ವ್ಯವಸಾಯದಲ್ಲಿ ಅತಿಯಾದ ರಾಸಾಯನಿಕ ಬಳಕೆಯಿಂದಾಗಿ ವಿವಿಧ ರೋಗರುಜಿನೆಗಳಿಗೆ ದಾರಿ.

ಅರಕಲಗೂಡು:- ವ್ಯವಸಾಯದಲ್ಲಿ ರಾಸಾಯನಿಕ ಬಳಕೆಯಿಂದಾಗಿ ದೇಶದಲ್ಲಿ ವಿವಿಧ ರೋಗರುಜಿನೆಗಳಿಗೆ ದಾರಿಯಾಗುತ್ತಿದೆ  ಎಂದು ಕ್ಷೇತ್ರ ಶಾಸಕರಾದ ಎ.ಟಿ.ರಾಮಸ್ವಾಮಿ ಹೇಳಿದ್ದಾರೆ.
ತಾಲೂಕಿನ ಮಲ್ಲಿಪಟ್ಟಣ ಸಮುದಾಯಭವನದಲ್ಲಿ ಕೃಷಿ ಇಲಾಖೆ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಕೃಷಿಯಂತ್ರಧಾರೆ ಕಾರ್ಯಕ್ರಮ ಉದ್ಘಾಟನೆ ಮತ್ತು ಕೋವಿಡ್ ಟಾಸ್ಕ್ ಪೋರ್ಸ್ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಇಂದಿನ ದಿನಗಳಲ್ಲಿ ರೈತರು ಪ್ರತಿಯೊಂದು ಬೆಳೆಯನ್ನು ಬೆಳೆಯುವ ವಿವಿಧ ರೀತಿಯ ರಾಸಾಯನಿಕಗಳನ್ನು ಬಳಕೆ ಮಾಡುತ್ತಿರುವುದರಿಂದ ಭೂಮಿಯು  ತನ್ನ ಫಲವತ್ತತೆಯನ್ನು ಕಳೆದುಕೊಂಡು ಭೂಮಿಯ ಸವಕಳಿ ಉಂಟಾಗುತ್ತಿದ್ದು ಅದರ ಜೊತೆಗೆ ತಿನ್ನುವ ಅನ್ನವು ಸಹ  ವಿಷಕಾರಿ ಪದಾರ್ಥವಾಗಿ ಬದಲಾಗುತ್ತಿದೆ ಆದ್ದರಿಂದ ಜನತೆಯ ಸಾವಯವ ಕೃಷಿ ಪದ್ಧತಿಯನ್ನು ಕೈಬಿಡಬಾರದು, ಆಧುನಿಕ ಜೀವನ ಶೈಲಿಗೆ ಮಾರು ಹೋಗಿರುವ ಯುವಸಮುದಾಯ ಪಟ್ಟಣಗಳತ್ತ ಮುಖಮಾಡದೆ ಕೃಷಿಯಿಂದಲೇ ತಮ್ಮ ಬದುಕು ಕಟ್ಟಿಕೊಳ್ಳಲು ಮುಂದಾಗಬೇಕು ಭೂಮಿಯನ್ನೇ ನಂಬಿ ವ್ಯವಸಾಯ ಮಾಡಿದ ಎಷ್ಟೋ ಜನ ಇಂದು ಕೋಟ್ಯಾಧಿಪತಿ ಗಳಾಗಿದ್ದಾರೆ ಎಂದರು.
 ಹಾಗೂ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸರ್ಕಾರವು ಈ ರೀತಿಯ ಕೃಷಿಯಂತ್ರಧಾರೆ ಇಂತಹ ಯೋಜನೆಗಳನ್ನು ಜಾರಿಗೆ ತಂದಿದ್ದು  ಜನತೆಗೆ ಇದನ್ನು ಸದುಪಯೋಗಪಡಿಸಿಕೊಳ್ಳಬೇಕು. ಕೋವಿಡ್  ಎರಡನೇ ಅಲೆಯನ್ನು  ಪರಿಣಾಮಕಾರಿಯಾಗಿ ನಾವು ಎದುರಿಸಿದರೆ ನಾವು  ಮೂರನೇ ಅಲೆಯನ್ನು ಪರಿಣಾಕಾರಿಯಾಗಿ ಎದುರಿಸಲು ಸಾಧ್ಯ ಜನತೆ ಕಡ್ಡಾಯವಾಗಿ ಕೋವಿಡ್ ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದರು.

ಈ ಸಂದರ್ಭದಲ್ಲಿ ತಾಲೂಕು ಕೃಷಿ ಸಹಾಯಕ ನಿರ್ದೇಶಕರಾದ ರಮೇಶ್, ತಹಶೀಲ್ದಾರ್
ವೈ.ಎಂ.ರೇಣು ಕುಮಾರ್, ತಾಲೂಕು ಆರೋಗ್ಯಾಧಿಕಾರಿ ಡಾ ಸ್ವಾಮಿಗೌಡ, ಗ್ರಾಮ ಪಂಚಾಯತಿ ಸದಸ್ಯರಾದ ಭಾಗ್ಯಮ್ಮ, ಸುಮಿತ್ರ ಚಂದ್ರು, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ರಂಗಸ್ವಾಮಿ,ಆಶಾ ಕಾರ್ಯಕರ್ತೆಯರು  ಹಾಜರಿದ್ದರು.

Post a Comment

Previous Post Next Post