ಹಾಸನ ಜೂ.೧೮:- ಕೋವಿಡ್ ಮೂರನೇ ಅಲೆ ಮಕ್ಕಳನ್ನು ಹೆಚ್ಚು ಬಾಧಿಸುವ ಬಗ್ಗೆ ತಜ್ಞರು ಎಚ್ಚರಿಕೆ ನೀಡಿರುವ ಹಿನ್ನಲೆಯಲ್ಲಿ ಎಲ್ಲಾ ರೀತಿಯ ಮುಂಜಾಗ್ರತೆ ಹಾಗೂ ಚಿಕಿತ್ಸೆಗೆ ಅಗತ್ಯ ಪೂರ್ವ ಸಿದ್ದತೆ ಮಾಡಿಕೊಳ್ಳುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಹಾಗೂ ವಿಕಲ ಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವರಾದ ಶ್ರೀಮತಿ ಶಶಿಕಲಾ ಅಣ್ಣಾ ಸಾಹೇಬ್ ಜೊಲ್ಲೆ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿAದು ಮೂರನೇ ಅಲೆಯಿಂದ ಮಕ್ಕಳ ರಕ್ಷಣೆ ಹಾಗೂ ಆರೈಕೆಗೆ ಕೈಗೊಳ್ಳಬಹುದಾದ ಮುಂಜಾಗ್ರತಾ ಕ್ರಮಗಳ ಕುರಿತು ಜನ ಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಭೆ ನಡೆಸಿದ ಅವರು ಗರಿಷ್ಠ ಮುನ್ನೆಚ್ಚರಿಕೆ ಹಾಗೂ ವ್ಯವಸ್ಥಿತ ಸಿದ್ದತೆಗೆ ಸೂಚನೆ ನೀಡಿದರು.
ಪ್ರತಿ ಜಿಲ್ಲಾ ಹಾಗೂ ತಾಲ್ಲೂಕು ಅಸ್ಪತ್ರೆಗಳಲ್ಲಿ ಮಕ್ಕಳ ಐ.ಸಿ.ಯು ವಾರ್ಡ್ ವೆಂಟಿಲೇಟರ್ ವ್ಯವಸ್ಥೆ, ತಜ್ಞ ವೈದ್ಯರ ನಿಯೋಜನೆ, ಆಮ್ಲಜನಕ ಪೂರೈಕೆ ವ್ಯವಸ್ಥೆ, ಔಷಧಿ ಸರಬರಾಜು ಮತ್ತಿತರ ಪ್ರಮುಖ ಅಂಶಗಳ ಬಗ್ಗೆ ನಿಗಾವಹಿಸುವಂತೆ ಸಚಿವರು ಸೂಚನೆ ನೀಡಿದರು.
ರಾಜ್ಯದಲ್ಲಿ ಕೋವಿಡ್ ೧೯ ನಿಂದ ೪೮ ಮಕ್ಕಳು ತಂದೆ ತಾಯಿ ಇಬ್ಬರನ್ನೂ ಕಳೆದು ಕೊಂಡಿದ್ದಾ ರೆ ಸಾವಿರಾರು ಮಕ್ಕಳು ತಂದೆ ಅಥವಾ ತಾಯಿ ಇಬ್ಬರಲ್ಲಿ ಒಬ್ಬರನ್ನು ಕಳೆದುಕೊಂಡಿದ್ದಾರೆ. ಗ್ರಾಮಮಟ್ಟದಿಂದಲೂ ಇಂತಹ ಮಕ್ಕಳನ್ನು ಗುರುತಿಸಿ ಮುಖ್ಯಮಂತ್ರಿ ಬಾಲ ಸೇವಾ ಯೋಜನೆಯಡಿ ಪ್ರತಿ ತಿಂಗಳು ೩೫೦೦ ರೂ ಹಣ ನೀಡುವುದು ಹಾಗೂ ಎಸ್.ಎಸ್.ಎಲ್.ಸಿ ವರಗೆ ಉಚಿತ ಶಿಕ್ಷಣ ಹಾಗೂ ಉನ್ನತ ಶಿಕ್ಷಣಕ್ಕೆ ನೆರವು ನೀಡುವುದು ಹಾಗೂ ಹೆಣ್ಣುಮಕ್ಕಳಿಗೆ ೨೧ ವರ್ಷ ತುಂಬಿದಾಗ ೧ಲಕ್ಷರೂ ನೀಡುವ ಯೋಜನೆ ರೂಪಿಸಲಾಗಿದೆ ಎಂದರು.
