ವಿಶ್ವ ಪ್ರಸಿದ್ಧ ಬೇಲೂರು ಸಮೀಪದ ಯಗಚಿ ಜಲಾಶಯದ ಸುಂದರ ನೋಟ

ಯಗಚಿ ಜಲಾಶಯ  ಮೂರೇ ಅಡಿ ಬಾಕಿಕಳೆದ ರ‍್ಷ ನಾಲ್ಕು ಭಾರಿ ಜಲಾಶಯ ಬಯಲುಪ್ರದೇಶಕ್ಕೆ ಹರಿಯದ ಯಗಚಿ, ಶ್ರೀಗಳ ಬೇಸರ.ಮಲೆನಾಡಿನಲ್ಲಿ ಧಾರಾಕಾರ ಮಳೆ.ರಣಘಟ್ಟ ಯೋಜನೆ ಮರಚೀಕೆ.


     :-ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಪ್ರದೇಶದಲ್ಲಿ ಕಳೆದ ಐದಾರು ದಿನದಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದ ವಿಶ್ವ ಪ್ರಸಿದ್ಧ ಬೇಲೂರು ಸಮೀಪದ ಯಗಚಿ ಜಲಾಶಯಕ್ಕೆ ಈಗಾಗಲೇ ೯೦೦ ಕ್ಯೂಸೆಕ್ಸ್ಕೂ ಡ ನೀರು ಹರಿದು ಬರುತ್ತಿದ್ದು, ಜಲಾಶಯ ರ‍್ತಿಗೆ ಇನ್ನೂ ಮೂರೇ ಮೂರು ಅಡಿ ಬಾಕಿ ಇದ್ದು. ವರುಣನ ರ‍್ಭಟ ಮುಂದುವರೆದರೆ ಜಲಾಶಯ ರ‍್ತಿಯಾಗುವ ಎಲ್ಲಾ ಲಕ್ಷಣಗಳು ಕಾಣುತ್ತಿದೆ ಎನ್ನಲಾಗಿದೆ.

