ನಗರ ಬಸ್ ನಿಲ್ದಾಣದಲ್ಲೆ ತರಕಾರಿ ಮಾರಲು ಅವಕಾಶಕ್ಕೆ ಆಗ್ರಹಿಸಿ ಜೆಡಿಎಸ್ ನಿಂದ ಜಿಲ್ಲಾಡಳಿತಕ್ಕೆ ಮನವಿ

ಹಾಸನ: ಈಗ ನೀಡಲಾಗಿರುವ ಜಿಲ್ಲಾ ಕ್ರೀಡಾಂಗಣದಲ್ಲಿ ವ್ಯಾಪಾರವಾಗದೆ ನಷ್ಟ ಅನುಭವಿಸುತ್ತಿರುವ ವ್ಯಾಪಾರಸ್ತರಿಗೆ ಮತ್ತೆ ನಗರ ಬಸ್ ನಿಲ್ದಾಣದಲ್ಲೆ ತರಕಾರಿ ಮಾರಾಟ ಮಾಡಲು ಅವಕಾಶ ಕೊಡುವಂತೆ ಆಗ್ರಹಿಸಿ ಜೆಡಿಎಸ್ ಪಕ್ಷದ ಮುಖಂಡ ಅಗಿಲೆ ಯೋಗೀಶ್ ನೇತೃತ್ವದಲ್ಲಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.



      ನಗರದ ಕಟ್ಟಿನಕೆರೆ ತರಕಾರಿ ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡುತ್ತಿದ್ದವರನ್ನು ನಗರಸಭೆ ಆಯುಕ್ತರು ಜಿಲ್ಲಾ ಕ್ರೀಡಾಂಗಣಕ್ಕೆ ಸ್ಥಳಾಂತರ ಮಾಡಲಾಗಿದ್ದು, ಆದರೇ ಈ ಭಾಗದಲ್ಲಿ ತರಕಾರಿ ಕೊಂಡುಕೊಳ್ಳಲು ಗ್ರಾಹಕರೆ ಬರುತ್ತಿಲ್ಲ. ತರಕಾರಿ ವ್ಯಾಪಾರವಾಗದೆ ವ್ಯಾಪಾರಸ್ತರು ಪ್ರತಿನಿತ್ಯ ಬಿಸಿಲಿನಲ್ಲಿ ಒಣಗಿ ಹೋಗುತ್ತಿದ್ದಾರೆ. ಅನೇಕ ವರ್ಷಗಳಿಂದ ತರಕಾರಿ ವ್ಯಾಪಾರ ಮಾಡಿಕೊಂಡೆ ಜೀವನ ಸಾಗಿಸುತ್ತಿರುವ ಇವರಿಗೆ ಜೀವನ ನಡೆಸುವುದಕ್ಕೆ ತೊಂದರೆಯಾಗಿದೆ ಎಂದರು. ಕೂಡಲೇ ಜಿಲ್ಲಾಡಳಿತವು ನಗರ ಬಸ್ ನಿಲ್ದಾಣದಲ್ಲಿಯೇ ಸ್ಥಳವಕಾಶ ಮಾಡಿಕೊಡುವ ಮೂಲಕ ವ್ಯಾಪಾರಸ್ತರಿಗೆ ಅನುಕೂಲ ಮಾಡಿಕೊಡುವಂತೆ ಕೋರಿದ ಅವರು, ನಗರಸಭೆ ಆಯುಕ್ತರಿಗೆ ಸೂಚಿಸಬೇಕೆಂದು ಮನವಿ ಮಾಡಲಾಯಿತು.

      ಇದೆ ವೇಳೆ ಜೆಡಿಎಸ್ ಮುಖಂಡರಾದ ದಸ್ತಾಗೀರ್, ಸುನೀಲ್ ಇತರರು ಪಾಲ್ಗೊಂಡಿದ್ದರು.


Post a Comment

Previous Post Next Post