ಗ್ರಾಮವಾರು ಮಕ್ಕಳನ್ನು ಗುರುತುಸಿ ಬಾಲಸಹಾಯ್ ಪೋರ್ಟಲ್‌ನಲ್ಲಿ ದಾಖ ಲಿಸಲಾಗುವುದು ೬೫೯೧೧ ಅಂಗನವಾಡಿ ಕೇಂದ್ರಗಳಿದ್ದು, ಕಳೆದ ವರ್ಷ ಹಲವು ಕಟ್ಟಡ ನಿರ್ಮಾಣ ಮಾಡಲಾಗಿದೆ. ನಿವೇಶನ ಲಭ್ಯ ಇರುವ ಕಡೆ ಶೀಘ್ರದಲ್ಲಿ ಹೊಸ ಕಟ್ಟಡ ನಿರ್ಮಾಣ ಮಾಡಲಾಗುವುದು ಎಂದರು
ತೀವ್ರ ಅಪೌಷ್ಟಿಕತೆ ಇರುವ ಎಲ್ಲಾ ಮಕ್ಕಳನ್ನು ಗುರುತಿಸಲು ಮರು ಸಮೀಕ್ಷೆ ಮಾಡಲು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಸಿ.ಇ.ಒ ಕ್ರಮವಹಿಸಬೇಕು ಅವರಿಗೆ ಇಲಾಖೆ ವತಿಯಿಂದ ಮೊದಲು ನೀಡುತ್ತಿದ್ದ ಆಹಾರದ ಜೊತೆಗೆ ಪೌಷ್ಠಿಕಾಂಶ ಹೆಚ್ಚಿಸಲು ಕಿಟ್ ವಿತರಣೆಗೆ ಕ್ರಮ ವಹಿಸಲಾಗುವುದು ಎಂದರು.
ಬಾಲ ಹಿತೈಶಿ ಯೋಜನೆಯಡಿ ತಂದೆ ತಾಯಿ ಇಬ್ಬರನ್ನೂ ಕಳೆದು ಕೊಂಡ ಮಕ್ಕಳ ಆರೈಕೆಗೆ ಯಾರಾದರೂ ಮುಂದೆ ಬಂದರೆ ಅಥವಾ ದತ್ತು ಪಡೆಯಲು ಬಯಸುವವರಿಗೆ ನಿಯಮಾನುಸಾರ ಅವಕಾಶ ನೀಡಲಾಗುವುದು .ಸಹೃದಯರು ಈ ಬಗ್ಗೆ ಸಹಕರಿಸಬೇಕು ಎಂದು ಕೋರಿದರು.
ಅಂಗನವಾಡಿ ಕಾರ್ಯಕರ್ತೆಯರನ್ನು ಫ್ರಂಟ್ ಲೈನ್ ವಕರ‍್ಸ್ ಎಂದು ಗುರುತಿಸಿದ್ದು, ಕೋವಿಡ್ ನಿಂದ ಮೃತಪಟ್ಟವರಿಗೆ ೩೦ ಲಕ್ಷ ಒದಗಿಸಲಾಗುವುದು ಎಂದರು.
ಅಂಗನವಾಡಿ ಕೇಂದ್ರದ ಮೂಲಕ ಬಾಣಂತಿಯರು ಹಾಗೂ ಮಕ್ಕಳಿಗೆ ಪೂರಕ ಪೌಷ್ಠಿಕ ಆಹಾರವನ್ನು ಮನೆಗಳಿಗೆ ಕಳಿಸಿಕೊಡಲು ಕ್ರಮವಹಿಸಲಾಗುತ್ತಿದೆ .ವಲಸೆ ಬಂದವರಿಗೂ ಕೊಡಲಾಗುತ್ತಿದೆ ಎಂದು ಸಚಿವೆ ಅಣ್ಣಾ ಸಾಹೇಬ್ ಶಶಿಕಲಾ ಜೊಲ್ಲೆ ಹೇಳಿದರು.
ತಾಲ್ಲೂಕು ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳನ್ನು ಬಲಪಡಿಸಬೇಕಿದೆ ಬೆಡ್‌ಗಳಿಗೆ ಯಾವುದೆ ಕೊರತೆಯಾಗಲಾರದು. ಮಕ್ಕಳಿಗೆ ಬೇಕಾದ ವೆಂಟಿಲೇಟರ್ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದರು.