     ಹೌದು!ಯಗಚಿ ರ‍್ನಾಟಕ ರಾಜ್ಯದ ಪಶ್ಚಿಮದ ಮಲೆನಾಡು ಜಿಲ್ಲೆಗಳಲ್ಲಿ ಹರಿಯುವ ಹೇಮಾವತಿ ನದಿಯ ಪ್ರಮುಖ ಉಪನದಿ. ಇದಕ್ಕೆ ಬದರಿ ಎಂಬ ಹೆಸರೂ ಇದೆ. ಚಿಕ್ಕಮಗಳೂರು ಜಿಲ್ಲೆಯ ಬಾಬಾಬುಡನ್‍ಗಿರಿ ಬೆಟ್ಟಗಳಲ್ಲಿ ಹುಟ್ಟಿ ದಕ್ಷಿಣ ದಿಕ್ಕಿಗೆ ಹರಿಯುತ್ತದೆ. ಪಶ್ಚಿಮ ಭಾಗದಿಂದ ಹರಿದುಬರುವ ವಾಟೆಹೊಳೆ ಮತ್ತು ಬೆರೆಂಜಿಹಳ್ಳ ಇದರ ಉಪನದಿಗಳು. ಪ್ರಖ್ಯಾತ ಬೇಲೂರು ಪಟ್ಟಣದ ಬಳಿ ಹಾದು ಹಾಸನ ತಾಲ್ಲೂಕಿನ ಗೊರೂರು ಬಳಿ ಹೇಮಾವತಿ ನದಿಯನ್ನು ಸೇರುವ ಯಗಚಿ ಜಲಾಶಯವು ೨೦೦೪ ರಲ್ಲಿ ಹಾಸನ, ಚಿಕ್ಕಮಗಳೂರು ಮತ್ತು ಬೇಲೂರು ಜಿಲ್ಲೆಗಳಿಗೆ ಕುಡಿಯುವ ನೀರನ್ನು ಪೂರೈಸಲು ಮತ್ತು ನೀರಾವರಿ ಸೌಲಭ್ಯವನ್ನು ನೀಡುವ ಉದ್ದೇಶದಿಂದ ಜಲಾಶಯ ನರ‍್ಮಾಣಗೊಂಡಿತು. ಯಗಚಿ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಈ ಜಲಾಶಯವು ಸಮುದ್ರ ಮಟ್ಟದಿಂದ ೯೬೫ ಅಡಿ ಎತ್ತರದಲ್ಲಿದೆ. ಯಗಚಿ ಜಲಾಶಯದ ಹೊರಹರಿವು ೪೩೦೦ ಕ್ಯುಸೆಕ್ಸ್ ಮತ್ತು ಒಳ ಹರಿವು ೪೫೦೦ ಕ್ಯುಸೆಕ್ಸ್ ಇರುತ್ತದೆ. ಅದರೆ ಕಳೆದ ೨೦೨೦ ರಲ್ಲಿ ಸುರಿದ ಭಾರೀ ಧಾರಾಕಾರ ಮಳೆಯಿಂದ ಯಗಚಿ ಜಲಾಶಯದಲ್ಲಿ‌ ಏಕಕಾಲಕ್ಕೆ ೩೦ ಸಾವಿರ ಕ್ಯೂಸೆಕ್ಸ್ ಅಧಿಕ ನೀರು ಹೊರ ಹರಿಯುವ ಮೂಲಕ ದಾಖಲೆ ನರ‍್ಮಾಣ ಮಾಡಿದ್ದು. ಕಳೆದ ರ‍್ಷ ವರುಣನ ರ‍್ಭಟದಿಂದ ಯಗಚಿ ನಾಲ್ಕು ಬಾರಿ ರ‍್ತಿಯಾಗಿದ್ದು ಕೂಡ ದಾಖಲೆ ನರ‍್ಮಿಸಿದೆ. ಸದ್ಯ ಪ್ರಸಕ್ತ ರ‍್ಷ ಮುಂಗಾರು ಸ್ವಲ್ಪ ವಿಳಂಬವಾಗಿಯೇ ಆರಂಭವಾದರೂ ಯಗಚಿ ಕೊಳ್ಳದ ಮೂಡಿಗೆರೆ ಮತ್ತು ಇನ್ನಿತರ ಮಲೆನಾಡು ಭಾಗದಲ್ಲಿ ಅತ್ಯಂತ ಧಾರಾಕಾರ ಮಳೆಯಿಂದ ಯಗಚಿ ಜಲಾಶಯಕ್ಕೆ ಕಳೆದ ಎರಡು ದಿನದಿಂದ ೯೦೦ ಕ್ಯೂಸೆಕ್ಸ್ ನೀರು ಹರಿಯುತ್ತಿರುವ ಕಾರಣದಿಂದಲೇ ಬಹುತೇಕ ಅಣೆಕಟ್ಟು ರ‍್ತಿಯಾಗುವ ಆಶಾಭಾವನೆಯನ್ನು ಜನರು ಹೊಂದಿದ್ದಾರೆ. ಇಷ್ಟಾದರೂ ತಾಲ್ಲೂಕಿನ ಬಯಲು ಸೀಮೆಯ ಪ್ರದೇಶಗಳಾದ ಹಳೇಬೀಡು ಮತ್ತು ಮಾದೀಹಳ್ಳಿ ಹಾಗೂ ಜಾವಗಲ್ ಹೋಬಳಿ ವ್ಯಾಪ್ತಿಯಲ್ಲಿ ವರುಣನ ಅಕೃಪೆಯಿಂದ ಬಿತ್ತನೆ ತೀವ್ರ ಕುಂಠಿತವಾಗಿದೆ. ಈ ಭಾಗದ ರೈತಾಪಿ ರ‍್ಗದ ಬಹುದಿನಗಳ ಮಹತ್ವಪರ‍್ಣ ಬೇಡಿಕೆಯಾದ ರಣಘಟ್ಟ ಯೋಜನೆ ಕೇವಲ ಕಾಗದದ ಹಾಳೆಯ ಮೇಲೆ ಅಕ್ಷರವಾಗಿರುವುದು ಇಲ್ಲಿನ ಜನರ ಬೇಸರಕ್ಕೆ ಕಾರಣವಾಗಿದ್ದು, ರಾಜಕೀಯ ನಾಯಕರು ಇಚ್ಚಾಶಕ್ತಿಯ ಮೂಲಕ ಯೋಜನೆಯ ಕರ‍್ಯಗತಕ್ಕೆ ಮುನ್ನುಡಿ ಬರೆಯಬೇಕು ಎಂದು ಇಲ್ಲಿನ ರೈತ ಸಂಘ ಒತ್ತಾಯಿಸಿದ್ದು, ಅಗತ್ಯ ಬಿದ್ದರೇ ಹೋರಾಟ ಅನಿವರ‍್ಯವೆಂದು ಎಚ್ಚರಿಕೆ ನೀಡಿದ್ದಾರೆ.                   

ಶ್ರೀ ಶ್ರೀ ಸೋಮಶೇಖರ ಶಿವಾಚರ‍್ಯ ಮಹಾಸ್ವಾಮಿಗಳು ಪುಷ್ಪಗಿರಿ ಶ್ರೀ ಮಠ.

