ಜಾಗೃತಿ ಮೂಡಿಸುವ ಮೂಲಕ ಅಂತರರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆ

ಪಟ್ಟಣದ ಬಸವೇಶ್ವರ ವೃತ್ತದ ಪೋಲೀಸ್ ಠಾಣಾ ವತಿಯಿಂದ ಪಿಐ ಯೋಗೇಶ್ ಅವರು ವಾಹನಚಾಲಕರು ಹಾಗೂ ಸರ‍್ವಜನಿಕರಿಗೆ ಜಾಗೃತಿ ಮೂಡಿಸುವ ಮೂಲಕ ಅಂತರರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆ ಆಚರಿಸಿದರು.


ಈ ಸಂರ‍್ಭದಲ್ಲಿ ಮಾತನಾಡಿದ ಪಿಐ ಯೋಗೇಶ್ ಮೊದ ಮೊದಲು ಮದ್ಯವನ್ನು ಕುತೂಹಲಕ್ಕಾಗಿ ಸೇವಿಸಲು ಆರಂಭಿಸುತ್ತೇವೆ. ಜನರು ತಮ್ಮೊಳಗಿನ ಒತ್ತಡವನ್ನು ಶಮನಗೊಳಿಸಲೆಂದೋ, ಸ್ನೇಹಿತರ ಒತ್ತಾಯಕ್ಕೋ, ಶೈಕ್ಷಣಿಕ ಅಥವಾ ಕ್ರೀಡೆಯಲ್ಲಿ ಹೆಚ್ಚಿನ ಸಾಧನೆ ಮಾಡಬೇಕೆಂಬ ಒಲವಿನಿಂದಲೋ ಅಥವಾ ಅವರಲ್ಲಿನ ಒತ್ತಡ ಹಾಗೂ ಸಮಸ್ಯೆಗಳನ್ನು ಮರೆಯಲೆಂದೋ ಮಾದಕ ದ್ರವ್ಯಗಳನ್ನು ಉಪಯೋಗಿಸಲು ಆರಂಭಿಸುತ್ತಾರೆ.

ಕ್ರಮೇಣ ಡ್ರಗ್ಸ್ ಬಳಕೆಯಿಂದ, ಮಿದುಳಿನಲ್ಲಿ ಬದಲಾವಣೆ ಉಂಟಾಗಿ ವ್ಯಕ್ತಿಗಳು ಮಾದಕ ವಸ್ತುಗಳನ್ನು ಹೆಚ್ಚು ಹೆಚ್ಚು ಬಯಸುವಂತೆ ಮಾಡುತ್ತದೆ. ಅಂತಹವರು ಅದರ ಸೇವನೆಯನ್ನು ನಿಯಂತ್ರಣ ಮಾಡಲಾಗದೆ ಹೋಗುತ್ತಾರೆ. ವ್ಯಕ್ತಿಗಳು ಅವರ ಮನೋ ಸಾಮಥ್ರ‍್ಯ ಕಳೆದುಕೊಳ್ಳುತ್ತಾರೆ. ಹವ್ಯಾಸದಿಂದ ಹೊರಬರಬೇಕೆಂದು ನಿಜವಾಗಿ ಬಯಿಸಿದರು ಸಾಧ್ಯವಾಗದೇ, ಮತ್ತೆ ಮತ್ತೆ ಅದರೆಡೆಗೆ ಆರ‍್ಷಿತರಾಗುತ್ತಾರೆ.ಡ್ರಗ್ ಸೇವನೆಯಿಂದ ಅವರು ಸಂಪರ‍್ಣವಾಗಿ ಅದರಿಂದ ಹೊರಬರಲು ಚಿಕಿತ್ಸೆ ಮತ್ತು ಹೆಚ್ಚಿನ ಸಹಕಾರ ಅಗತ್ಯ. ಧೂಮಪಾನ, ಗಾಂಜಾ ಮುಂತಾದವುಗಳನ್ನು ಸೇದುವುದು, ಇಂಜೆಕ್ಷನ್ ಚುಚ್ಚಿಕೊಳ್ಳುವುದು, ಜಗಿಯುವುದು ಮತ್ತು ಕುಡಿಯುವುದು ಮುಂತಾಗಿ ಅನೇಕ ವಿಧದಲ್ಲಿ ಮಾದಕ ದ್ರವ್ಯಗಳನ್ನು ಬಳಸಲಾಗುತ್ತದೆ.ಇವುಗಳು ಕಾನೂನು ಬಾಹಿರವಾಗಿದೆ.

ಅಭಿವೃದ್ದಿಗೆ ಮಾರಕವಾಗಿರುವ ಮಾದಕ ದ್ರವ್ಯ ಮತ್ತು ಮದ್ಯಪಾನ ಬಳಕೆಗೆ ಯುವಜನತೆ ತುತ್ತಾಗುತ್ತಿರುವುದು ವಿಷಾಧನೀಯವಾಗಿದೆ. ದುರದೃಷ್ಟಕರ ಸಂಗತಿಯೆಂದರೆ ಭಾರತದಲ್ಲಿ ಶೇ.೨೨ ರಷ್ಟು ಮಾದಕ ವ್ಯಸನಕ್ಕೆ ಒಳಗಾಗುತ್ತಿದ್ದಾರೆ ಮತ್ತು ಗ್ರಾಮೀಣ ಪ್ರದೇಶದಲ್ಲಿನ ಜನತೆಯೂ ತಂಬಾಕು ಬಳಕೆಗೆ ಹೆಚ್ಚಿನದಾಗಿ ಒಳಗಾಗುತ್ತಿದ್ದಾರೆ. ಈ ಎಲ್ಲಾ ವಿಷಯಗಳನ್ನು ಅರಿತು ವಿಶ್ವ ಆರೋಗ್ಯ ಸಂಸ್ಥೆಯು ಪ್ರತಿ ರ‍್ಷ ಜೂನ್ ೨೬ ರಂದು ಅಂತರಾಷ್ಟ್ರಿಯ ಮಾದಕ ವ್ಯಸನ ಹಾಗೂ ಅನಧಿಕೃತ ಕಳ್ಳಸಾಗಣೆ ವಿರೋಧಿ ದಿನಾಚರಣೆಯನ್ನು ಆಚರಿಸುತ್ತಿದ್ದು ಪ್ರತಿಯೊಬ್ಬರು ಜಾಗೃತರಾಗಿ ತಮ್ಮ ಆರೋಗ್ಯವನ್ನು ರಕ್ಷಿಸಿಕೊಳ್ಳಬೇಕು ಎಂದು ತಿಳಿಸಿದರು.

ಈ ಸಂರ‍್ಭದಲ್ಲಿ ಪುರಸಭೆ ಸದಸ್ಯ ಪ್ರಭಾಕರ್,ಎಎಸ್ಐ ನಾಗರಾಜ್,ಶಿವರಾಮ್, ಸಿಬ್ಬಂದಿಗಳಾದ ಮನು ,ಉಮೇಶ್ ,ಯೋಗೇಶ್,ಸದಾಶಿವ,ವಿರೂಪಾಕ್ಷ ಹಾಜರಿದ್ದರು.

Post a Comment

Previous Post Next Post