ನಂತರ ಮಾತನಾಡಿದ ಅವರು ಕೊರೊನಾ ಎರಡನೇ ಅಲೆಯಿಂದಾಗಿ ಈಗಾಗಲೇ ಸಾಕಷ್ಟು ಸಾವು ನೋವು ಗಳು ಉಂಟಾಗಿದ್ದು ಜನರ ಪ್ರಾಣ ರಕ್ಷಣೆ ಆರೋಗ್ಯ ಕಾಪಾಡಲು ಪ್ರತಿಯೊಬ್ಬರೂ ವ್ಯಾಕ್ಸೀನ್ ಪಡೆಯಬೇಕು ಎಂಬ ಉದ್ದೇಶದಿಂದ ನಮ್ಮ ೧೨ ನೇ ವರ‍್ಡನಲ್ಲಿ ಸುಮಾರು ೧೦೦ ಜನರಿಗೆ ವ್ಯಾಕ್ಸೀನ್ ನೀಡಲಾಗುತ್ತಿದೆ ಎಂದರು.
ಪುರಸಭೆ ಸದಸ್ಯ ದಾನಿ ಮಾತನಾಡಿ ಕೊರೋನಾ ವೈರಸ್ ತಡೆಯಲು ರ‍್ಕಾರ ಹಲವು ಯೋಜನೆಗಳಲ್ಲಿ ಈ ವ್ಯಕ್ಸೀನ್ ಲಸಿಕಾ ಅಭಿಯಾನ ಶುರುಮಾಡಿದ್ದರಿಂದ ಎಲ್ಲರೂ ತಪ್ಪದೆ ಲಸಿಕೆಯನ್ನು ಹಾಕಿಸಿಕೊಳ್ಳಬೇಕು.ಜನ ಲಸಿಕೆ ತೆಗೆದುಕೊಳ್ಳಲು ಹೆದರುತ್ತಿದ್ದು ಅವರಲ್ಲಿ ಜಾಗೃತಿ ಮೂಡಿಸಿ ಪ್ರತಿಯೊಬ್ಬರೂ ಲಸಿಕೆ ತೆಗೆದುಕೊಳ್ಳಬೇಕು ಇದರಲ್ಲಿ ಯಾವ ತರ ಭಯ ಭೀತಿ ಬೇಡ.ನಿಮ್ಮ ಜೊತೆ ವೈಧ್ಯಾಧಿಕಾರಿಗಳು ಸದಾ ಜೊತೆಯಲ್ಲಿರುತ್ತಾರೆ.ಮೊದಲ ಹಾಗೂ ಎರಡನೇ ಅಲೆ ಬಂದು ಹೋಗಿದೆಮೂರನೇ ಅಲೆ ಬರುವುದಕ್ಕೆ ಮುಂಚೆ ಪ್ರತಿಯೊಬ್ಬರೂ ಲಸಿಕೆ ತೆಗೆದುಕೊಳ್ಳಬೇಕು ಎಂದರು.
ನಂತರ. ವೈಧ್ಯಾಧಿಕಾರಿ ಡಾ ನರಸೇಗೌಡ ಮಾತನಾಡಿ ೨೧ ನೇ ತಾರೀಕಿನಿಂದ ಬೇಲೂರಿನಲ್ಲಿ ಕೊವೀಡ್ ಲಸಿಕೆ ಅಭಿಯಾನ ಶುರುಮಾಡಿದ್ದು,ಸರಕಾರದ ನರ‍್ದೇಶನದಂತೆ ಪ್ರತೀ ವರ‍್ಡ್ ಗೂ ಲಸಿಕಾ ಅಭಿಯಾನ ಶುರುಮಾಡಿದ್ದು ಪುರಸಭೆ ಸಹಯೋಗದೊಂದಿಗೆ ಲಸಿಕೆ ಅಭಿಯಾನ ನಡೆಸಲಾಗುತ್ತಿದೆ ಎಂದರು.
ಈ ಸಂರ‍್ಭದಲ್ಲಿ ಜನಪ್ರತಿನಿಧಿಗಳು ಹಾಜರಿದ್ದರು.