ಹಾಸನ ಜೂ.೧೮;- ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಹಾಗೂ ವಿಕಲ ಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವರಾದ ಶ್ರೀಮತಿ ಶಶಿಕಲಾ ಅಣ್ಣಾ ಸಾಹೇಬ್ ಜೊಲ್ಲೆ ಅವರು ಕೋವಿಡ್ ಸೋಂಕಿನಿಂದ ಮೇ೧೨ ರಂದು ಮೃತಪಟ್ಟ ಅರಕಲಗೂಡು ತಾಲ್ಲೂಕಿನ ವಿಜಾಪುರ ಗ್ರಾಮ ಪಂಚಾಯಿತಿಯ ತಟ್ಟೇಕೆರೆ ಗ್ರಾಮದ ಕುಮಾರ್ ಟಿ.ಡಿ.(೫೧) ಹಾಗೂ ರೂಪ ಅವರ ಮಕ್ಕಳಾದ ಧನ್ಯ (ಹತ್ತನೇ ತರಗತಿ ವಿದ್ಯಾರ್ಥಿನಿ) ಹಾಗೂ ಧನುಷ್ (೯ನೇ ತರಗತಿ ವಿದ್ಯಾರ್ಥಿ) ಅವರನ್ನು ಮಕ್ಕಳ ಸೋದರ ಮಾವ ಚನ್ನಪಟ್ಟಣ ನಿವಾಸಿ ಕೃಷ್ಣಮೂರ್ತಿ ಅವರ ಮನೆಯಲ್ಲಿ ಭೇಟಿಮಾಡಿ ಸಚಿವರು ಸಾಂತ್ವಾನ ಹೇಳಿದರು.
ಅಧಿಕಾರಿಗಳು ಮಕ್ಕಳು ಹಾಗೂ ಪೋಷಕರೊಂದಿಗೆ ಸಂಪರ್ಕದಲ್ಲಿ ಇದ್ದು ಸರ್ಕಾರದ ಸೌಲಭ್ಯಗಳನ್ನು ದೊರಕಿಸುವ ಜೊತೆಗೆ ಮಕ್ಕಳಿಗೆ ಆತ್ಮ ಸ್ಥೈರ್ಯ ತುಂಬಿ ಎಂದು ಸಚಿವರಾದ ಶಶಿಕಲಾ ಜೊಲ್ಲೆ ಅಧಿಕಾರಿಗಳಿಗೆ ಸೂಚಿಸಿದರು.
ಕುಮಾರ್ ಅವರು ಹೊನಗನಹಳ್ಳಿ ಸರ್ಕಾರಿ ಅನುದಾನಿತ ಶಾಲೆಯಲ್ಲಿ ಅಟೆಂಡರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.ಸೋದರಮಾವ ಕೃಷ್ಣಮೂರ್ತಿ ಹಾಸನ ತಾಲ್ಲೂಕಿನ ಮುತ್ತಿಗೆ ಗ್ರಾಮದ ಶಾಲೆಯ ಶಿಕ್ಷಕರಾಗಿದ್ದಾರೆ
ಶಾಸಕರಾದ ಪ್ರೀತಂ ಗೌಡ ಅವರು ಹಾಜರಿದ್ದು ಮಕ್ಕಳಿಗೆ ಧೈರ್ಯ ತುಂಬಿ ಶಿಕ್ಷಣಕ್ಕೆ ಎಲ್ಲಾ ರೀತಿಯ ನೆರವು ನೀಡುವುದಾಗಿ ಹೇಳಿದರು..