ಮಕ್ಕಳ ತಜ್ಞರ ಸಂಘ ಕೋವಿಡ್ ಸೋಂಕಿತ ಮಕ್ಕಳ ಚಿಕಿತ್ಸೆಗೆ ಉಚಿತವಾಗಿ ಸೇವಾ ನೆರವು ನೀಡುವ ಆಶ್ವಾಸನೆ ನೀಡಿದ್ದು ಅವರ ಸಹಕಾರ ಬಳಸಲಾಗುವುದು ಎಂದರಲ್ಲದೆ ಮೂರನೆ ಅಲೆಯಲ್ಲಿ ಮಕ್ಕಳಿಗೆ ಯಾವುದೇ ಹೆಚ್ಚಿನ ಅಪಾಯ ಎದುರಾಗದಂತೆ ಮುನ್ನೆಚ್ಚರಿಕೆ ವಹಿಸಲಾಗುವುದು ಎಂದರು.
ಶಾಸಕರ ಸಲಹೆಗಳನ್ನು ಸ್ವೀಕರಿಸಿ ಸುಧಾರಣೆ ಮಾಡಲು ಪ್ರಯತ್ನ ಮಾಡಲಾಗುವುದು ಎಂದು ಸಚಿವರು ತಿಳಿಸಿದರು.
ಜಿಲ್ಲಾಧಿಕಾರಿ ಅರ್ ಗಿರೀಶ್ ಅವರು ಮಾತನಾಡಿ ಕೋವಿಡ್ ಮೊದಲ ಹಾಗೂ ಎರಡನೆ ಅಲೆಯಲ್ಲಿನ ಸೋಂಕು,ಸಾವಿನ ಪ್ರಮಾಣ ಪೋಷಕರನ್ನು ಕಳೆದುಕೊಂಡ ಮಕ್ಕಳು, ಸೋಂಕಿನಿAದ ಮೃತಪಟ್ಟ ಮಕ್ಕಳ ವಿವರ ಒದಗಿಸಿದರು. ಜಿಲ್ಲೆಯಲ್ಲಿ ಕೊರೋನಾದಿಂದ ಮೂವರು ಮಕ್ಕಳು ಅಸುನೀಗಿವೆ ಇವರಲ್ಲಿ ೨ ನವಜಾತ ಶಿಶುಗಳು, ಒಂದು ಎರಡು ತಿಂಗಳ ಮಗು ಎಂದರು.
ಶಾಸಕರಾದ ಕೆ.ಎಂ.ಶಿವಲಿAಗೇ ಗೌಡ ಅವರು ಮಾತನಾಡಿ ಕೋವಿಡ್ ಎರಡನೆ ಅಲೆಯಲ್ಲಿ ಎಚ್ಚರ ತಪ್ಪಿದಂತೆ ಮೂರನೆ ಅಲೆಯನ್ನು ಅಲಕ್ಷಿಸುವುದು ಬೇಡ .ಮಕ್ಕಳ ಚಿಕಿತ್ಸೆಗೆ ಅಗತ್ಯ ಪ್ರಮಾಣದ ವೈದ್ಯರ ನೇಮಕವಾಗಬೇಕು. ಆಸ್ಪತ್ರೆಯಲ್ಲಿ ಬೆಡ್ ವ್ಯವಸ್ಥೆ ಜೊತೆಗೆ ಪ್ರತ್ಯೇಕ ಕೋವಿಡ್ ಕೇರ್ ಕೇಂದ್ರ ಪ್ರಾರಂಭಿಸಬೇಕು ಚಿಕ್ಕ ಮಕ್ಕಳ ಜೊತೆಗೆ ಒಬ್ಬರು ಪೋಷಕರನ್ನು ಇರಲು ವ್ಯವಸ್ಥೆ ಮಾಡಬೇಕು. ಅಪೌಷ್ಠಿಕತೆ ಇರುವ ಮಕ್ಕಳನ್ನು ಗುರುತಿಸಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಹಾರ ನೀಡಿ ಎಂದರು.
ಎಲ್ಲಾ ಮಕ್ಕಳಿಗೆ ಕೋವಿಡ್ ಲಸಿಕೆ ನೀಡಲು ಕ್ರಮವಹಿಸಿ ಇದು ಹೆಚ್ಚು ಪರಿಣಾಮಕಾರಿ ಎಲ್ಲಾ ತಾಲ್ಲೂಕು ಆಸ್ಪತ್ರೆಗಳ ಸುಣ್ಣ ಬಣ್ಣ, ಹೊದಿಕೆಗಳ ಬದಲಾವಣೆಗೆ ಎಸ್ .ಡಿ ಆರ್ ಎಫ್ ನಿಂದ ಹಣ ಬಿಡುಗಡೆ ಮಾಡುವಂತೆ ಕೋರಿದರು.
