ಬೇಲೂರು : ಕೊರೊನಾ ಲಸಿಕೆ ಪಡೆಯಲು ನೂಕುನುಗ್ಗಲು ಉಂಟಾಗುತ್ತಿದೆ. ಪ್ರತಿನಿತ್ಯ ಆಸ್ಪತ್ರೆಯ ಮೂಲಕ ಲಸಿಕೆ ನೀಡಲಾಗುತ್ತಿದ್ದ ಇಲ್ಲಿನ ಸರ್ಕಾರಿ ಮಾಧ್ಯಮಿಕ ಶಾಲಾ ಕಟ್ಟಡದಲ್ಲಿ ಲಸಿಕೆ ಪಡೆಯಲು ನೂಕುನುಗ್ಗಲು ಉಂಟಾಯಿತು.
ಬೆಳಿಗ್ಗೆ 9.30 ರಿಂದಲೇ ಲಸಿಕೆ ಪಡೆಯಲು ಆಗಮಿಸಿದ ಸಾರ್ವಜನಿಕರು ಸಾಲಿನಲ್ಲಿ ನಿಂತರಾದರೂ ಲಸಿಕೆ ಹಾಸನದಿಂದ ತರಬೇಕಾದ್ದರಿಂದ ತಡವಾಯಿತು. ಮಧ್ಯಾಹ್ನ 12 ಗಂಟೆ ನಂತರ ಲಸಿಕೆ ನೀಡಲು ಆರಂಭಿಸಿದರು. ಈ ವೇಳೆ ಒತ್ತಡ ಹೆಚ್ಚಾಗಿ ನೂಕುನುಗ್ಗಲು ಉಂಟಾಯಿತು. ಪೊಲೀಸರು ಆಗಮಿಸಿ ತಹಬದಿಗೆ ತಂದರು. ಪಟ್ಟಣದ ವಿವಿಧ ವಾರ್ಡುಗಳಲ್ಲಿ ಸ್ಥಳ ನಿಗಧಿಪಡಿಸಿ ಲಸಿಕೆ ಕೊಡುವುದಾಗಿ ತಿಳಿಸಿದ್ದರಿಂದ ಲಸಿಕೆ ಆಕಾಂಕ್ಷಿಗಳು ವಾರ್ಡುಗಳಲ್ಲೆ ಇದ್ದು ಲಸಿಕೆ ಪಡೆದುಕೊಂಡರು.
Tags
ಬೇಲೂರು