ಹಾಸನ:- ವಿಕಲಚೇತನರು, ಬೀದಿ ಬದಿ ವ್ಯಾಪಾರಿಗಳು ಸರ್ಕಾರ ಗುರುತಿಸಲ್ಪಟ್ಟಿರುವ ಆದ್ಯತಾ ಗುಂಪುಗಳ ಎಲ್ಲರಿಗೂ ಸೇರಿದಂತೆ ಲಸಿಕೆ ನೀಡಲು ಶೀಘ್ರವಾಗಿ ಕ್ರಮವಹಿಸಿ ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ಸೂಚಿಸಿದ್ದಾರೆ.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಮೇ.31 ರಂದು ನಡೆದ ತಾಲ್ಲೂಕು ವಿಡಿಯೋ ಸಂವಾದದಲ್ಲಿ ಎಲ್ಲಾ ತಹಶೀಲ್ದಾರ್‌ಗಳು ಹಾಗೂ ತಾಲ್ಲೂಕು ಆರೋಗ್ಯ ಅಧಿಕಾರಿಗಳೊಂದಿಗೆ ಮಾತನಾಡಿದ ಅವರು ಗುರುತಿಸಿರುವ ಮುಂಚೂಣಿ ಕಾರ್ಯಕರ್ತರು ಹಾಗೂ ಆದ್ಯತಾ ಗುಂಪುಗಳಿಗೆ ಮಾಹಿತಿ ನೀಡಿ ಲಸಿಕೆ ನೀಡುವಂತೆ ತಿಳಿಸಿದರು.
ಮುಂಚೂಣಿ ಕಾರ್ಯಕರ್ತ ಹಾಗೂ ಆದ್ಯತಾ ಗುಂಪುಗಳ ಫಲಾನುಭವಿಗಳು ಬೇರೆ ಬೇರೆ ಇಲಾಖೆಗಳಿಗೆ, ಸಂಸ್ಥೆಗಳ ವ್ಯಾಪ್ತಿಗೆ ಬರುವುದರಿಂದ ಎಲ್ಲಾ ತಾಲ್ಲೂಕುಗಳ ತಹಸೀಲ್ದಾರ್ ಹಾಗೂ ಟಿ.ಹೆಚ್.ಒ ಗಳು ಅವರ ಜೊತೆ ಸಹಕರಿಸಿ ಅವರಿಗೆ ಲಸಿಕೆ ನೀಡುವ ಕೆಲಸ ಮಾಡಬೇಕು ಎಂದು ಅವರು ಹೇಳಿದರು.
ಫಲಾನುಭವಿಗಳು ತಮ್ಮ ಗುರುತಿನ ಚೀಟಿ ತೋರಿಸಿ ಸಮೀಪದ ಲಸಿಕಾ ಕೇಂದ್ರದಲ್ಲಿ ಲಸಿಕೆ ಪಡೆಯಬಹುದಾಗಿದೆ. ಒಂದು ವೇಳೆ ಗುರುತಿನ ಚೀಟಿ ಇಲ್ಲದಿದ್ದರೆ ಸಂಬAಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ನಿಗಧಿತ ನಮೂನೆಯಲ್ಲಿ ಸಹಿ ಪಡೆದು ಅದನ್ನು ಸಲ್ಲಿಸಿ ಲಸಿಕೆ ಪಡೆಯುವಂತೆ ನೋಡಿಕೊಳ್ಳುವ ಜವಾಬ್ದಾರಿ ಆಯಾಯ ಇಲಾಖೆಗಳ ಅಧಿಕಾರಿಗಳ ಮೇಲಿರುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಆಟೋ, ಟ್ಯಾಕ್ಸಿ, ಕ್ಯಾಬ್ ಚಾಲಕರುಗಳಿಗೆ ಬ್ಯಾಡ್ಜ್ ನೋಡಿ ಲಸಿಕೆ ನೀಡಿ ಒಂದು ವೇಳೆ ಇಲ್ಲದಿದ್ದರೆ ಅವರ ವಾಹನ ಪರವಾನಿಗೆಗಳನ್ನು ನೋಡಿ ಲಸಿಕೆ ನೀಡಿ ಎಂದರಲ್ಲದೆ ಫಲಾನುಭವಿಗಳು ಲಸಿಕೆ ಹಾಕಿಸಿಕೊಳ್ಳಲು ಬರುವಾಗ ಇಲಾಖೆಯಿಂದ ನೀಡಿರುವ ಗುರುತಿನ ಚೀಟಿಯ ಜೆರಾಕ್ಸ್ ಪ್ರತಿಯನ್ನು ತರುವಂತೆ ಕಟ್ಟುನಿಟ್ಟಾಗಿ ತಿಳಿಸಿ ಎಂದು ಅವರು ನಿರ್ದೇಶನ ನೀಡಿದರು.
