ವೈದ್ಯಕೀಯ ಸಿಬ್ಬಂದಿಗಳ ಪರಿಶ್ರಮದಿಂದ ಕೊರೋನಾ ಸೋಂಕು ನಿಯಂತ್ರಣ ಹೆಚ್.ಎ. ಕಿರಣ್

ಹಾಸನ: ಜಿಲ್ಲೆಯ ವೈದ್ಯಕೀಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಪರಿಶ್ರಮ ಮತ್ತು ಅವಿರತ ಪ್ರಯತ್ನದಿಂದ ಕೊರೋನಾ ಹರಡುವಿಕೆಯನ್ನು ನಿಯಂತ್ರಣದಲ್ಲಿ ಇಡಲು ಸಾಧ್ಯವಾಗಿದೆ ಎಂದು ಎಫ್.ಕೆ.ಸಿ.ಸಿ.ಐ. ಛರ‍್ಮನ್ ಮತ್ತು ಕೈಗಾರಿಕ ಸಂಘದ ಉಪಾಧ್ಯಕ್ಷರಾದ ಹೆಚ್.ಎ. ಕಿರಣ್ ಶ್ಲಾಘಿಸಿದರು.


      ನಗರದ ಸಮೀಪ ಇರುವ ಜಿಲ್ಲಾ ಸಣ್ಣ ಕೈಗಾರಿಕ ಸಂಘದಲ್ಲಿ ಹಮ್ಮಿಕೊಳ್ಳಲಾಗಿದ್ದ ವ್ಯಾಕ್ಸಿಲೇಷನ್ ಅಭಿಯಾನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೊರೋನಾ ಸೋಂಕು ಹರಡುತ್ತಿರುವ ವೇಳೆ ಜನತೆಯೂ ಕೆಲಸ ಮಾಡುವ ಸ್ಥಳದಲ್ಲಿ, ಅಂಗಡಿ ಮುಗಟ್ಟುಗಳಲ್ಲಾಗಲಿ, ಸಭೆ ಸಮಾರಂಭಗಳಲ್ಲಾಗಲಿ ಸೇರಿದಂತೆ ಜನಸಂದಣಿ ಇರುವ ಕಡೆ ಬಹಳಷ್ಟು ಜಾಗರುಕತೆಯಿಂದ ಇರಬೇಕು ಎಂದು ಕೋರಿದರು. ಸರಕಾರ ಜಾರಿಗೆ ತರಲಾಗಿರುವ ನಿಯಮವನ್ನು ಪ್ರತಿಯೊಬ್ಬರೂ ಪಾಲಿಸುವ ಮೂಲಕ ಕೊರೋನಾದಿಂದ ದೂರ ಇರಲು ಸಾಧ್ಯ ಎಂದು ಕಿವಿಮಾತು ಹೇಳಿದರು. ಪ್ರತಿಯೊಬ್ಬರೂ ಮಾಸ್ಕ್, ಸ್ಯಾನಿಟೈಸರ್, ಸಾಮಾಜಿಕ ಅಂತರವನ್ನು ಪಾಲಿಸುವ ಮೂಲಕ ಕೊರೋನಾ ಮುಕ್ತ ಸಮಾಜ ನಿರ್ಮಿಸೋಣ ಎಂದು ಕರೆ ನೀಡಿದರು.

     ಲಸಿಕಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಸತೀಶ್ ಅವರ ಅವಿರತ ಪ್ರಯತ್ನಕ್ಕೆ ಸಂಘದಿAದ ಸನ್ಮಾನಿಸಿ ಗೌರವಿಸಲಾಯಿತು. ಇದೆ ವೇಳೆ ಆರ್.ಸಿ.ಎಚ್. ಡಾ. ಕಾಂತರಾಜು, ಟಿ.ಹೆಚ್.ಒ. ಡಾ. ವಿಜಯ್ ಹಾಗೂ ಕೈಗಾರಿಕಾ ಇಲಾಖೆಯ ಜಂಠಿ ನಿರ್ದೇಶಕರಾದ ದಿನೇಶ್ ಹಾಗೂ ಕೆಐಡಿಬಿ ಮುಖ್ಯಸ್ಥರಾದ ಜಗದೀಶ್ ಅವರನ್ನು ಕೂಡ ಅಭಿನಂದಿಸಲಾಯಿತು.

     ಸಮಾರಂಭದಲ್ಲಿ ಸಂಘದ ಅಧ್ಯಕ್ಷರಾದ ಜಿ.ಒ. ಮಹಾಂತಪ್ಪ, ಉಪಾಧ್ಯಕ್ಷರಾದ ಪ್ರಕಾಶ್ ಯಾಜಿ, ಕಾರ್ಯದರ್ಶಿ ಸುದರ್ಶನ್, ಗೌರವಾಧ್ಯಕ್ಷ ಮದನ್ ಕುಮಾರ್ ಇತರರು ಉಪಸ್ಥಿತರಿದ್ದರು.


Post a Comment

Previous Post Next Post