ಹಾಸನ: ನಗರದ ವಲ್ಲಬಾಯಿ ರಸ್ತೆ, ಸಂತೇಪೇಟೆ ಬಳಿ ಇರುವ ಪೈರೋಜ್ ಸ್ಟೋರ್ ನಲ್ಲಿ ರಾತ್ರಿ ಯಾರೋ ಕಳ್ಳರು ಬಾಗಿಲು ಮುರಿದು ಒಳ ನುಗ್ಗಿ ಸಿಗ್ರೇಟ್, ಗುಟ್ಕಾ ಹಾಗೂ ೫೦ ಸಾವಿರ ಹಣ ಸೇರಿ ಒಟ್ಟು ೨ ಲಕ್ಷಕ್ಕೂ ಹೆಚ್ಚು ಮೌಲ್ಯದ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ.
ಪೈರೋಜ್ ದಿನಸಿ ಅಂಗಡಿಯಲ್ಲಿ ಎಲ್ಲಾ ರೀತಿಯ ದಿನನಿತ್ಯ ಪದಾರ್ಥವನ್ನು ಇಲ್ಲಿಂದ ಹೋಲ್ ಸೆಲ್ ಆಗಿ ಮಾರಾಟ ಮಾಡುತ್ತಾರೆ. ಲಾಕ್ ಡೌನ್ ಇರುವುದರಿಂದ ಸರಕಾರದ ನಿಯಮದಂತೆ ಶುಕ್ರವಾರದಂದು ಮದ್ಯಾಹ್ನದವರೆಗೂ ಅಂಗಡಿ ಬಾಗಿಲು ತೆಗೆದು ವ್ಯಾಪಾರ ಮಾಡಿ ನಂತರ ಬಾಗಿಲು ಬಂದ್ ಮಾಡಿ ಮನೆಗೆ ತೆರಳಿದ್ದರು. ಶುಕ್ರವಾರ ರಾತ್ರಿ ಯಾರೋ ಕದಿಮರು ಬಾಗಿಲಿನ ಬೀಗವನ್ನೆ ಕೂಯ್ದು ಒಳಗೆ ನುಗ್ಗಿದ್ದಾರೆ. ಕ್ಯಾಶ್ ಕೌಂಟರ್ ನಲ್ಲಿದ್ದ ೫೦ ಸಾವಿರ ಹಣ, ಚಿಲ್ಲರೆ, ಸಿಗರೇಟ್ ಬಂಡಲ್ ಗಳು, ಗುಟ್ಕಾ ಸೇರಿ ಒಟ್ಟು ೧ ಲಕ್ಷದ ೫೦ ಸಾವಿರ ಮೌಲ್ಯದ ಪದಾರ್ಥಗಳನ್ನು ಬಾಚಿಕೊಂಡು ಅಲ್ಲಿಂದ ಪರಾರಿಯಾಗಿದ್ದಾರೆ. ಈಬಗ್ಗೆ ಶನಿವಾರದಂದು ಬೆಳಿಗ್ಗೆ ವಿಚಾರ ತಿಳಿದಿದ್ದು, ಅಂಗಡಿಗೆ ಬಂದು ನೋಡಿದಾಗ ಕಳ್ಳತನವಾಗಿರುವ ಬಗ್ಗೆ ಸ್ಪಷ್ಟವಾಗಿದೆ ಎಂದು ಅಂಗಡಿ ಮಾಲೀಕರಾದ ಪೈರೋಜ್ ಮಾಹಿತಿ ನೀಡಿದ್ದಾರೆ. ಪೆನ್ಸ್ ನ್ ಮೊಹಾಲ್ಲ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ದಿನಸಿ ಅಂಗಡಿಗೆ ಆಗಮಿಸಿ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.