ಶೇಕಡ 40ಕ್ಕಿಂತ ಹೆಚ್ಚು ಅಂಗವಿಕಲರಿದ್ದರೆ, ಅವರಿಗೆ ಲಸಿಕೆ ಕೇಂದ್ರಕ್ಕೆ ಕರೆದುಕೊಂಡು ಹೋಗುವ ಜವಾಬ್ದಾರಿ ಎಮ್. ಆರ್. ಡಬ್ಲೂ÷್ಯ ಹಾಗೂ ಎ.ಆರ್. ಡಬ್ಲೂ÷್ಯ ಅವರದಾಗಿರುತ್ತದೆ ಎಂದರು.
ಗ್ರಾಮಾAತರ ಪ್ರದೇಶಗಳಲ್ಲಿ ಪಾಸಿಟಿವಿಟಿ ದರ ನಿರೀಕ್ಷಿತ ಮಟ್ಟದಲ್ಲಿ ಕಡಿಮೆಯಾಗುತ್ತಿಲ್ಲ ಹಾಗಾಗಿ ಹೋಮ್ ಐಸೋಲೇಷನ್‌ನಲ್ಲಿ ಇರುವವರನ್ನು ಸ್ಥಳಿಯರ ಸಹಕಾರ ಪಡೆದು, ಮನವೊಲಿಸಿ ಕೋವಿಡ್ ಕೇರ್ ಕೇಂದ್ರಕ್ಕೆ ಕರೆತಂದು ಚಿಕಿತ್ಸೆ ನೀಡಿ ಎಂದರು.
ಸರ್ಕಾರದಿಂದ ಅಕ್ಕಸಾಲಿಗ, ಟೈಲರ್‌ಗಳು, ಮೆಕ್ಯಾನಿಕ್, ಅಗಸರು, ಕ್ಷೌರಿಕರು, ಕುಂಬಾರರು, ಮನೆ ಕೆಲಸದವರು, ಕಮ್ಮಾರರು ಸೇರಿದಂತೆ 11 ವಲಯಗಳಲ್ಲಿ ಕೆಲಸಗಾರರಿಗೆ ಸರ್ಕಾರದಿಂದ 2000ರೂ ಪ್ಯಾಕೆಜ್ ಘೋಷಣೆ ಮಾಡಿದೆ, ಫಲನುಭವಿಗಳು ಸೇವಾ ಸಿಂಧುನಲ್ಲಿ ಅರ್ಜಿ ಸಲ್ಲಿಸಲು ಉದ್ಯೋಗ ಪ್ರಮಾಣ ಪತ್ರ ನೀಡಿ ಆ ನಂತರ ಪಡೆಯಬಹುದಾಗಿದೆ. ಈ ಸೌಲಭ್ಯ ಎಲ್ಲಾ ಫಲಾನುಭವಿಗಳಿಗೂ ಸಿಗುವಂತಾಗಬೇಕು ಇದರಿಂದ ಆರ್ಥಿಕವಾಗಿ ಅವರಿಗೆ ನೆರವು ನೀಡಿದಂತಾಗುತ್ತದೆ ಎಂದು ಅವರು ಹೇಳಿದರು.
ಸಭೆಯಲ್ಲಿ ಆರ್.ಸಿ.ಹೆಚ್ ಅಧಿಕಾರಿ ಕಾಂತರಾಜು, ಜಿಲ್ಲಾ ಕಾರ್ಮಿಕ ಅಧಿಕಾರಿ ರಾಮಕೃಷ್ಣ, ಜಿಲ್ಲೆಯ ಅಂಗವಿಕಲರ ಹಾಗೂ ಹಿರಿಯ ನಾಗರೀಕರ ಕಲ್ಯಾಣಾಧಿಕಾರಿ ಮಲ್ಲೇಶ್, ಎಲ್ಲಾ ತಾಲ್ಲೂಕುಗಳ ತಹಿಶೀಲ್ದಾರರು ಹಾಗೂ ತಾಲ್ಲೂಕು ಆರೋಗ್ಯ ಅಧಿಕಾರಿಗಳು ಮತ್ತಿತರರು ಹಾಜರಿದ್ದರು.