ಶಾಸಕರಾದ ಸಿ.ಎನ್.ಬಾಲಕೃಷ್ಣ ಅವರು ಮಾತನಾಡಿ ಮಕ್ಕಳಿಗೆ ೨೫೦ ಹಾಸಿಗೆಗಳ ವ್ಯವಸ್ಥೆ ಮಾಡಿ.
ಅಪೌಷ್ಟಿಕತೆ ಮಕ್ಕಳನ್ನು ಹಾಗೂ ನಿರ್ಗತಿಕರ ಮರು ಸಮೀಕ್ಷೆ ನಡೆಸಿ ,ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರಿಗೆ ವೇತನ ಹೆಚ್ಚಿಸಿ ಎಂದು ಮನವಿ ಮಾಡಿದರು.
ಶಾಸಕರಾದ ಕೆ.ಎಸ್.ಲಿಂಗೇಶ್ ಅವರು ಮಾತನಾಡಿ ಎಲ್ಲಾ ಆಸ್ಪತ್ರೆಗಳಿಗೆ ಮಕ್ಕಳ ವೈದ್ಯರ ನೇಮಕ ಮಾಡಿ,ಮಕ್ಕಳಿಗೆ ನೀಡುತ್ತಿರುವ ಪೂರಕ ಪೌಷ್ಟಿಕ ಆಹಾರ ಗುಣಮಟ್ಟ ಇಲ್ಲ ಅದನ್ನು ಸುಧಾರಿಸಿಬೇಕು ಎಂದು ಒತ್ತಾಯಿಸಿದರು. ಶಾಸಕರಾದ ಕೆ.ಎಂ ಶಿವಲಿಂಗೇಗೌಡ,ಹಾಗೂ ಸಿ.ಎನ್.ಬಾಲಕೃಷ್ಣ ಅವರೂ ಇದಕ್ಕೆ ಧ್ವನಿಗೂಡಿಸಿ ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವರಾದ ಶ್ರೀಮತಿ ಶಶಿಕಲಾ ಅಣ್ಣಾ ಸಾಹೇಬ್ ಜೊಲ್ಲೆ ಅವರು ಪೂರಕ ಪೌಷ್ಠಿಕ ಆಹಾರ ಗುಣಮಟ್ಟ ಸುಧಾರಣೆ ಹಾಗೂ ಲೋಪ ತಡೆಯಲು ಕ್ರಮಕೈಗೊಳ್ಳಲಾಗುವುದು ಎಂದರು.
ತಜ್ಞ ರೊಂದಿಗೆ ಸಭೆಗಳನ್ನು ನಡೆಸಲಾಗಿದ್ದು ಇದಕ್ಕೆ ಒಂದಿಷ್ಟು ಕಾಲವಕಾಶ ಅಗತ್ಯ ಅವ್ಯವಸ್ಥೆ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಸಚಿವರು ಭರವಸೆ ನೀಡಿದರು .
ಶಾಸಕರಾದ ಪ್ರೀತಂ ಜೆ.ಗೌಡ ಅವರು ಜಿಲ್ಲೆಯಲ್ಲಿ ಕೋವಿಡ್ ಮೂರನೆ ಅಲೆ ತಡೆಗೆ ಮಾಡಿ ಕೊಂಡಿರುವ ಸಿದ್ದತೆ ಬಗ್ಗೆ ವಿವರಿಸಿದರುಮಕ್ಕಳಿಗೆ ರೋಗ ನಿರೋಧಕ ಶಕ್ತಿ ವೃದ್ದಿಗೆ ಕ್ರಮವಹಿಸಬೇಕು ತಾಲ್ಲೂಕು ಆಸ್ಪತ್ರೆಗಳನ್ನು ಬಲಪಡಿಸಿ ಕೋವಿಡ್ ಚಿಕಿತ್ಸೆಗೆ ಬಳಸಿ ಹಿಮ್ಸ್ ಆಸ್ಪತ್ರೆಯನ್ನು ಇತರ ಸಾಮನ್ಯ ರೋಗಿಗಳ ಚಿಕಿತ್ಸೆಗೆ ತೆರೆಯಬೇಕು ಎಂದರು.
ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಣಾಧಿಕಾರಿ ಬಿ.ಎ ಪರಮೇಶ್, ಅಪರ ಜಿಲ್ಲಾಧಿಕಾರಿ ಕವಿತಾ ರಾಜಾರಾಂ, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ಸತೀಶ್, ಜಿಲ್ಲಾ ಶಸ್ತç ಚಿಕಿತ್ಸಕರಾದ ಡಾ|| ಕೃಷ್ಣಮೂರ್ತಿ ಹಾಗೂ ಮತ್ತಿತರ ಅಧಿಕಾರಿಗಳು ಹಾಜರಿದ್ದರು.