ಬೇಲೂರು ಮೂಡಿಗೆರೆ ರಸ್ತೆಯಲ್ಲಿ ಅವೈಜ್ಞಾನಿಕವಾಗಿ ನಿರ್ಮಿಸಿರುವ ಹಂಪ್ಸ್ .


ಪಟ್ಟಣದ ಮೂಡಿಗೆರೆ ರಸ್ತೆಯ ಅಂಬೇಡ್ಕರ್ ವೃತ್ತದ ಬಳಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಅವೈಜ್ಞಾನಿಕವಾಗಿ ರಸ್ತೆಉಬ್ಬು ನರ‍್ಮಿಸಿದ್ದು  ಭಾರಿ ಗಾತ್ರದ ವಾಹನಗಳ ಓಡಾಟದಿಂದ ಅಕ್ಕಪಕ್ಕದ ಮನೆಗಳು ಬಿರುಕು ಬಿಡುತ್ತಿದ್ದು ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದಾರೆ .


ಪಟ್ಟಣದಲ್ಲಿ  ವಿಲ್ಲುಪುರಂ ಮಂಗಳೂರು ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿದೆ. ಮೂಡಿಗೆರೆ ರಸ್ತೆಯ ಅಂಬೇಡ್ಕರ್ ವೃತ್ತದ ಬಳಿ ವಾಹನಗಳ ವೇಗ ನಿಯಂತ್ರಣಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ರಸ್ತೆ ಉಬ್ಬು ಅಳವಡಿಸಲಾಗಿದೆ .  ಚಿಕ್ಕದಾಗಿ ಹಂಪ್ಸ್  ನರ‍್ಮಿಸಿದ್ದು ಭಾರಿ  ಗಾತ್ರದ ವಾಹನಗಳು  ವೇಗವಾಗಿ ಹಂಪ್ಸ್ ಮೇಲೆ ರ‍್ರಾಬರ‍್ರಿ ಚಲಿಸುತ್ತಿದ್ದು ರ‍್ಕಶ ಶಬ್ದದ ಜೊತೆಗೆ   ಅಕ್ಕಪಕ್ಕದ  ಮನೆಗಳ ಗೋಡೆ ಬಿರುಕು ಬಿಡುತ್ತಿದೆ ಎಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ .

     ನಿವಾಸಿ ರ‍್ಷಾದ್ ಮಾತನಾಡಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಅಂಬೇಡ್ಕರ್ ರ‍್ಕಲ್ ಬಳಿ ವಾಹನಗಳ ವೇಗ ನಿಯಂತ್ರಣಕ್ಕೆ ಹಂಪ್ಸ್  ಅಳವಡಿಸಿದ್ದಾರೆ . ಆದರೆ ವಾಹನಗಳು ನಿಧಾನವಾಗಿ ಚಲಿಸುವ ಬದಲು ಅತ್ಯಂತ ವೇಗವಾಗಿ ಹಂಪ್ಸ್ ಮೇಲೆ ಹಾದು ಹೋಗುತ್ತಿದ್ದು  ಇದರಿಂದ ರಸ್ತೆಯ ಅಕ್ಕಪಕ್ಕದ ಮನೆಗಳಲ್ಲಿ ಗೋಡೆಗಳು ಬಿರುಕುಬಿಡುತ್ತಿವೆ . ಅಲ್ಲದೆ ರಾತ್ರಿ ವೇಳೆ ಟಿಪ್ಪರ್ ನಂತಹ ಭಾರಿ ಗಾತ್ರದ ವಾಹನಗಳು ಚಲಿಸುತ್ತಿರುವುದರಿಂದ ರ‍್ಕಶ ಶಬ್ದದ ಜೊತೆಗೆ  ಭೂಮಿ ಕಂಪಿಸುವ  ಅನುಭವವಾಗುತ್ತಿದ್ದು ಮನೆಯಲ್ಲಿ ವೃದ್ಧರು ಮಕ್ಕಳು ಹೆದರಿಕೆಯಿಂದ ರಾತ್ರಿ ಕಳೆಯುವಂತಾಗಿದೆ  ಎಂದು ಆತಂಕ ವ್ಯಕ್ತಪಡಿಸಿದರು 

      ಪಟ್ಟಣದ ಅಂಬೇಡ್ಕರ್ ರ‍್ಕಲ್ ಬಳಿ ಅವೈಜ್ಞಾನಿಕ ಹಂಪ್ಸ್ ನಿಂದಾಗಿ  ವೇಗವಾಗಿ ಚಲಿಸುವ ವಾಹನಗಳಿಂದ ಸಣ್ಣಪುಟ್ಟ ಅಪಘಾತಗಳು ಸಂಭವಿಸುತ್ತಿವೆ . ಅಲ್ಲದೆ ರಸ್ತೆಯ ಪಕ್ಕದಲ್ಲೇ ಇರುವ ಅಂಬೇಡ್ಕರ್  ವೃತ್ತಕ್ಕೂ ಅಪಾಯ ಆಗುವ ಸಂಭವ ಇದೆ . ಹೆದ್ದಾರಿ ಪ್ರಾಧಿಕಾರದವರು ಕೂಡಲೇ ಎಚ್ಚೆತ್ತು ಅವೈಜ್ಞಾನಿಕವಾಗಿ ನರ‍್ಮಾಣ ಮಾಡಿರುವ ಹಂಪ್ಸ್ ತೆಗೆದು  ಇಂಟರ್ ಲಾಕ್ ಮಾದರಿಯ ರಸ್ತೆ ಉಬ್ಬು ನರ‍್ಮಾಣ ಮಾಡಬೇಕು.  ಒಂದು ವೇಳೆ ಜನರ ಪ್ರಾಣಕ್ಕೆ ಕುತ್ತು ಬಂದರೆ ಪ್ರಾಧಿಕಾರವೇ ನೇರ ಹೊಣೆ ಹೊರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ

Post a Comment

Previous Post Next Post