ಹೊಳೆನರಸಿಪುರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿವಿಧ ಕಾರಣದಿಂದ ಈ ಕೆಳಕಂಡ ದ್ವಿಚಕ್ರ ವಾಹನಗಳನ್ನು ಅಮಾನತ್ತು ಪಡಿಸಿಕೊಳ್ಳಲಾಗಿದ್ದು, ಸದರಿ ವಾಹನದ ವಾರಸುದಾರರು ಇದುವರೆಗೂ ವಾಹನಗಳನ್ನು ಪಡೆದುಕೊಂಡು ಹೋಗಲು ಬಂದಿರುವುದಿಲ್ಲ. ವಾಹನಗಳÀ ಮಾಲೀಕರನ್ನು ಪತ್ತೆಮಾಡಿ ವಾರಸುದಾರರಿಗೆ ದಾಖಲಾತಿಯನ್ನು ಪರಿಶೀಲಿಸಿ ಇಂಡಿಮಿನಿಟಿ ಬಾಂಡ್ ಪಡೆದು ಬಿಡುಗಡೆ ಮಾಡಲು ನ್ಯಾಯಾಲಯದಿಂದ ಅನುಮತಿಯನ್ನು ಪಡೆಯಲಾಗಿದ್ದು, ಸದರಿ ವಾಹನಗಳ ವಾರಸುದಾರರು ಯಾರಾದರೂ ಇದ್ದರೆ ಕೂಡಲೇ ವಾಹನದ ದಾಖಲಾತಿಯೊಂದಿಗೆ ಹೊಳೆನರಸೀಪುರ ನಗರ ಪೊಲೀಸ್ ಠಾಣೆಯ ಪಿಎಸ್‌ಐ ರವರನ್ನು ಸಂಪರ್ಕಿಸಬೇಕೆAದು ಈ ಮೂಲಕ ಸಾರ್ವಜನಿಕರಿಗೆ ಜಿಲ್ಲಾ ಪೊಲೀಸ್ ಇಲಾಖೆಯಿಂದ ತಿಳಿಯಪಡಿಸಲಾಗಿದೆ. ವಾರಸುದಾರರು ಹಾಜರಾಗದೇ ಇದ್ದರೆ ನ್ಯಾಯಾಲಯದ ಅನುಮತಿಯನ್ನು ಪಡೆದು ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಲಾಗುವುದು.
Tags
ಹೊಳೆನರಸೀಪುರ