ಹಾಸನ: ಕೊರೋನಾದಿಂದ ಜನರು ಒಂದು ಕಡೆ ಪ್ರಾಣ ಕಳೆದುಕೊಳ್ಳುತ್ತಿರುವ ವೇಳೆ ಈಬಗ್ಗೆ ಚಕಾರ ಎತ್ತದವರು ತೈಲ ಬೆಲೆ ಏರಿದ ಕೂಡಲೇ ಇದರ ವಿರುದ್ಧ ತಕ್ಷಣದಲ್ಲಿ ಪ್ರತಿಭಟನೆ ಮಾಡುವ ಅವಶ್ಯಕತೆ ಇತ್ತಾ ಎಂದು ಕಾಂಗ್ರೆಸ್ ಪಕ್ಷದ ನಡೆ ವಿರುದ್ಧ ಜೆಡಿಎಸ್ ತಾಲೂಕು ಅಧ್ಯಕ್ಷ ಎಸ್. ದ್ಯಾವೇಗೌಡ ಅವರು ಆಕ್ರೋಶವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸೋಮವಾರದಂದು ಮಾತನಾಡುತ್ತಾ, ಕಾಂಗ್ರೆಸ್ ಪಕ್ಷವು ಪ್ರಚಾರಕ್ಕಾಗಿ ತೈಲ ಬೆಲೆ ವಿರುದ್ಧ ಪ್ರತಿಭಟನೆಯಂತಹದನ್ನು ನಡೆಸಲಾಗುತ್ತಿದೆ ಎಂಬ ಮಾಜಿ ಸಚಿವರಾದ ಹೆಚ್.ಡಿ. ರೇವಣ್ಣನವರ ಹೇಳಿಕೆ ಹಿಂದೆ ಅರ್ಥವಿದೆ. ಕಾಂಗ್ರೆಸ್ ಪಕ್ಷವು ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಏರಿಕೆಯಾದ ತಕ್ಷಣ ದೇಶದಾಧ್ಯಂತ ಹಾಗು ರಾಜ್ಯಾಧ್ಯಂತ ಪ್ರತಿಭಟನೆ ಮಾಡಿದರು. ಕೊರೋನಾದಿಂದ ದೇಶ ಮತ್ತು ರಾಜ್ಯದಲ್ಲಿ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಕೋಟ್ಯಾಂತರ ಜನ ಮಹಾಮಾರಿಯಿಂದ ನರಳುತ್ತಿರುವ ಇಂತಹ ಸಂದರ್ಭದಲ್ಲಿ ಜನರ ಪ್ರಾಣ ಉಳಿಸಲು, ನೆರವಾಗುವ ಬಗ್ಗೆ ಚಕಾರ ಎತ್ತದವರು ತೈಲ ಬೆಲೆ ಏರಿಕೆಯಾದ ಎರಡು ದಿನಕ್ಕೆ ಪ್ರತಿಭಟನೆ ಮಾಡಿರುವುದು ಯಾವ ಅರ್ಥವಿದೆ ಎಂದು ಪ್ರಶ್ನಿಸಿದ ಅವರು ಕೇವಲ ಪ್ರಚಾರಕ್ಕಾಗಿ ಇಂತಹ ಪ್ರತಿಭಟನೆಯಾಗಿದೆ ಎಂದರು. ಕೊರೋನಾ ಆವರಿಸಿ ಹಾಸನದಲ್ಲಿ ಅದೇಷ್ಟೊ ಮಂದಿ ಸಾವನಪ್ಪಿದ್ದಾರೆ. ಚಿಕಿತ್ಸೆ ವೇಳೆ ರೆಮಿಡಿಸವರ್ ಮೆಡಿಸನ್ ಸಿಗದೆ, ಆಕ್ಸಿಜನ್ ಸಿಗದೆ, ಸರಿಯಾಗಿ ಹಾಸಿಗೆ ಇಲ್ಲದೆ ಸಮಸ್ಯೆ ಬಗ್ಗೆ, ಇನ್ನು ಖಾಸಗಿ ಆಸ್ಪತ್ರೆಯಲ್ಲಿ ಹೆಚ್ಚಿನ ಶುಲ್ಕ ವಸೂಲಿ ಇರಬಹುದು ಈಬಗ್ಗೆ ಕಾಂಗ್ರೆಸ್ ಪಕ್ಷದಿಂದ ಒಂದು ದಿವಸವು ಮಾತನಾಡಲಿಲ್ಲ. ಆದರೇ ಮಾಜಿ ಸಚಿವರಾದ ಹೆಚ್.ಡಿ. ರೇವಣ್ಣನವರು ಪ್ರತಿದಿನ ಹೇಳಿಕೆ ಕೊಡುವುದರ ಮೂಲಕ ಸರಕಾರಕ್ಕೆ ಎಚ್ಚರಿಕೆ ಮತ್ತು ಸಲಹೆ ಕೊಡುವ ಉತ್ತಮ ಕೆಲಸ ಮಾಡಿದ್ದಾರೆ. ಕೊರೋನಾವನ್ನು ಸರಿಯಾಗಿ ನಿರ್ವಹಣೆ ಮಾಡದಿದ್ದರೇ ಮುಖ್ಯಮಂತ್ರಿ ಮನೆ ಮುಂದೆ ಧರಣಿ ಮಾಡುವುದಾಗಿ ಗಡುವು ಕೂಡ ಕೊಟ್ಟಿದ್ರು. ಇಂತಹ ವೇಳೆ ಕಾಂಗ್ರೆಸ್ ಪಕ್ಷದಿಂದ ಯಾವ ಪ್ರತಿಭಟನೆ ನಡೆಯಲಿಲ್ಲ ಎಂದು ಕಿಡಿಕಾರಿದರು.
