ಹಾಸನ ಜೂ.೧೭:-ಕೋವಿಡ್-೧೯ ಸಂಪೂರ್ಣ ನಿಯಂತ್ರಣಕ್ಕಾಗಿ ಹಾಲಿ ಸೋಂಕು ಹೆಚ್ಚಿರುವ ತಾಲ್ಲೂಕುಗಳಲ್ಲಿ ಮೂರನೇ ಸುತ್ತಿನ ವೈದ್ಯರ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ಮುಂದುವರೆಸುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ
.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಕೋವಿಡ್ ನಿಯಂತ್ರಣಕ್ಕೆಮುಂದುವರೆಸುವಂತೆ ಎಲ್ಲಾ ತಹಸೀಲ್ದಾರ್ ಹಾಗೂ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ ಮಾತನಾಡಿದ ಅವರು ಕೊರೋನಾ ಹೆಚ್ಚಿರುವ ಅರಕಲಗೂಡು, ಅರಸೀಕೆರೆ, ಚನ್ನರಾಯಪಟ್ಟಣ, ಹೊಳೆನರಸೀಪುರ ತಾಲ್ಲೂಕುಗಳಲ್ಲಿ ಮೂರನೇ ಸುತ್ತಿನ ಕಾರ್ಯಕ್ರಮ ನಡೆಸಿ ಉಳಿದ ತಾಲ್ಲೂಕುಗಳಲ್ಲಿ ಸೋಂಕು ಹೆಚ್ಚಿರುವ ಪ್ರದೇಶಗಳನ್ನು ಕೇಂದ್ರೀಕರಿಸಿ ಮನೆ ಮನೆ ಭೇಟಿ ಕಾರ್ಯ ನಡೆಸಿ ಎಂದು ನಿರ್ದೇಶನ ನೀಡಿದರು.
ಈಗಾಗಲೇ ಎಲ್ಲಾ ತಾಲ್ಲೂಕುಗಳಿಗೆ ಕೋವಿಡ್‌ನಿಂದ ಜಿಲ್ಲೆ ಹಾಗೂ ಹೊರ ಜಿಲ್ಲೆಗಳಲ್ಲಿ ಮೃತಪಟ್ಟವರ ಪಟ್ಟಿ ರವಾನಿಸಲಾಗಿದ್ದು, ಅವುಗಳನ್ನು ನಾಳೆ ಸಂಜೆಯೊಳಗೆ ಪರಿಶೀಲಿಸಿ ಬಡತನ ರೇಖೆಗಿಂತ ಕೆಳಗಿರುವವರ ಹೆಸರನ್ನು ನಿಖರವಾಗಿ ಪಟ್ಟಿ ಮಾಡಿ ಜಿಲ್ಲಾಧಿಕಾರಿ ಕಚೇರಿಗೆ ಒದಗಿಸುವಂತೆ ಅವರು ಸೂಚಿಸಿದರು.
ಜಿಲ್ಲೆಯಲ್ಲಿ ಈಗಿನ ವರದಿಯಂತೆ ೧೧೩೦ ಮಂದಿ ಕೋವಿಡ್‌ನಿಂದ ಮೃತ ಪಟ್ಟಿದ್ದು ಮುಂದಿನ ದಿನಗಳಲ್ಲಿ ಯಾವುದೇ ಸಾವು ಸಂಭವಿಸದAತೆ ತೀವ್ರ ನಿಗಾವಹಿಸುವುದರ ಜೊತೆಗೆ ಖಾಸಗಿ ಆಸ್ಪತ್ರೆಗಳಲ್ಲಿ ಸಂಭವಿಸುವ ಸಾವಿನ ವರದಿಯನ್ನು ಸಹ ಪರಿಶೀಲಿಸಿ ತಾಳೆನೋಡುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ತಿಳಿಸಿದರು.
ಎಲ್ಲಾ ಕೋವಿಡ್ ಕೇರ್ ಕೇಂದ್ರಗಳಲ್ಲಿ ಸೂಕ್ತ ವ್ಯವಸ್ಥೆಗಳನ್ನು ಕಲ್ಪಿಸುವುದಲ್ಲದೆ ಪ್ರತಿದಿನ ವೈದ್ಯರು ಎಲ್ಲಾ ಸೋಂಕಿತರ ಪರೀಕ್ಷೆ ನಡೆಸಿ ಸೂಕ್ತ ಚಿಕಿತ್ಸೆ ನೀಡಬೇಕು ನಿರ್ಲಕ್ಷö್ಯವಹಿಸುವವರ ವಿರುದ್ದ ಕ್ರಮಜರುಗಿಸಲಾಗುವುದು ಎಂದರು.
