ಕೊರೊನಾ ಸೋಂಕಿನಿಂದ ಮಿಲ್ಕಾ ಸಿಂಗ್ ನಿಧನ

 ಚಂಡೀಗಡ: ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ಅಥ್ಲೀಟ್ ಪಟು ಮಿಲ್ಕಾ ಸಿಂಗ್ ಶುಕ್ರವಾರ ಮಧ್ಯರಾತ್ರಿ ನಿಧನರಾಗಿದ್ದಾರೆ.

 


ಮಿಲ್ಕಾ ಸಿಂಗ್ (91) ಅವರನ್ನು ಮೇ 24 ರಂದು ಮೊಹಾಲಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಿಲ್ಕಾ ಸಿಂಗ್ ಪತ್ನಿ ನಿರ್ಮಲ್ ಕೌರ್ ಐದು ದಿನದ ಹಿಂದಷ್ಟೇ ಮೃತಪಟ್ಟಿದ್ದರು.

400 ಮೀಟರ್ ಓಟದಲ್ಲಿ ಹಲವು ದಾಖಲೆ ನಿರ್ಮಿಸಿರುವ ಮಿಲ್ಕಾ ಸಿಂಗ್, 1958 ಕಾಮನ್ ವೆಲ್ತ್ ಗೇಮ್ಸ್ ಚಾಂಪಿಯನ್‌, ನಾಲ್ಕು ಬಾರಿ ಏಷ್ಯನ್ ಗೇಮ್ಸ್ ಚಾಂಪಿಯನ್ ಆಗಿದ್ದರು.

Post a Comment

Previous Post Next Post