ಹಾಸನ: ತೈಲ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಪಕ್ಷ ನಡೆಸಿದ ಪ್ರತಿಭಟನೆಯನ್ನು ಪ್ರಚಾರಕ್ಕೆ ಎಂದು ಹೇಳಿದ ಜೆಡಿಎಸ್ ಮುಖಂಡ ರೇವಣ್ಣ ಪಕ್ಷದ ಕಾರ್ಯಕರ್ತರೊಂದಿಗೆ ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ನಡೆಸಿದ ಧರಣಿ ಪ್ರಚಾರಕ್ಕಲ್ಲದೆ ಮತ್ಯೇನುಕೆ ಎಂದು ಕಾಂಗ್ರೆಸ್ ಮುಖಂಡ ಬಾಗೂರು ಮಂಜೇಗೌಡ ಪ್ರಶ್ನಿಸಿದ್ದಾರೆ.
ಪತ್ರಿಕೆ ಹೇಳಿಕೆ ನೀಡಿರುವ ಅವರು, ಕಾಂಗ್ರೆಸ್ ಪ್ರತಿಭಟನೆ ಖಾಲಿ ಡಬ್ಬಕ್ಕೆ ಹೋಲಿಸಿ ವ್ಯಂಗವಾಡಿದ್ದರು. ಆದರೆ ಜೆಡಿಎಸ್ ಪ್ರತಿಭಟನೆ ದಿನ ಎಲ್ಲರಿಗೂ ಫುಲ್ ಟ್ಯಾಂಗ್ ಪೆಟ್ರೋಲ್ ಹಾಕಿಸಿದ್ದಾರೆಯೇ ? ಎಂದಿರುವ ಅವರು ಬೇರೆ ಪಕ್ಷದ ಹೋರಾಟದ ಬಗ್ಗೆ ಮಾತನಾಡುವಾಗ ವಿರೋಧ ಪಕ್ಷದಲ್ಲಿದ್ದು ಮಾಡುತ್ತಿರುವ ಹೋರಾಟಗಳ ಬಗ್ಗೆ ರೇವಣ್ಣ ಅವರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.
ಸಂಕಷ್ಟದ ಪರಿಸ್ಥಿತಿಯಲ್ಲಿ ಜನರ ಹಿತ ದೃಷ್ಟಿಯಿಂದ ರಾಷ್ಟಿçÃಯ ಕಾಂಗ್ರೆಸ್ ಪಕ್ಷದಿಂದ ಎಐಸಿಸಿ ಹಾಗೂ ಕೆಪಿಸಿಸಿ ಮಾರ್ಗದರ್ಶದ ಮೇರೆಗೆ ಹಾಗೂ ನಾಯಕರಾದ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಸಲಹೆ ಸೂಚನೆಯಂತೆ ಜಿಲ್ಲಾ, ತಾಲ್ಲೂಕು, ಹೋಬಳಿ ಮಟ್ಟದಲ್ಲಿ ಪೆಟ್ರೋಲ್, ಡಿಸೇಲ್ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರುದ್ದ ಹೋರಾಟ ಮಾಡಿ ಖಂಡಿಸಿದ್ದೇವೆ. ಆದರೆ ಜೆಡಿಎಸ್ ನೆಪ ಮಾತ್ರಕ್ಕೆ ನೂರು ಜನರರೊಂದಿಗೆ ಜಿಲ್ಲಾಧಿಕಾರಿ ಕಛೇರಿ ಮುಂದೆ ಒಂದು ದಿನ ಧರಣಿ ನಡೆಸಿ ಪ್ರಚಾರ ಪಡೆಯಲು ಹೋಗಿ ವಿಫಲವಾಗಿದೆ. ಕಾಂಗ್ರೆಸ್ ಗೆ ಪ್ರಚಾರದ ಅಗತ್ಯವಿಲ್ಲ. ಅಳಿವಿನಂಚಿನಲ್ಲಿರುವ ಜೆಡಿಎಸ್ ಪ್ರಚಾರ ಪಡೆದುಕೊಳ್ಳಲಿ ಇವರಿಗೆ ಕಾಂಗ್ರೆಸ್ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ರೇವಣ್ಣ ಮಾತಿಗೆ ಚಾಟಿ ಬೀಸಿದ್ದಾರೆ.