ಬೇಲೂರು ವಾಸವಿ ಸಂಸ್ಥೆಗಳಿಂದ ಗಿಡ ನೆಡುವ ಕಾರ್ಯಕ್ರಮ

 ಬೇಲೂರು :ವಾಸವಿ 2ನೇ ಪೀಠಾಧಿಪತಿ ಶ್ರೀಶ್ರೀಶ್ರೀ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮಿಗಳ ಪೀಠಾರೋಹಣದ ನೆನಪಿಗಾಗಿ ಇಲ್ಲಿನ ಆರ್ಯವೈಶ್ಯ ಮಂಡಳಿ, ವಾಸವಿ ಯುವಜನ ಸಂಘ, ವಾಸವಿ ಸ್ವಸಹಾಯ ಸಂಘದಿಂದ ವಿವಿಧ ಜಾತಿಯ ಗಿಡಗಳನ್ನು ನೆಡಲಾಯಿತು.

ಈ ಸಂದರ್ಭ ಮಾತನಾಡಿದ ವಾಸವಿ ಸಂಸ್ಥೆಯ ಪ್ರಮುಖರು, ನಮ್ಮ ಸ್ವಾಮೀಜಿಯವರ ಪೀಠಾರೋಹಣದ ನೆನಪಿಗಾಗಿ ಇಂದು ಗಿಡಗಳ ನೆಟ್ಟಿದ್ದೇವೆ. ಇದರ ಪೋಷಣೆಯ ಜವಾಬ್ದಾರಿಯೂ ಇದೆ. ನಮ್ಮ ಸಂಸ್ಥೆಯಿಂದ ಇನ್ನಷ್ಟು ಜನಪರವಾದ ಕೆಲಸ ಹಮ್ಮಿಕೊಳ್ಳುವ ಇಂಗಿತ ವ್ಯಕ್ತಪಡಿಸಿದರು. ಗ್ರೀನರಿ ಟ್ರಸ್ಟ್‍ನ ನಾಗರಾಜ್ ಮಾತನಾಡಿ, ಆರ್ಯವೈಶ್ಯ ಮಂಡಳಿ, ವಾಸವಿ ಯುವಜನ ಸಂಘ, ವಾಸವಿ ಸ್ವಸಹಾಯ ಸಂಘದಿಂದ ವಾಸವಿ ಪೀಠದ 2ನೇ ಪೀಠಾದಿಪತಿಗಳಾಗಿ ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಸರಸ್ವತೀ ಸ್ವಾಮೀಗಳ ಪೀಠಾರೋಹಣದ ನೆನಪಿಗಾಗಿ ವಿವಿಧ ಬಗೆಯ ಸಸಿಗಳನ್ನು ನೆಟ್ಟಿರುವುದು ಸಂತೋಷವಾಗಿದೆ. ಹುಟ್ಟುಹಬ್ಬ,ವಿವಾಹವಾರ್ಷಿಕೋತ್ಸವ ಇಂತಹ ಸಂದರ್ಭದಲ್ಲಿ ಅಗತ್ಯವಿರುವ ಸ್ಥಳದಲ್ಲಿ ಗಿಡಗಳ ನೆಟ್ಟರೆ ಪರಿಸರಕ್ಕೆ ದೊಡ್ಡ ಕೊಡುಗೆ ಕೊಟ್ಟಂತಾಗುತ್ತದೆ ಎಂದು ತಿಳಿಸಿದರು.

ಈ ಸಂದರ್ಭ ರಾಘವೇಂದ್ರ,ನಾರಾಯಣ ಪ್ರಸಾದ್,ಕೇಶವ, ಸಂತೋಷ್, ಶ್ರೀನಿವಾಸ್, ಮಂಜು ಉಪಸ್ಥಿತರಿದ್ದರು.

Post a Comment

Previous Post Next Post