ಹಾಸನ: ಕೊರೋನಾ ಎರಡನೇ ಅಲೆ ಆವರಿಸಿ ಬಹುತೇಕ ನಿರ್ಬಂಧದ ಆದೇಶಗಳಿತ್ತು. ಆದರೇ ಸೋಮವಾರದಂದು ಸಾರಿಗೆ ಬಸ್ ರಸ್ತೆಗಿಳಿಯಲು ಅವಕಾಶ ನೀಡಿದ್ದರಿಂದ ಪ್ರಯಾಣಿಕರು ಮೊದಲ ದಿವಸ ಅಲ್ಪಸಂಖ್ಯೆಯಲ್ಲಿ ಬಸ್ ನಿಲ್ದಾಣಕ್ಕೆ ಆಗಮಿಸಿದರು.
ಮೈಸೂರು ಜಿಲ್ಲೆ ಹೊರತುಪಡಿಸಿ ಉಳಿದ ಎಲ್ಲಾ ಜಿಲ್ಲೆಗಳಲ್ಲೂ ಸೋಮವಾರದಿಂದ ಕೆ.ಎಸ್.ಆರ್.ಟಿ.ಸಿ. ಬಸ್ ಗಳು ರಸ್ತೆಗಿಳಿದವು. ಸರಕಾರದ ಮಾರ್ಗಸೂಚಿಯಂತೆ ಸಾರಿಗೆ ಬಸ್ ಒಳಗೆ ನೂರಕ್ಕೆ ಶೇಕಡ ೫೦ ರಷ್ಟು ಮಾತ್ರ ಪ್ರಯಾಣಿಕರನ್ನು ಕರೆದೊಯ್ಯಲು ಅವಕಾಶ ಕಲ್ಪಿಸಲಾಗಿದೆ. ಕಡ್ಡಾಯವಾಗಿ ಮಾಸ್ಕ್, ಸ್ಯಾನಿಟೈರ್ ಇರಲೇಬೇಕು. ಇನ್ನು ಮೊದಲ ಲಸಿಕೆಯನು ಹಾಕಿಸಿಕೊಂಡ ಚಾಲಕರು ಮತ್ತು ಸಿಬ್ಬಂದಿಗಳು ಕರ್ತವ್ಯಕ್ಕೆ ಹಾಜರಾಗಬಹುದು. ಮೊದಲ ದಿವಸ ಸಾರ್ವಜನಿಕರಿಗೆ ಅಷ್ಟೊಂದು ಮಾಹಿತಿ ದೊರೆಯದ ಕಾರಣ ಸಾರಿಗೆ ಬಸ್ ಗಾಗಿ ಕಾದು ಕುಳಿತುಕೊಳ್ಳುವ ಪ್ರಯಾಣಿಕರ ಸಂಖ್ಯೆ ಕಡಿಮಯೇ ಇತ್ತು. ವಾಹನವಿಲ್ಲದೆ ಅನೇಕರು ಅಲ್ಲಲ್ಲೆ ನೆಂಟರಿಸ್ತರ ಮನೆಯಲ್ಲಿ ಜಾಂಡ ಊರಿದವರು, ಮತ್ತು ತುರ್ತಾಗಿ ಕೆಲಸಕ್ಕೆ ಹೋಗಬೇಕಾದವರ ಮೊಗದಲ್ಲಿ ಸಂತಸ ಕಂಡು ಬಂದಿತು. ಇಲ್ಲಿಂದ ಹೆಚ್ಚಾಗಿ ಬೆಂಗಳೂರು ಮಾರ್ಗವಾಗಿ ಹೋಗುವವರೆ ಹೆಚ್ಚು ಪ್ರಯಾಣಿಕರು ಕಂಡು ಬಂದರು.