ತಾಲೂಕಿನ ಅರೇಹಳ್ಳಿ ಹೋಬಳಿಯ ಮಾಲಹಳ್ಳಿ ತೊಳಲು ರಸ್ತೆಯಲ್ಲಿ ಇರುವ ನಿಂಗರಾಜು ಎಂಬುವರ ಮನೆ ಗೇಟನ್ನು ಆನೆಗಳು ಮುರಿದು ಬಾಳೆ, ಮೆಣಸು ಹಾಗೂ ಕಾಫಿ ಗಿಡಗಳನ್ನು ಸಂಪರ‍್ಣ ಹಾಳುಮಾಡಿರುವ ಘಟನೆ ಶನಿವಾರ ರಾತ್ರಿ ಸಂಭವಿಸಿದ್ದು ಆನೆ ಹಾಗೂ ಮಾನವ ಸಂರ‍್ಷ ನಿರಂತರವಾಗಿ ನಡೆಯುತ್ತಿದ್ದರೂ ಅರಣ್ಯ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ ಎಂದು ಸರ‍್ವಜನಿಕರು ಆಕ್ರೋಶ ಹೊರಹಾಕಿದ್ದಾರೆ .
ತಾಲೂಕಿನ ಮಲೆನಾಡು ಭಾಗವಾದ ಅರೇಹಳ್ಳಿ ಹೋಬಳಿಯ ಸುತ್ತಮುತ್ತ ಆನೆಗಳ ಉಪಟಳ ಹೆಚ್ಚಾಗಿದ್ದು ಹೊಲ ಗದ್ದೆ ಕಾಫಿ ತೋಟ ಬಾಳೆ ತೋಟ ಅಡಿಕೆ ಬೆಳೆ ಮುಂತಾದ ಬೆಳೆಗಳು ಆನೆಗಳ ಕಾಲ್ತುಳಿತಕ್ಕೆ ಸಿಕ್ಕಿ ನಾಶವಾಗುತ್ತಿವೆ . ಹತ್ತಕ್ಕೂ ಹೆಚ್ಚು ಆನೆಗಳು ಕಾಫಿ ತೋಟಗಳಲ್ಲಿ ಬೀಡು ಬಿಟ್ಟಿದ್ದು ರಾತ್ರಿ ವೇಳೆ ಸಂಚರಿಸಿ ಕಾಫಿ ಮೆಣಸು ಬಾಳೆ ಗಿಡ ಹಾಗೂ ಹೊಲ ಗದ್ದೆಗಳ ಬೆಳೆಗಳನ್ನು ತುಳಿದು ಹಾಳು ಮಾಡುತ್ತಿವೆ ಇದರಿಂದಾಗಿ ಬೆಳೆಗಾರರು ಚಿಂತೆಗೀಡಾಗಿದ್ದಾರೆ .
ಅರೇಹಳ್ಳಿ ಸಮೀಪದ ಮಾಲಹಳ್ಳಿ ತೊಳಲು ರಸ್ತೆಯಲ್ಲಿರುವ ನಿಂಗರಾಜು ಎಂಬುವರ ಮನೆಯ ಮುಂಭಾಗದ ಗೇಟ್ ಅನ್ನು ಆನೆಗಳು ದಾಳಿ ನಡೆಸಿ ಮುರಿದು ಹಾಕಿವೆ . ಅಲ್ಲದೆ ಬಾಳೆ ತೋಟಕ್ಕೆ ನುಗ್ಗಿರುವ ಆನೆಗಳು ಗೊನೆಬಿಟ್ಟ ಬಾಳೆ ಗಿಡಗಳನ್ನು ಹಾಳು ಮಾಡಿವೆ . ಇದು ಸಾಲದು ಎಂಬಂತೆ ರ‍್ವೆ ನಂ ೧೭ ಮತ್ತು ೧೮ ರಲ್ಲಿರುವ ಕಾಫಿ ತೋಟದೊಳಗೆ ನುಗ್ಗಿ ಮೆಣಸು ಫಸಲು ಬಿಡುತ್ತಿರುವ ಕಾಫಿ ಗಿಡಗಳನ್ನು ತುಳಿದು ನಾಶ ಮಾಡಿವೆ . ಇದರಿಂದಾಗಿ ತೋಟದ ಮಾಲೀಕರಿಗೆ ಹೆಚ್ಚಿನ ನಷ್ಟ ಉಂಟಾಗಿದ್ದು ಸೂಕ್ತ ಪರಿಹಾರ ದೊರಕಿಸಿಕೊಡುವಂತೆ ಅರಣ್ಯಾಧಿಕಾರಿಗಳಿಗೆ ಹಾಗೂ ಕಂದಾಯ ಇಲಾಖೆಗೆ ಮನವಿ ಮಾಡಿರುತ್ತಾರೆ .
