ನೀರಿನ ಸಂಪ್ ಒಳಗೆ ಮೂರು ತಿಂಗಳ ಬಾಣಂತಿ ಶವ: ಕೊಲೆ ಆರೋಪ

ಅರಸೀಕೆರೆ: ನೀರಿನ ಸಂಪಿನೊಳಗೆ ಮೂರುತಿಂಗಳ ಬಿಣಂತಿಯ ಶವ ಪತ್ತೆಯಾಗಿದೆ. ಭವ್ಯ (19) ಶವವಾಗಿ ಪತ್ತೆಯಾಗಿರುವ ನತದೃಷ್ಟೆ. ಅರಸೀಕೆರೆ ತಾಲ್ಲೂಕಿನ, ಮಾಲೇಕಲ್ ತಿರುಪತಿ ಗ್ರಾಮದಲ್ಲಿ ಘಟನೆ ನಡೆದಿದ್ದು, ವರದಕ್ಷಿಣೆಗಾಗಿ ಕಿರುಕುಳ ನೀಡಿ  ಕೊಲೆ ಮಾಡಿ ಸಂಪಿನೊಳಗೆ ಹಾಕಿದ್ದಾರೆ ಎಂದು ಪೋಷಕರು ಗಂಡ ಮತ್ತು ಅವರ ಮನೆಯವರ ವಿರುದ್ಧ ಆರೋಪಿಸಿದ್ದಾರೆ. 
ಒಂದು ವರ್ಷದ ಹಿಂದೆ ಮೇಳೇನಹಳ್ಳಿ ಗ್ರಾಮದ ಭವ್ಯ ಅವರನ್ನು ಜಗದೀಶ್ ಜೊತೆ ಮದುವೆ ಮಾಡಲಾಗಿತ್ತು. ಭವ್ಯ ಮೂರು ತಿಂಗಳ ಹಿಂದಷ್ಟೇ ಗಂಡು ಮಗುವಿಗೆ ಜನ್ಮ ನೀಡಿದ್ದರು. 
ಮದುವೆ ಆದಾಗಿನಿಂದ ಗಂಡನ ಮನೆಯವರು ಕಿರುಕುಳ ನೀಡುತ್ತಿದ್ದರು ಎಂದು ಭವ್ಯ ಪೋಷಕರು ಆರೋಪಿಸಿದ್ದಾರೆ.

ಅರಸೀಕೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಸ್ಥಳಕ್ಕೆ ತಹಶೀಲ್ದಾರ್ ಸಂತೋಷ್ ಕುಮಾರ್, ನಗರ ಠಾಣೆ ಪಿಎಸ್ಐ, ಗ್ರಾಮಾಂತರ ಪೊಲೀಸ್ ಭೇಟಿ ನೀಡಿ ಮಹಜರು ಮಾಡಿದ್ದಾರೆ.

Post a Comment

Previous Post Next Post