ಕೋವಿಡ್ ಪಾಸಿಟಿವಿಟಿ ಹೆಚ್ಚಿರುವ ತಾಲ್ಲೂಕುಗಳಿಗೆ ಸೂಕ್ತ ಕ್ರಮ ಕೈಗೊಳ್ಳಲು ಸೂಚನೆ

ಹಾಸನ ಜೂ.೧೭:-ಕೋವಿಡ್ ಪಾಸಿಟಿವಿಟಿ ಹೆಚ್ಚು ಇರುವ ತಾಲ್ಲೂಕುಗಳನ್ನು ಗುರುತಿಸಿ ಸೂಕ್ತ ಕ್ರಮ ಕೈಗೊಳ್ಳಲು ಬೆಂಗಳೂರು ಪ್ರಾದೇಶಿಕ ಆಯುಕ್ತರು ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ನವೀನ್ ರಾಜ್ ಸಿಂಗ್ ಅವರು ಸೂಚನೆ ನೀಡಿದ್ದಾರೆ.    

ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಸಂವಾದದಲ್ಲಿ ಭಾಗವಹಿಸಿ ಸಭೆ ನಡೆಸಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಪ್ರತಿ ನಿತ್ಯ ಕೋವಿಡ್ ಪಾಸಿಟಿವ್ ಬಂದವರನ್ನು ಕೋವಿಡ್  ಕೇರ್ ಕೇಂದ್ರಕ್ಕೆ ಸ್ಥಳಾಂತರಿಸಲು ಹೆಚ್ಚಿನ ಕ್ರಮ ವಹಿಸಬೇಕು ಎಂದರು.  

  ಆರ್.ಟಿ.ಪಿ.ಸಿ ಆರ್ ಹಾಗೂ ರ‍್ಯಾಟ್ ಪರೀಕ್ಷೆಗಳನು ಹೆಚ್ಚಿಸಿ ಎಂದು ನವೀನ್ ರಾಜ್ ಸಿಂಗ್ ಅವರು ತಿಳಿಸಿದರು. ಮುಂಗಾರು ಪ್ರಾರಂಭವಾಗಿರುವುದರಿAದ ಬಿತ್ತನೆ ಬೀಜಕ್ಕೆ ಹಾಗೂ ರಾಸಯನಿಕ ಗೊಬ್ಬರಕ್ಕೆ ಯಾವುದೇ ರೀತಿ ತೊಂದರೆಯಾಗದAತೆ ಮುಂಜಾಗ್ರತಾ ಕ್ರಮ ವಹಿಸಲು ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.


 ಜಿಲ್ಲಾಧಿಕಾರಿ ಆರ್ ಗಿರೀಶ್ ಅವರು ಮಾತನಾಡಿ ಆರ್ ಟಿ ಪಿ ಸಿ ಆರ್ ಹಾಗೂ ಟ್ ಪರೀಕ್ಷೆಯನ್ನೂ ನಿಗದಿಪಡಿಸಿರುವ ಗುರಿಗಿಂತ ಹೆಚ್ಚಿನ ಪ್ರಮಾಣದಲ್ಲಿ  ಪರೀಕ್ಷೆ  ಮಾಡಲಾಗುತ್ತಿದೆ ಎಂದರು.

ಹಿಮ್ಸ್ಗೆ  ೨೦೦ ಆಮ್ಲಜನಕದ ಸಿಲಿಂಡರ್‌ಗಳು  ಅವಶ್ಯಕತೆ ಇದೆ ಹಾಗೂ  ಮೊಬೈಲ್ ಆಕ್ಸಿಜನ್ ಟ್ಯಾಂಕರ್‌ಗೆ  ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

    

ಕೋವಿಡ್ ಪಾಸಿಟಿವಿಟಿ  ಹೆಚ್ಚು ಇರುವ ತಾಲ್ಲೂಕುಗಳ ತಹಸೀಲ್ದಾರ್ ಗಳೊಂದಿಗೆ ಸಬೆ ನಡೆಸಿ ಸೂಕ್ತ ನಿರ್ದೇಶನ ನೀಡಲಾಗಿದೆ ಎಂದು ಜಿಲ್ಲಾದಿಕಾರಿ ಹೇಳಿದರು .

      

  ಆಲೂಗೆಡ್ಡೆ ಬಿತ್ತನೆ ಉತ್ತಮವಾಗಿ ಆಗಿದ್ದು. ಅಂಗಾAಶ ಆಲೂಗೆಡ್ಡೆಯೂ  ಸುಮಾರು ೫೦ ಎಕರೆ ಪ್ರದೇಶದಲ್ಲಿ ಬಿತ್ತನೆಯಾಗಿದೆ.ಹಿಂಗಾರಿನಲ್ಲಿ ೫೦೦ ಎಕರೆ ಪ್ರದೇಶಕ್ಕೆ ಬಿತ್ತನೆ ಮಾಡುವ ಗುರಿ ಹೊಂದಿದ್ದೇವೆ ಎಂದು ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕರಾದ ಯೋಗೇಶ್  ಮಾಹಿತಿ ನೀಡಿದರು.

       

 ಕಳೆದ ವರ್ಷಕಿಂತ ಹೆಚ್ಚಿನ ಬಿತ್ತನೆಯಾಗಿದ್ದು. ಸುಮಾರು ೨೩ ಸಾವಿರಕ್ಕೂ ಹೆಚ್ಚು ಮೆಕ್ಕೆಜೋಳ ಬಿತ್ತನೆಯಾಗಿದೆ. ರಸಗೊಬ್ಬರದಲ್ಲಿ ಯಾವುದೇ ರೀತಿ ತೊಂದರೆ ಇಲ್ಲ ಎಂದು ಜಂಟಿ ಕೃಷಿ ನಿರ್ದೇಶಕರಾದ ರವಿ ಅವರು ಮಾಹಿತಿ ನೀಡಿದರು.


ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ  ಬಿ.ಎ. ಪರಮೇಶ್, ಅಪರ ಜಿಲ್ಲಾಧಿಕಾರಿ ಕವಿತ ರಾಜಾರಾಂ, ಉಪವಿಭಾಗಾಧಿಕಾರಿ ಗಿರೀಶ್ ನಂದನ್,  ಜಿಲ್ಲಾ ಶಸ್ತçಚಿಕಿತ್ಸಕರಾದ ಡಾ|| ಕೃಷ್ಣಮೂರ್ತಿ, ಹಿಮ್ಸ್ ನಿರ್ದೇಶಕರಾದ ಡಾ|| ರವಿಕುಮಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಡಾ|| ಸತೀಶ್, ಆರ್.ಸಿ.ಎಚ್ ಅಧಿಕಾರಿ ಡಾ|| ಕಾಂತರಾಜ್, ಔಷದಿ ನಿಯಂತ್ರಕರಾದ ಡಾ|| ಗಿರೀಶ್ ಹಾಗೂ ಮತ್ತಿತರರು ಹಾಜರಿದ್ದರು.


Post a Comment

Previous Post Next Post