ಮದ್ಯ ವ್ಯಸನಿಗಳಿಗೆ ಸಮಾಜದಲ್ಲಿ ಗೌರವ ಸಿಗುವುದಿಲ್ಲ ಜೆ. ಮಲ್ಲಿಕಾರ್ಜುನ್ ಕಿವಿಮಾತು

ಹಾಸನ: ಹೆಚ್ಚು ಮದ್ಯವ್ಯಸನಿ ಮಾಡುವವರಿಗೆ ಸಮಾಜದಲ್ಲಿ ಯಾವ ಗೌರವ ಸಿಗುವುದಿಲ್ಲ ಎಂದು ಅತಿಥಿ ಉಪನ್ಯಾಸದಲ್ಲಿ ಮಾತನಾಡಿದ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಖಜಾಂಚಿ ಜೆ. ಮಲ್ಲಿಕಾರ್ಜುನ್ ಅವರು ಕಿವಿಮಾತು ಹೇಳಿದರು.


      ನಗರದ ಸಮೀಪ ಬೂವನಹಳ್ಳಿ ಕ್ರಾಸ್‌ನಲ್ಲಿ ಇರುವ ಮಂಜುನಾಥ್ ಕಲ್ಯಾಣ ಮಂಪಟದಲ್ಲಿ ಭುವನೇಶ್ವರಿ ಅಸೋಸಿಯೆಷನ್ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಂತಾರಾಷ್ಟೀಯಾ ಮಾದಕ ವಸ್ತುಗಳ ವಿರೋಧಿ ದಿನಾಚರಣೆ ಕಾರ್ಯಕ್ರಮವನು ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಮಾದಕವಸ್ತುಗಳ ಬಗ್ಗೆ ಮಾತಾನಾಡುತ್ತಾ ಯುವಪೀಳಿಗೆಯು ರೆಸಾರ್ಟ, ಹೋಟೆಲ್, ಪಬ್ ಮುಂತಾವುಗಳಿಗೆ ಮೋಜು, ಮಸ್ತಿ ಮಾಡುವ ಸಲುವಾಗಿ ಹೋಗಿ ಪ್ರಾರಂಭಿಸಿದ ಮದ್ಯಪಾನ ಸೇವನೆಯು ನಂತರದ ದಿನಗಳಲ್ಲಿ ಚಟವಾಗಿ ಸ್ವೀಕರಿಸಿ, ದುಶ್ಚಟಕ್ಕೆ ಬಲಿಯಾಗುತ್ತಿದ್ದಾರೆ, ಸಹವಾಸದಿಂದ ಸನ್ಯಾಸಿಯು ಕೆಟ್ಟಎಂಬAತೆ, ಸುಖ ಸುಮ್ಮನೆ ಮೋಜು ಮಸ್ತಿಗೆ ಶುರು ಮಾಡಿದ ಅಬ್ಯಾಸವೂ ಸ್ನೇಹಿತರ ಜೊತೆಗೂಡಿ ಮದ್ಯಪಾನಕ್ಕೆ ದಾಸರಾಗುತ್ತಿದ್ದಾರೆ. ದಯವಿಟ್ಟು ಇದರಿಂದ ಹೊರ ಬಂದು ಸಮಾಜದಲ್ಲಿ ಆದರ್ಶ ವ್ಯಕ್ತಿಗಳಾಗಿ ಬದುಕುವಂತೆ ಮನವಿ ಮಾಡಿದರು. 

