ಹಾಸನ: ೨೦೨೧ನೇ ಸಾಲಿನ ಹಾಸನ ತಾಲೂಕಿನಲ್ಲಿ ಈ ಶಾಲೆಗಳಲ್ಲಿ ಸಿ.ಬಿ.ಎಸ್.ಇ. ಹಾಗೂ ಸಿ.ಐ.ಸಿ.ಎಸ್.ಇ. ಪಠ್ಯಕ್ರಮ ಬೋಧಿಸಲಾಗುತ್ತಿದೆ. ತಾಲೂಕಿನ ಉಳಿದ ಎಲ್ಲಾ ಸರಕಾರಿ ಅನುದಾನಿತ ಮತ್ತು ಅನುದಾನರಹಿತ ಶಾಲೆಗಳಲ್ಲಿ ರಾಜ್ಯ ಪಠ್ಯಕ್ರಮ ಬೋಧನೆ ಮಾಡಲಾಗುತ್ತಿದೆ. ಪೋಷಕರು ತಮ್ಮ ಮಕ್ಕಳನ್ನು ದಾಖಲಾತಿ ಮಾಡುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹೇಳಿದ್ದಾರೆ. ವಿದ್ಯಾನಗರದಲ್ಲಿರುವ ಕ್ರೆöÊಸ್ಟ್ ಪಬ್ಲಿಕ್ ಶಾಲೆ, ಕರೀಗೌಡ ಕಾಲೋನಿಯಲ್ಲಿರು ಸಿ.ಕೆ.ಎಸ್. ಶಾಲೆ, ಹೊಳೆನರಸೀಪುರ ರಸ್ತೆಯ ಕೆ.ಐ.ಎ.ಡಿ.ಬಿ. ಬಳಿ ಇರುವ ವಿಧ್ಯಾಸೌಧ ಪಬ್ಲಿಕ್ ಶಾಲೆ, ವಿದ್ಯಾನಗರದಲ್ಲಿರುವ ನೇತಾಜಿ ಪಬ್ಲಿಕ್ ಶಾಲೆ, ಸತ್ಯಮಂಗಲ ಬಡಾವಣೆಯಲ್ಲಿರುವ ಹಾಸನ ಪಬ್ಲಿಕ್ ಶಾಲೆ, ಕೆಂಚಟ್ಟಹಳ್ಳಿ ಬಳಿ ಇರುವ ಹೆಚ್.ಕೆ.ಎಸ್. ಇಂಟರ್ ನ್ಯಾಷನಲ್ ಶಾಲೆ, ಬಿ. ಕಾಟೀಹಳ್ಳಿ ಬಳಿ ಇರುವ ಪೋದಾರ್ ಇಂಟರ್ ನ್ಯಾಷನಲ್ ಶಾಲೆ, ಶಂಕರ ಮಠದ ಬಳಿ ಇರುವ ಎಸ್.ಆರ್.ಎಸ್. ಪ್ರಜ್ಞಾ ಶಾಲೆ, ಬೇಲೂರು ರಸ್ತೆ, ಬಸವೇಶ್ವರನಗರದಲ್ಲಿರುವ ಪಾಂಡಿತ್ಯ ಯೂರೋ ಶಾಲೆಗಳು ಲಭ್ಯವಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Tags
ಹಾಸನ