೇಷವಾಗಿ ರೇವಣ್ಣ ಇದೂವರೆಗೂ ಎಷ್ಟೊ ಅಮಾಯಕರನ್ನು ಜೈಲಿಗೆ ಕಳಿಸಲು ತನಿಖೆಯನ್ನೇ ಬುಡಮೇಲು ಮಾಡುತ್ತಿದ್ದು, ಆದರೆ ಇನ್ನ ಎರೆಡು ವರ್ಷಗಳಲ್ಲಿ ಇದೇ ರೇವಣ್ಣ ಅವರು ಎಣೆದ ತಂತ್ರಗಾರಿಕೆಯಿAದಲೇ ರೇವಣ್ಣ ಹಾಗೂ ಅವರ ಕುಟುಂಬದ ಕೆಲವು ಸದಸ್ಯರು ಜೈಲು ಸೇರುತ್ತಾರೆ ಎಂದು ಶಪಥ ಮಾಡಿದರು.

     ಹೊಳೆನರಸಿಪುರ ವಿಧಾನಸಭಾ ಕ್ಷೇತ್ರದ ಕೋವಿಡ್ ನಿಂದ ಜನರ ಜೀವ ರಕ್ಷಣೆ ಪ್ರಮುಕ ಉದ್ದೇಶದೊಂದಿಗೆ  ಆತ್ಮ ಸ್ಮರ್ಯ ಸಂಜೀವಿನಿ ಕೋವಿಡ್ ಕೇರ್ ಕಾಲ್ ಸೆಂಟರ್ ತೆರೆಯಲಾಗಿದೆ. ನಂತರ ನನ್ನ ಕಾಲ್ ಸೆಂಟರ್‌ನ ಸಿಬಂದಿಗಳ ಮೂಲಕ ಕ್ಷೇತ್ರ ವ್ಯಾಪ್ತಿಯಲ್ಲಿರುವ ಪ್ರತಿಯೊಬ್ಬ ರೋಗಿಗಳು ಜೀವಾ ರಕ್ಷಣೆಗಾಗಿ ಕೋವಿಂಡ್ ಔಷಧಿ ಕಿಟ್‌ಗಳನ್ನು ವಿತರಿಸಲಾಯಿತು. ಈಗಾಗಲೇ ಹೊಳೇನರಸೀಪುರ ವಿಧಾನಸಭಾ ಕ್ಷೇತ್ರದಲ್ಲಿರುವ ಒಟ್ಟು ೮೨೧೨ ಕೊರೋನಾ ರೋಗಿಗಳನ್ನು ನನ್ನ ಆತ್ಮ ಸೈರ್ಯ ಸಂಜೀವಿನಿ ಕೋವಿಡ್ ಕೇರ್ ಕಾಲ್ ಸೆಂಟರ್ ಮೂಲಕ ಸಂಪರ್ಕಿಸಿ ಅವರಿಗೆ ಉತ್ತಮ ಚಿಕಿತ್ಸೆ ಹಾಗೂ ಆತ್ಮ ಕೈರ್ಯವನ್ನು ತುಂಬುವ ಕೆಲಸ ಮಾಡಲಾಗಿದೆ ಎಂದರು.


Post a Comment

Previous Post Next Post