ಹಾಸನ: ಅರಸೀಕೆರೆ ಶಾಸಕ ಕೆ.ಎಂ.ಶಿವಲಿAಗೇಗೌಡ ಅವರು ಡಿಹೆಚ್‌ಒ ಡಾ.ಕೆ.ಎಂ.ಸತೀಶ್ ಕುಮಾರ್ ಅವರನ್ನು ನಿಂದಿಸಿದ್ದಾರೆ ಎಂಬ ಆರೋಪ-ಪ್ರತ್ಯಾರೋಪ ವಿಚಾರಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಇತಿಶ್ರೀ ಹಾಡಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ನಡೆದ ಅಧಿಕಾರಿಗಳು ಹಾಗೂ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಸಿಎಂ ವಿಡಿಯೋ ಸಂವಾದ ಸಂದರ್ಭದಲ್ಲಿ ಶಿವಲಿಂಗೇಗೌಡರು ಸದನದಲ್ಲಿ ಮಾತುನಾಡುವಂತೆ ಆಡುಭಾಷೆಯಲ್ಲಿ ಮಾತನಾಡಿದ್ದರು. ಈ ಬಗ್ಗೆ ಜನಪ್ರತಿಧಿಗಳು ಹಾಗೂ ಅಧಿಕಾರಿಗಳು, ಮತ್ತು ನೌಕರರ ಸಂಘದ ಪ್ರತಿನಿಧಿಗಳೊಂದಿಗೆ ಮುಖಾಮುಖಿ ಮಾತನಾಡಿ ಗೊಂದಲಕ್ಕೆ ತೆರೆ ಎಳೆಯಲಾಗಿದೆ ಎಂದು ಹೇಳಿದರು. ಜಿಲ್ಲಾಡಳಿತದ ಎಲ್ಲಾ ಅಧಿಕಾರಿಗಳು, ಜನಪ್ರತಿನಿಧಿಗಳು ಎಲ್ಲರೂ ಒಟ್ಟಿಗೆ ಕೆಲಸ ಮಾಡುವ ಮೂಲಕ ಕೊರೊನಾ ಹೋಗಲಾಡಿಸುವುದು ನಮ್ಮ ಮೊದಲ ಆದ್ಯತೆಯಾಗಬೇಕು ಎಂದು ಹೇಳಿದರು.ಅರಸೀಕೆರೆ ತಾಲೂಕಿಗೆ ವೈದ್ಯರ ನಿಯೋಜನೆ ಮಾಡಿರುವ ಬಗ್ಗೆ ಮಾಹಿತಿ ಇಲ್ಲದ ಕಾರಣ ಶಿವಲಿಂಗೇಗೌಡರು ಏರುದನಿಯಲ್ಲಿ ಮಾತನಾಡಿದ್ದರು. ಈ ಬಗ್ಗೆ ಎಲ್ಲರೊಂದಿಗೆ ಮಾತನಾಡಿದ್ದೇನೆ. ಸಮಸ್ಯೆ ಬಗೆಹರಿದಿದೆ. ಎಲ್ಲಾ ಕಡೆ ವೈದ್ಯರೂ ಕೂಡ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.
ಶಾಸಕ ಪ್ರೀತಂಗೌಡ ಮಾತನಾಡಿ, ಸಮಸ್ಯೆ ತಿಳಿಯಾಗಿದೆ. ಡಿಹೆಚ್‌ಒ ಸ್ಥಾನದಲ್ಲಿ ಸಮಸ್ಯೆಯಾದಾಗ ಶಾಸಕರು ಅವರ ಅಳಲು ತೋಡಿಕೊಂಡಿದ್ದಾರೆ. ಸಂಪರ್ಕ ಕೊರತೆಯಿಂದ ಹೀಗಾಗಿತ್ತು. ಇಬ್ಬರೂ ಪರಸ್ಪರ ಮಾತನಾಡಿ ಗೊಂದಲಕ್ಕೆ ತೆರೆ ಎಳೆಯುವ ಕೆಲಸವಾಗಿದೆ. ವೈದ್ಯರೂ ಸಮಾಧಾನರಾಗಿದ್ದಾರೆ. ಡಿಹೆಚ್‌ಒ ಅವರು ಆರಂಭದಿAದಲೂ ಉತ್ತಮ ಕೆಲಸ ಮಾಡಿದ್ದಾರೆ. ಶಿವಲಿಂಗೇಗೌಡರೂ ಅವರ ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ಆ ವಿಷಯ ಇವತ್ತಿಗೆ ಸಮಾಪ್ತಿಯಾಗಿದೆ.
ಕಡೆಯಲ್ಲಿ ಮಾತನಾಡಿದ ಶಿವಲಿಂಗೇಗೌಡ, ಸಿಎಂ ವಿಸಿ ವೇಳೆ ವೈದ್ಯರ ನೇಮಕಾತಿ ಬಗ್ಗೆ ನಾವು ಚರ್ಚೆ ಮಾಡಿದ್ದೆವು.
ಪಟ್ಟಿಯಲ್ಲಿ ಅರಸೀಕೆರೆ ತಾಲೂಕಿನ ಹೆಸರು ಸೇರದೆ ಇರುವುದನ್ನು ಗಮನಿಸಿ ವೈದ್ಯರ ನೇಮಕಾತಿ ಆಗಿಲ್ಲ ಎಂದು ನನ್ನ ಭಾಷೆಯಲ್ಲಿ ಮಾತನಾಡಿದೆ. ಒಬ್ಬ ಎಂಬಿಬಿಎಸ್ ವೈದ್ಯರನ್ನು ಹಾಕಿಸದಿದ್ದರೆ ಜನ ನಮ್ಮನ್ನ ಒದ್ದು ಓಡಿಸ್ತಾರೆ ಎಂದು ನಾನು ಹೇಳಿದ್ದೆ. ಅದು ತಪುö್ಪ ಅರ್ಥ್ಯಸುವಿಕೆಯಿಂದ ಗೊಂದಲ ಆಗಿದೆ ಎಂದರು. ನನ್ನ ಹೇಳಿಕೆಯಿಂದ ಮನಸ್ಸಿಗೆ ನೋವಾಗಿದ್ದರೆ ಬೇಸರಿಸಿಕೊಳ್ಳಬೇಡಿ ಎಂದು ಅಂದೇ ಡಿಹೆಚ್‌ಒ ಅವರಿಗೆ ಹೇಳಿದ್ದೆ. ನಾನು ಯಾವಾಗಲೂ ವೈದ್ಯರ ಪರ ಇದ್ದೇನೆ. ಗೊಂದಲಗಳಿAದ ಹೀಗೆಲ್ಲಾ ಆಗಿದೆ. ನಾನು ಮೊದಲಿಂದಲೂ ಹೀಗೇ ಮಾತಾಡೋದು, ಇದನ್ನು ಕೆಲವರು ಬೇರೆ ರೀತಿಯಲ್ಲಿ ಎಳೆದಾಡಿದ್ದಾರೆ. ಆ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ನಾನು ಆಕ್ಷೇಪಾರ್ಹವಾಗಿ ಮಾತನಾಡಿಲ್ಲ ಎಂದರು.
