ಹಾಸನ: ನಗರದ ಚನ್ನಪಟ್ಟಣ ೧೦ನೇ ಕ್ರಾಸ್ ನಲ್ಲಿರುವ ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕರ ಸಂಘ ಜಿಲ್ಲಾ ಘಟಕ, ಶ್ರೀ ಹಂಸ ಸೌಹಾರ್ದ ಸಹಕಾರ ನಿಯಮಿತ ಬ್ಯಾಂಕ್ ಇವರ ಸಂಯುಕ್ತಾಶ್ರಯದಲ್ಲಿ ಶುಶ್ರೂಷಕಿಯರಿಗೆ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆರಿಗೆ, ಹಾಗೂ ಅಡುಗೆ ಮಾಡುವ ಸಹಾಯಕಿಯರಿಗೆ ಉಚಿತವಾಗಿ ಆಹಾರದ ಕಿಟ್ ಗಳನ್ನು ವಿತರಣೆ ಮಾಡಲಾಯಿತು.
ಇದೆ ವೇಳೆ ನಗರಸಭೆ ಅಧ್ಯಕ್ಷರು ಮೋಹನ್, ರಾಜ್ಯ ಕಟ್ಟಡ ಕಾರ್ಮಿಕರ ಸಂಘದ ರಾಜ್ಯ ಉಪಾಧ್ಯಕ್ಷರು, ಕೆ.ಎಸ್. ರಮೇಶ್, ಜಿಲ್ಲಾಧ್ಯಕ್ಷರು ಎಸ್. ಮಹೇಶ್, ಉಪಾಧ್ಯಕ್ಷರು ರಂಗಪ್ಪ, ಪ್ರಧಾನ ಕಾರ್ಯದರ್ಶಿ ರಮೇಶ್, ಮಹಿಳಾ ಅಧ್ಯಕ್ಷೆ ಸುಧಾ, ಖಜಾಂಚಿ ಸವಿತಾ, ಸಂಘದ ಪದಾಧಿಕಾರಿಗಳು ಇಂದ್ರಮ್ಮ, ಪುಟ್ಟಮ್ಮ, ಗಂಗಮ್ಮ, ಸಮಾಜಸೇವಕರು ಮೋಹನ್ ಗೌಡ, ಆಟೋ ಮಜ್ದೂರ್ ಸಂಘದ ಜಿಲ್ಲಾಧ್ಯಕ್ಷ ದಿಲೀಪ್ ಮತ್ತು ಬ್ಯಾಂಕಿನ ಸಿಬ್ಬಂದಿಗಳು ಪಾಲ್ಗೊಂಡಿದ್ದರು.
Tags
ಹಾಸನ