ಪಟ್ಟಣದ ಶ್ರೀ ಚನ್ನಕೇಶವ ದಾಸೋಹ ಭವನದಲ್ಲಿ ಕೊರೋನಾದಿಂದ ಸಂಕಷ್ಟದಲ್ಲಿರುವ ಪತ್ರಿಕಾ ವಿತರಕರು,ಟ್ಯಾಕ್ಸಿ ಚಾಲಕರು,ಹಾಗೂ ದೇವಸ್ಥಾನ ಗೈಡ್ ರವರಿಗೆ ಆಹಾರದ ಕಿಟ್ ವಿತರಿಸಿದರು.
ಆಹಾರದ ಕಿಟ್ ವಿತರಿಸಿ ಮಾತನಾಡಿದ ತಹಶೀಲ್ದಾರ್ ಎನ್ ವಿ ನಟೇಶ್ ಬೆಳಗಿನ ಅವಧಿಯಲ್ಲಿ ಮನೆ ಮನೆಗೆ ಪತ್ರಿಕೆ ವಿತರಿಸುವ ಉಪ ಉದ್ಯೋಗದಲ್ಲಿ ತೊಡಗಿರುವ ಅನೇಕ ಜನರು, ಯುವಕರು ಮೂಲ ಉದ್ಯೋಗಗಳಿಂದ ವಂಚಿತರಾಗಿದ್ದಾರೆ. ಪರ್ಯಾಯ ಕೆಲಸವಿಲ್ಲದೆ ದೈನಂದಿನ ಬದುಕಿನ ನಿರ್ವಹಣೆಗೆ ತೊಂದರೆ ಅನುಭವಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಸಮಾಜದ ಪ್ರತಿಯೊಬ್ಬರೂ ಇಂಥ ಜನರ ಸಮಸ್ಯೆಗೆ ಸಾಧ್ಯವಾದಷ್ಟು ಸ್ಪಂದಿಸುವ ಅಗತ್ಯವಿದ್ದು, ಕಿಟ್ ನೀಡಲಾಗುತ್ತಿದೆ’ ಎಂದರು.
ಶಾಸಕ ಕೆ ಎಸ್ ಲಿಂಗೇಶ್ ಮಾತನಾಡಿ ತಾಲೂಕು ಆಡಳಿತ ಮನವಿಗೆ ಸ್ಪಂದಿಸಿದ ಮದ್ಯಮಾರಾಟಗಾರರು ಹಾಗೂ ಔಷಧಿ ವ್ಯಾಪಾರಿಗಳು ನಮ್ಮ ನೆರವಿಗೆ ಸ್ಪಂದಿಸಿದ್ದು ಅವರ ಸಹಯೋಗದೊಂದಿಗೆ ಆಹಾರದ ಕಿಟ್ ವಿತರಿಸಲಾಗುತ್ತಿದೆ.ಲಾಕ್ ಡೌನ್ ಸಂದರ್ಭದಲ್ಲಿ ಆರ್ಥಿಕ ಪರಿಸ್ಥಿತಿಯಿಂದ ಜೀವನ ನೆಡಸಲು ಕಷ್ಟಕರವಾಗಿದ್ದು ಸುಮಾರು ೬೦೦ ಕ್ಕೂ ಹೆಚ್ಚು ಆಹಾರದ ಕಿಟ್ ಕೊಡಲಾಗುತ್ತಿದ್ದು ಅದರಲ್ಲಿ ಟ್ಯಾಕ್ಸಿ ಚಾಲಕರಿಗೆ, ದೇವಾಲಯದ ಮಾರ್ಗದರ್ಶಿಗಳು ,ದಿನನಿತ್ಯ ಎಂತಹ ಸಂದರ್ಭದಲ್ಲಿ ಸಹ ಪತ್ರಿಕೆಯನ್ನು ಮನೆ ಮನೆಗೆ ತಲುಪಿಸುವಂತಹ ಕೆಲಸವನ್ನು ಪತ್ರಿಕಾ ವಿತರಕರು ಮಾಡುತ್ತಿದ್ದಾರೆ.ಅಲ್ಲದೆ ಕಳೆದ ವರ್ಷದಿಂದ ಕೋವೀಡ್ ನಿಂದಾಗಿ ಇಡೀ ವಿಶ್ವ ಕುಲವೇ ಸಂಕಷ್ಟದಲ್ಲಿರುವಾಗ ಸಣ್ಣಪುಟ್ಟ ವ್ಯಾಪಾರ ವಹಿವಾಟು ಮಾಡುತ್ತಿರುವ ಕೂಲಿ ಕಾರ್ಮೀಕರು,ಬಡವರ್ಗದವರಿಗೆ ಇಂತಹ ಸಂಘ ಸಂಸ್ಥೆಗಳು ಮುಂದೆ ಬಂದು ಸಹಾಯ ಮಾಡುತ್ತಿರುವುದು ಉತ್ತಮ ಬೆಳವಣಿಗೆ ಎಂದರು.
ಅಬಕಾರಿ ಇಲಾಖೆ ಇನ್ಸಪೆಕ್ಟರ್ ಚಂದನ ಮಾತನಾಡಿ ಮದ್ಯ ಮಾರಾಟಗಾರರು ಎಂದ ತಕ್ಷಣ ಕೆಲವರಲ್ಲಿ ತಪ್ಪು ಅಭಿಪ್ರಾಯ ಇರುತ್ತದೆ ಆದರೆ ಅವರಲ್ಲೂ ಮಾನವೀಯ ಮೌಲ್ಯಗಳಿದ್ದು ಕಷ್ಟಕಾಲದಲ್ಲಿ ಸ್ಪಂದಿಸುವ ಕೆಲಸ ಮಾಡುತ್ತಿದ್ದಾರೆ ಎಂಬುವುದಕ್ಕೆ ಇಂದು ಸಂಕಷ್ಟದಲ್ಲಿರುವರಿಗೆ ನೆರವಾಗುತ್ತಿರುವುದೇ ಸಾಕ್ಷಿ ಎಂದರು.
ಈ ಸಂದರ್ಭದಲ್ಲಿ ಇಓ ರವಿಕುಮಾರ್, ಡಾ,ನರಸೇಗೌಡ,ಡಾ,ವಿಜಯ್ ,ಮದ್ಯಮಾರಾಟಗಾರ ಸಂಘದ ಗುರುಪಾದಸ್ವಾಮಿ,ಗೋಪಿನಾಥ್,ಪ್ರಸನ್ ನ,ಗಿರೀಶ್,ನಿಶಾಂತ್,,
ಮೆಡಿಕಲ್ ಅಸೋಸಿಯೇಷನ್ ರವೀಂದ್ರನಾಥ್,ವಿನೀಶ್ ,ಪತ್ರಿಕಾ ವಿತರಕರ ಸಂಘದ ಅಧ್ಯಕ್ಷ ಆರಾಧ್ಯ ಬಿ ಎಸ್ ಹಾಜರಿದ್ದರು.
Tags
ಬೇಲೂರು