     :-ಕಳೆದ ಮೂರು ರ‍್ಷಗಳಿಂದ ಯಗಚಿ ಜಲಾಶಯ ರ‍್ತಿಯಾಗಿ ಹರಿಯುತ್ತಾ ಹೇಮಾವತಿಗೆ ಸೇರುತ್ತಿದೆ. ಅದರೆ ಕ್ಷೇತ್ರದ ಹಳೇಬೀಡು, ಮಾದೀಹಳ್ಳಿ ಮತ್ತು ಜಾವಗಲ್ ಹೋಬಳಿ ಜನತೆ ಇವತ್ತಿಗೂ ನೀರಿನ ಪರಿತಾಪ ತೀವ್ರ ತಾರಕಕ್ಕೆ ಏರಿದರೂ ಸಂಬಂಧಿಸಿದ ರ‍್ಕಾರ ಕೇವಲ ಬಜೆಟ್ ನಲ್ಲಿ‌ ಹಣ ಘೋಷಣೆ ‌ಮಾಡಿ ಮೌನಕ್ಕೆ ಜಾರಿದ ಕ್ರಮ ನಿಜಕ್ಕೂ ಶೋಚನೀಯ. ರಾಜ್ಯ ರ‍್ಕಾರ ಕೊರೊನಾ ಸಂಕಷ್ಟವೆಂದು ಅಭಿವೃದ್ಧಿ ಕೆಲಸವನ್ನು ಸ್ಥಗಿತ ಮಾಡಿದರೇ ಬಹುಜನ ರೈತರ ಬದುಕು ಮೂರಾಬಟ್ಟೆಯಾಗುತ್ತದೆ ಎಂಬ ಪರಿಜ್ಞಾನ ಜನಪ್ರತಿನಿಧಿಗಳಿಗೆ ಇರಬೇಕಿದೆ. ರ‍್ಕಾರ ಶೀಘ್ರವೇ ರಣಘಟ್ಟ ಯೋಜನೆ ಕಾಮಗಾರಿ ಟಿಂಡರ್ ನಡೆಸಿ ಚಾಲನೆ ನೀಡಬೇಕು ಇಲ್ಲವಾದರೆ ಬಯಲು ಸೀಮೆಯ ಶಾಶ್ವತ ನೀರಾವರಿಯಾಗಿ ಹೋರಾಟ ನಡೆಸುವುದು ಅನಿವರ‍್ಯವೆಂದರು.                                          

ಚಂದ್ರಶೇಖರ್ ಅಧ್ಯಕ್ಷರು ಕರವೇ ತಾಲ್ಲೂಕು ಘಟಕ ಬೇಲೂರು.

   :-ಯಗಚಿ ಜಲಾಶಯ ಬೇಲೂರಿನಲ್ಲಿ ನರ‍್ಮಾಣವಾಗಿದ್ದರೂ ಬೇಲೂರು ಜನತೆ ಮಾತ್ರ ಕುಡಿಯುವ ನೀರಿಗೆ ಮತ್ತು ಕೃಷಿಗೆ ನೀರು ಇಲ್ಲದ ಅನ್ಯ ತಾಲ್ಲೂಕಿನ ಕೃಷಿಗೆ ಉಪಯುಕ್ತವಾಗಿದೆ. ಇದಕ್ಕೆ ಕಾರಣ ಇಲ್ಲಿನ ಇಚ್ಚಾಶಕ್ತಿ ಇಲ್ಲದ ರಾಜಕೀಯ ನಾಯಕರ ಜಾಣ ಮೌನದಿಂದಲೇ ತಾಲ್ಲೂಕನ್ನು ಬಲಿ ನೀಡಿದ್ದಾರೆ. ಈಗಲಾದರೂ ಶಾಸಕರು ಮತ್ತು ಎಲ್ಲಾ ಜನಪ್ರತಿನಿಧಿಗಳು ಒಮ್ಮತದಿಂದ ಯಗಚಿ ಜಲಾಶಯದಿಂದ ಸಂಪರ‍್ಣ ವಂಚಿತರಾದ ಗ್ರಾಮಗಳಿಗೆ ಶೀಘ್ರವೇ ಕುಡಿಯುವ ನೀರನ್ನು ನೀಡಲು ಮುಂದಾಗಬೇಕಿದೆ. ವಿಶೇಷವಾಗಿ ಯಗಚಿ ಅಣೆಕಟ್ಟು ಬಳಿ ಸುಂದರ ಉದ್ಯಾನವನ ನರ‍್ಮಾಣ ಮತ್ತು ಮೂಲ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಇಲ್ಲವಾದರೆ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ಸಂದೇಶ ನೀಡಿದ್ದಾರೆ.


Post a Comment

Previous Post Next Post