ಕೊವ್ಯಾಕ್ಸಿನ್ ಲಸಿಕೆ ನೀಡುವ ಮೊದಲು ಪೋರ್ಟಲ್‌ನಲ್ಲಿ ವ್ಯಕ್ತಿಯು ಮೊದಲನೇ ಡೋಸ್ ಲಸಿಕೆ ಪಡೆದಿರುವುದನ್ನು ಖಚಿತಪಡಿಸಿಕೊಂಡು ಎರಡನೇ ಡೋಸ್ ಪಡೆಯುವವರಿಗೆ ಪುನರ್ ನೋಂದಣಿ ಮಾಡದೆ ಲಸಿಕೆ ನೀಡುವಂತೆ ಸೂಚಿಸಿದರಲ್ಲದೆ ಎಲ್ಲರಿಗೂ ಕೋವಿಶೀಲ್ಡ್ ಲಸಿಕೆ ನೀಡುವ ಮುನ್ನ ಆಧಾರ್‌ಕಾರ್ಡ್ ಸಂಖ್ಯೆಯನ್ನು ನೀಡಬೇಕು ದೃಡೀಕರಿಸಿಕೊಂಡು ಎಂದರು. ಪ್ರತಿದಿನ ೬೦೦೦ ಕೋವಿಡ್ ತಪಾಸಣೆಗಳು ನಡೆಯಬೇಕು, ಆರ್.ಟಿ.ಪಿ.ಸಿ.ಆರ್. ಪರೀಕ್ಷೆ ಹೆಚ್ಚು ನಡೆಸಬೇಕು ಎಂದು ಆರ್.ಗಿರೀಶ್ ಸೂಚನೆ ನೀಡಿದರು.
ಈಗಾಗಲೇ ವಿಕಲ ಚೇತನರಿಗೆ ಶೇ ೬೦ ರಷ್ಟು ಲಸಿಕೆಯನ್ನು ನೀಡಲಾಗಿದ್ದು, ಬಾಕಿ ಉಳಿದ ೪೦ ರಷ್ಟು ಮಂದಿಗೆ ಶೀಘ್ರವಾಗಿ ಲಸಿಕೆ ಸಂಪೂರ್ಣಗೊಳಿಸಿ ಅಲ್ಲದೆ ಒಬ್ಬ ಸೋಂಕಿತನಿಗೆ ೧೦ ಕ್ಕಿಂತ ಹೆಚ್ಚು ಪ್ರಾಥಮಿಕ ಸೋಂಕಿತರನ್ನು ಪತ್ತೆ ಮಾಡುವ ಕಾರ್ಯ ಚುರುಕುಗೊಳಿಸಿ ಎಂದರು.
ಅಪರ ಜಿಲ್ಲಾಧಿಕಾರಿ ಕವಿತ ರಾಜಾರಾಂ ಅವರು ಮಾತನಾಡಿ ಹಾಸನ ಜಿಲ್ಲೆಯ ವ್ಯಕಿಗಳು ಇತರೆ ಜಿಲ್ಲೆಗಳಲ್ಲಿ ಕೋವಿಡ್‌ನಿಂದ ಮೃತಪಟ್ಟಿರುವ ವರದಿಯನ್ನು ಶೀಘ್ರವಾಗಿ ಜಿಲ್ಲಾಡಳಿತಕ್ಕೆ ನೀಡುವಂತೆ ಎಲ್ಲಾ ತಹಸೀಲ್ದಾರರಿಗೆ ಸೂಚಿಸಿದರಲ್ಲದೆ ಹೋಮ್ ಐಸೋಲೆಶನ್‌ನಲ್ಲಿರುವವರನ್ನು ಕೋವಿಡ್ ಕೆರ್ ಕೇಂದ್ರಗಳಿಗೆ ಕರೆತಂದು ಸೂಕ್ತ ಚಿಕಿತ್ಸೆ ನೀಡಿ ಎಂದರು.
ವಿಶ್ವ ಆರೋಗ್ಯ ಸಂಸ್ಥೆಯ ಪ್ರತಿನಿಧಿ ಡಾ|| ಅಶ್ವಿನ್ ಅವರು ಮಾತನಾಡಿ ಲಸಿಕೆ ಪಡೆಯಲು ಬಂದವರ ಬಳಿ ಆಧಾರ್ ಕಾರ್ಡ್, ಮೊಬೈಲ್ ಸಂಖ್ಯೆಯನ್ನು ಕಡ್ಡಾಯವಾಗಿ ಪಡೆದುಕೊಂಡು ಎರಡನೇ ಡೋಸ್ ನೀಡುವ ಮುನ್ನ ಪರಿಶೀಲನೆ ಮಾಡಿ ಲಸಿಕೆ ನೀಡುವಂತೆ ಹೇಳಿದರು.
ಸಭೆಯಲ್ಲಿ ಉಪವಿಭಾಗಾಧಿಕಾರಿ ಬಿ.ಎ ಜಗದೀಶ್, ಗಿರೀಶ್ ನಂದನ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ಸತೀಶ್, ಆರ್.ಸಿ.ಎಚ್. ಅಧಿಕಾರಿ ಡಾ|| ಕಾಂತರಾಜ್ ಹಾಗೂ ಎಲ್ಲಾ ತಹಸೀಲ್ದಾರ್ ಮತ್ತಿತರ ಅಧಿಕಾರಿಗಳು ಹಾಜರಿದ್ದರು.