ಹಾಸನ: ನಗರದ ಅರಳೀಕಟ್ಟೆ ರಸ್ತೆ ಬಳಿ ಇರುವ ತವರು ಚಾರಿಟಬಲ್ ಟ್ರಸ್ಟ್ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಬಡವರಿಗೆ ಉಚಿತ ಪೌಷ್ಠಿಕ ಪಡಿತರ ವಿತರಣೆ ಕಾರ್ಯಕ್ರಮವನ್ನು ನೆರವೇರಿಸಲಾಯಿತು.
ನಂತರ ಮಾತನಾಡಿದ ಹಿರಿಯ ವಕೀಲರಾದ ಲಕ್ಷ್ಮೀಕಾಂತ್ ಮತ್ತು ಬಿಜೆಪಿ ಮುಖಂಡರಾದ ಪ್ರೀತಿವರ್ಧನ್ ಅವರು, ಡಾ|| ಪಾಲಾಕ್ಷ ಅವರು ವೈದ್ಯರೊಂದಿಗೆ ಸೇವೆಯಂತಹ ಕೆಲಸವನ್ನು ಹೆಚ್ಚು ಮೈಗೂಡಿಸಿಕೊಂಡಿದ್ದಾರೆ. ಆದರೇ ಅವರು ಇಲ್ಲೂ ಅದನ್ನು ಬಹಿರಂಗಪಡಿಸಲೂ ಹೋಗಲಿಲ್ಲ. ಇಂದು ಕೊರೋನಾ ಆವರಿಸಿ ಜನರು ಸಂಕಷ್ಟಕ್ಕೆ ಒಳಗಾಗಿರುವ ವೇಳೆ ಆಹಾರದ ಕಿಟ್ ಗಳನ್ನು ಕೊಡುವ ಮತ್ತಮ ಕೆಲಸ ಮಾಡುತ್ತಿದ್ದಾರೆ ಎಂದರು. ತವರು ಚಾರಿಟಬಲ್ ಹೆಸರಿನಲ್ಲಿ ಮಕ್ಕಳ ಉಳಿಸುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಮನುಷ್ಯ ಮನುಷ್ಯತ್ವವನ್ನು ಉಳಿಸಿಕೊಂಡರೆ ಮಾತ್ರ ಜೀವನ ಸಾರ್ಥಕ ಪಡಿಸಿಕೊಳ್ಳಬಹುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಂಜೇಗೌಡ, ರುಕ್ಮನಂದ್ ಸೇರಿದಂತೆ ಇತರರು ಪಾಲ್ಗೊಂಡಿದ್ದರು.
Tags
ಹಾಸನ