       ಹಿರಿಯ ವಕಿಲರು ಮತ್ತು ವಕೀಲರ ಸಂಘದ ಮಾಜಿ ಅಧ್ಯಕ್ಷ ಬಿ. ಚಂದ್ರಶೇಖರ್ ಮಾತನಾಡಿ, ವ್ಯಕ್ತಿಗತ, ವಯ್ಯಕ್ತಿಕ, ಕೌಟುಂಬಿಕ ಎಂಬ ಅಂಶಗಳನ್ನು ಒಳಗೊಂಡ ಸಾಂಸಾರಿಕ ಅರ್ಥಗರ್ಭ ಅಂಶಗಳ ಬಗ್ಗೆ ಮಾತನಾಡಿದರು. ವಯಕ್ತಿಕ ಅಂಶಗಳನ್ನೊಳಗೊAಡ ಹುಟ್ಟು-ಸಾವು, ಸಭೆ, ಸಮಾರಂಭ ಎಂಬ ಕುಂಟು ನೆಪಗಳ ಮೂಲಕ ಸುಖ ಸುಮ್ಮನೆ ಮದ್ಯಪಾನ ಸೇವನೆ ಮಾಡಲು ಮನುಷ್ಯ ಪ್ರಾರಂಭಿಸುತ್ತಾರೆ. ಹಣದ ಸಂಪಾದನೆಯನ್ನು ಕೂಡ ಮಾಡದೇ ಸುಮ್ಮನೆ ಕುಳಿತು ಹೆಂಡತಿಯ ಮೇಲೆ ಅವಲಂಬಿತನಾಗುವದಲ್ಲದೆ, ದಬ್ಬಾಳಿಕೆಯನ್ನು ಮಾಡುವುದು, ಅನುಮಾನ ಪಡುತ್ತಾ, ಯಾವುದೇ ಪ್ರೀತಿ, ವಾತ್ಸಲ್ಯತೋರಿಸುವುದಿಲ್ಲ ಎಂದರು. ಇಂತಹವರ ಸಂಸಾರ ಕೊನೆಗೆ ವಿಚ್ಛೇಧನಹಂತಕ್ಕೆ ತಲುಪುತ್ತದೆ. ನ್ಯಾಯಾಲಯದಲ್ಲಿ ಪ್ರತಿದಿವಸವೂ ಕೂಡ ಈ ಮದ್ಯಪಾನದಿಂದ ಸೃಷ್ಟಿ ಆದ ಅನಾಹುತದ ಪ್ರಕರಣಗಳೆ ಹೆಚ್ಚು ಎಂದು ವಿಷಾಧಿಸಿದರು. ವ್ಯಸನಿಗಳಿಗೆ ಸಮಾಜದಲ್ಲಿ ಗೌರವೂ ಸಿಗುವುದಿಲ್ಲ. ಆರೋಗ್ಯವೂ ಇಲ್ಲ, ರಕ್ತ ಸಂಬAಧವೂ ಇಲ್ಲ, ಕೊನೆಗೆ ತೂ ಚಿ ಅನ್ನಿಸಿಕೊಂಡು ಸಾಯುವ ಪರಿಸ್ಥಿತಿ ಬರುತ್ತದೆ ಎಂದು ಎಚ್ಚರಿಸಿದರು. ಕಾರ್ಯಕ್ರಮದಲ್ಲಿ ಉಪಸ್ಥಿತಿ ಇದ್ದಂತಹ ವ್ಯಸನಿಗಳಿಗೆ ನಿಮ್ಮ ಬದುಕು ಬಂಗಾರವಾಗಲಿ ಎಂದು ಹಾರೈಸಿದರು.

    ಅಂತಾರಾಷ್ಟೀಯಾ ಮಾದಕ ವಸ್ತುಗಳ ವಿರೋಧಿ ದಿನಾಚರಣೆ ಕಾರ್ಯಕ್ರಮದಲ್ಲಿ ಸಂಸ್ಥೆಯ ಮುಖ್ಯಸ್ಥೆ ಯೋಜನಾ ನಿರ್ದೇಶಕರು ಅಂಜಲಿ ಗೋವಿಂದರಾಜು, ವಕೀಲೆ ವೇಧವತಿ, ವ್ಯಸನ ಮುಕ್ತಿ ಕೇಂದ್ರದ ಡಾ.ಮಹೇಶ್ ಹಾಗೂ ಸಿಬ್ಬಂದಿ ವರ್ಗ ಇತರರು ಪಾಲ್ಗೊಂಡಿದ್ದರು.


Post a Comment

Previous Post Next Post