ಅರಣ್ಯ ಇಲಾಖೆಯ ನರ‍್ಲಕ್ಷ್ಯ :
ಕಳೆದ ರ‍್ಷದಿಂದ ಮಲೆನಾಡು ಭಾಗದಲ್ಲಿ ನಿರಂತರವಾಗಿ ಆನೆಗಳು ದಾಳಿ ನಡೆಸುತ್ತಿದ್ದು ಅರಣ್ಯ ಇಲಾಖೆಯ ಅಧಿಕಾರಿಗಳು ಜಾಣ ಮೌನಕ್ಕೆ ಶರಣಾಗಿದ್ದಾರೆ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ . ಆನೆ ದಾಳಿ ನಡೆಸಿದ ಸಂರ‍್ಭದಲ್ಲಿ ಕಾಟಾಚಾರಕ್ಕೆ ಭೇಟಿ ನೀಡುವ ಅಧಿಕಾರಿಗಳು ನೆಪ ಮಾತ್ರಕ್ಕೆ ಸಾಂತ್ವಾನ ಹೇಳಿ ಹಿಂದಿರುಗುತ್ತಾರೆ . ಅಲ್ಲದೆ ಆರ್ ಎಪ್ ಓ ಹಾಗೂ ಉಪ ವಲಯ ಅರಣ್ಯಾಧಿಕಾರಿ ಜಿಲ್ಲಾ ಕೇಂದ್ರದಲ್ಲಿ ವಾಸವಿದ್ದು ಸ್ಥಳೀಯ ಸಮಸ್ಯೆಗಳ ಅರಿವು ಅವರಿಗಿಲ್ಲ. ಎಂಬುದು ಬೆಳೆಗಾರರ ಆಕ್ರೋಶವಾಗಿದೆ .
ಫೋನ್ ಎತ್ತಲ್ಲ :
ಆನೆಗಳ ನಿರಂತರ ದಾಳಿ ಹಾಗೂ ಸ್ಥಳೀಯ ಸಮಸ್ಯೆಗಳ ಬಗ್ಗೆ ಮಾತನಾಡಲು ಆರ್ ಎಫ್ ಓ ಮತ್ತು ಉಪ ವಲಯ ಅರಣ್ಯಾಧಿಕಾರಿ ಗಳಿಗೆ ಆನೆಗಳ ದಾಳಿ ನಷ್ಟ ಹಾಗೂ ತರ‍್ತು ಸಂರ‍್ಭದಲ್ಲಿ ಕರೆ ಮಾಡಿದರೆ ನಮ್ಮ ಮೊಬೈಲ್ ಕರೆಯನ್ನು ಸ್ವೀಕರಿಸುವುದಿಲ್ಲ . ಅಲ್ಲದೆ ಅರಣ್ಯ ಇಲಾಖೆಯ ಕೆಲವು ಜವಾಬ್ದಾರಿಗಳನ್ನು ಜೀಪ್ ಚಾಲಕನಿಗೆ ವಹಿಸಲಾಗಿದ್ದು ಆತನದೇ ಎಲ್ಲಾ ರ‍್ವಾಧಿಕಾರ ಎಂಬುದಾಗಿ ಬೆಳೆಗಾರರು ದೂರುತ್ತಾರೆ . ಸರ‍್ವಜನಿಕರ ಆರೋಪದ ಸತ್ಯಾಸತ್ಯತೆ ಬಗ್ಗೆ ತಿಳಿಯಲು ಆರ್ ಎಫ್ಓಗೆ ಪತ್ರಿಕೆಯು ಹಲವಾರು ಬಾರಿ ಕರೆ ಮಾಡಿದರೂ ಸ್ವೀಕರಿಸಲಿಲ್ಲ ನಂತರ ಮೆಸೇಜ್ ಮಾಡಿದರೂ ಅದಕ್ಕೆ ಯಾವುದೇ ಪ್ರತ್ಯುತ್ತರ ನೀಡುತ್ತಿಲ್ಲ. ಈ ಬಗ್ಗೆ ಶಾಸಕರು , ಉನ್ನತ ಅರಣ್ಯ ಅಧಿಕಾರಿಗಳು ಹಾಗೂ ಚುನಾಯಿತ ಜನಪ್ರತಿನಿಧಿಗಳು ಗಮನಹರಿಸಿ ಕೂಡಲೇ ಬೆಳೆಗಾರರ ಸಂಕಷ್ಟಕ್ಕೆ ಧಾವಿಸಬೇಕು ಎಂಬುದು ಎಲ್ಲರ ಆಶಯವಾಗಿದೆ .