ಮುಖ್ಯಮಂತ್ರಿ ಯಡಿಯೂರಪ್ಪನವರು ಹಾಸನ ಜಿಲ್ಲೆಗೆ ಭೇಟಿ ನೀಡಿದ ಮೇಲೆ ರೇವಣ್ಣನವರು ಮೃದುದೋರಣೆ ತೋರಿಸಿದ್ದಾರೆ ಎಂದು ಕಾಂಗ್ರೆಸ್ ದೂರುಗಳೆಲ್ಲಾ ಸುಳ್ಳು ಹೇಳಿಕೆಯಾಗಿದೆ ಎಂದರು. ಏಕ ಏಕಿ ಪ್ರತಿಭಟನೆ ಮಾಡಿರುವುದು ಪ್ರಚಾರಕ್ಕಾಗಿಯೇ ವರತು ಇದು ಯಾರು ಉಪಯೋಗಕ್ಕಾಗಿ ಅಲ್ಲ ಎಂದು ಕಾಂಗ್ರೆಸ್ ಪಕ್ಷದ ಮುಖಂಡರ ಹೇಳಿಕೆಗೆ ತಿರುಗೇಟು ನೀಡಿದರು. ಕೊರೋನಾ ಎಂದರೇ ಎಚ್ಚರಿಕೆ ಇರುವ ಖಾಯಿಲೆ ಎಂದು ತಿಳಿದಿದ್ದರೂ ಪ್ರತಿಭಟನೆ ಮಾಡುವಾಗಲು ಕೂಡ ಯಾವ ಸಾಮಾಜಿಕ ಅಂತರವಿರಲಿಲ್ಲ. ಮಾಸ್ಕ್ ಕೂಡ ಅನೇಕರಲ್ಲಿ ಇರಲಿಲ್ಲ. ಇನ್ನು ಸರಕಾರವು ಮದುವೆ ಸಮಾರಂಭ ನಡೆಸಲು ೪೦ ಜನರಿಗೆ, ಶವ ಸಂಸ್ಕಾರ ಮಾಡಲು ಕೇವಲ ೫ ಜನರಿಗೆ ಅವಕಾಶ ಕೊಟ್ಟಿದೆ. ಆದರೇ ಪೆಟ್ರೋಲ್ ಬಂಕ್ ಮುಂದಾ ನೂರಾರು ಜನ ರಾಜ್ಯದ್ಯಂತ ಸೇರಿ ಪ್ರತಿಭಟನೆ ಮಾಡಿರುವುದು ಯಾವ ಅರ್ಥ. ಮಾಜಿ ಸಚಿವರ ವಿರುದ್ಧ ಮಾತನಾಡಬೇಕಾದರೇ ಈ ರೀತಿ ಸುಳ್ಳು ಹೇಳಿಕೆಗಳನ್ನು ಕೊಡದೆ, ಜವಬ್ಧಾರಿಯುತವಾಗಿ ನಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ಮುಖಂಡರು ಮತ್ತು ವಕೀಲರಾದ ಎಂ.ಬಿ. ವಿಶ್ವನಾಥ್, ಕೆ.ಟಿ. ಮಂಜಯ್ಯ, ಗೋಪಾಲೇಗೌಡ, ಶೇಷಾದ್ರಿ, ಮಂಜುನಾಥ್ ಇತರರು ಉಪಸ್ಥಿತರಿದ್ದರು.