ಮನ್ನದ್ವ ಸಂಘ-ಶ್ರೀಮದಾನಂದ ತೀರ್ಥ ಸೇವಾ ಟ್ರಸ್ಟ್ ನಿಂದ ಬಡವರಿಗೆ ಪುಡ್ ಕಿಟ್ ವಿತರಣೆ

ಹಾಸನ: ನಗರದ ಈದ್ಗಾ ಮೈದಾನದ ಎದುರು ಇರುವ ಶ್ರೀ ರಾಘವೇಂದ್ರ ಮಠದಲ್ಲಿ ಶ್ರೀ ಮನ್ನದ್ವ ಸಂಘ ಮತ್ತು ಶ್ರೀಮದಾನಂದ ತೀರ್ಥ ಸೇವಾ ಟ್ರಸ್ಟ್ ಇವರ ಸಂಯುಕ್ತಾಶ್ರಯದಲ್ಲಿ ಕೋವಿಡ್-೧೯ರ ಸಂತ್ರಸ್ತ ಬಡ ಕುಟುಂಬಗಳಿಗೆ ಆಹಾರ ಪದಾರ್ಥಗಳ ವಿತರಣೆಯನ್ನು ಗ್ರಾಮಾಂತರ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಸುರೇಶ್ ಅವರು ವಿತರಣೆ ಮಾಡಿದರು.

     ನಂತರ ಮಾತನಾಡಿದ ಅವರು, ಕೊರೋನಾ ಎರಡನೇ ಅಲೆಯಿಂದಾಗಿ ಸಮಾಜದ ದೀನದಲಿತ ವರ್ಗ, ಇತರೆ ಸಮುದಾಯದವರು ಕಷ್ಟದ ಜೀವನ ಬೀದಿಗೆ ಬಂದಿದೆ. ಕೆಲಸವಿಲ್ಲದೇ ಸಂಕಷ್ಟದಲ್ಲಿರುವ ಬಡ ಕುಟುಂಬದವರಿಗೆ ಆಹಾರದ ಕಿಟ್ ವಿತರಣೆ ಮಾಡಿರುವುದು ಉತ್ತಮ ಸೇವೆಯಾಗಿದೆ ಎಂದರು. ಈಸಂದರ್ಭದಲ್ಲಿ ಒಬ್ಬರಿಗೊಬ್ಬರೂ ಹೆಗಲನ್ನು ಕೊಟ್ಟು ನಿಲ್ಲದಿದ್ದರೇ ಜೀವನ ನಡೆಸುವುದೇ ಕಷ್ಟವಾಗುತ್ತದೆ. ಈನಿಟ್ಟಿನಲ್ಲಿ ಶ್ರೀ ರಾಘವೇಂದ್ರ ಮಠದಲ್ಲಿ ಶ್ರೀ ಮನ್ನದ್ವ ಸಂಘ ಮತ್ತು ಶ್ರೀಮದಾನಂದ ತೀರ್ಥ ಸೇವಾ ಟ್ರಸ್ಟ್ ಇವರು ತಮ್ಮ ಕೈಲಾದ ಸಹಕಾರವನ್ನು ನೀಡಿರುವುದಾಗಿ ಹೇಳಿ ಇದೆ ವೇಳೆ ಶ್ಲಾಘಿಸಿದರು.


     ಈಸಂದರ್ಭದಲ್ಲಿ ಶ್ರೀ ಮನ್ನದ್ವ ಸಂಘ ಮತ್ತು ಶ್ರೀಮದಾನಂದ ತೀರ್ಥ ಸೇವಾ ಟ್ರಸ್ಟ್ ಅಧ್ಯಕ್ಷರಾದ ಕೆ.ಪಿ.ಎಸ್. ಪ್ರಮೋದ್, ಕಾರ್ಯದರ್ಶಿ ಸುದೀಂದ್ರ, ಜಿಲ್ಲಾ ಬ್ರಾಹ್ಮಣ ಸಂಘದ ಕಾರ್ಯದರ್ಶಿ ಚಂದ್ರಶೇಖರ್, ಜಿಲ್ಲಾ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ರವಿನಾಕಲಗೂಡು ಹಾಗೂ ಸಂಘದ ಪದಾಧಿಕಾರಿಗಳು ಇತರರು ಪಾಲ್ಗೊಂಡಿದ್ದರು.


Post a Comment

Previous Post Next Post