ಹಾಸನ: ಕಳೆದ ೬ ವರ್ಷಗಳಿಂದ ಪತ್ರಕರ್ತನಾಗಿ ಹಾಸನದಲ್ಲಿ ಸೇವೆ ಸಲ್ಲಿಸಿದ ಮಲ್ಲಿಕಾರ್ಜುನ್ ಕೊಚ್ಚರಿಗೆ ಅವರು ಬೆಳಗಾವಿಗೆ ವರ್ಗಾಗೊಂಡ ಹಿನ್ನಲೆಯಲ್ಲಿ ಹಾಸನ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಆತ್ಮೀಯವಾಗಿ ಬೀಳ್ಕೊಡಿಗೆ ನೀಡಲಾಯಿತು.
ಸ್ಥಳೀಯ ಪತ್ರಿಕೆಯಾದ ಜನಹಿತಾ ಪತ್ರಿಕೆ ಮೂಲಕ ಪತ್ರಿಕಾರಂಗಕ್ಕೆ ಪಾದರ್ಪಣೆ ಮಾಡಿದ ಮಲ್ಲಿಕಾರ್ಜುನ್ ಅವರು, ನಂತರದಲ್ಲಿ ಪ್ರಜಾವಾಣಿಯಲ್ಲಿ ಕೆಲ ತಿಂಗಳು ಕೆಲಸ ನಿರ್ವಹಿಸಿದ ಬಳಿಕ ವಿಜಯವಾಣಿಯಲ್ಲಿ ಹಲವು ವರ್ಷಗಳ ಕಾಲ ವರದಿಗಾರರಾಗಿ ನೆಲೆ ಹೂರಿದರು. ಯಾರೆ ಪತ್ರಕರ್ತರು, ಟಿವಿ ಮಾಧ್ಯಮದವರು ಕೋಪದಿಂದ ಮಾತನಾಡಿಸಿದರೆ ನಗುನಗುತಲೆ ಮಾತನಾಡಿಸುತ್ತಿದ್ದ ಮಲ್ಲಿಕಾರ್ಜುನ್ ಪತ್ರಿಕೆಯಲ್ಲೆ ನೆಲೆಯಾಗಿ ಎಲ್ಲಾರ ಪ್ರೀತಿಗೆ ಪಾತ್ರರಾಗಿದ್ದರು.
ಸಮಾಜದಲ್ಲಿ ಉದ್ಭವಿಸುವ ನಾನಾ ಸಮಸ್ಯೆಗಳಿಗೆ ತಮ್ಮ ಬರಹದ ಮೂಲಕ ಸರಕಾರದ ಗಮನಸೆಳೆಯುವ ಮೂಲಕ ತಮ್ಮದೆಯಾದ ಛಾಪು ಮೂಡಿಸಿದ್ದರು. ಯಾವುದೇ ಸುದ್ದಿ ಇದ್ದರೂ ಅದನ್ನು ವಿಶ್ಲೇಷಿಸಿ ಪ್ರಕಟಿಸುತ್ತಿದ್ದರು. ಹಾಸನ ನಗರದಲ್ಲಿ ಬಹು ಮುಖ್ಯ ಸಮಸ್ಯೆ ಇದ್ದ ಕುಡಿಯುವ ನೀರಿನ ಸಮಸ್ಯೆ, ವಾರ್ಡ್ಗಳಲ್ಲಿ ಸ್ವಚ್ಛತೆ ಇಲ್ಲದಿರುವುದು, ರಸ್ತೆ ದುರಸ್ತಿ ಬಗ್ಗೆ, ದಲಿತರಿಗೆ ನ್ಯಾಯಯುತವಾಗಿ ಸಿಗಬೇಕಾದ ನಿವೇಶನ ಮತ್ತು ಇವರ ನಡೆಯುತ್ತಿರುವ ದಬ್ಬಾಳಿಕೆ, ವಿವಿಧ ಇಲಾಖೆಗಳಲ್ಲಿ ಕಾಮಗಾರಿಗಳ ನಿರ್ಲಕ್ಷö್ಯ ಹಾಗೂ ಇತ್ತಿಚಿಗೆ ಕೊರೋನಾದಿಂದ ಬೀದಿಗೆ ಬಿದ್ದ ಬಡವರ ಬಗ್ಗೆ ಸೇರಿದಂತೆ ಇತರೆ ಸಮಸ್ಯೆಗಳ ವಿಚಾರವಾಗಿ ಸ್ಥಳಕ್ಕೆ ಹೋಗಿ ಅಲ್ಲಿನ ಸತ್ಯಸತ್ಯತೆಯನ್ನು ಪರಿಶೀಲಿಸಿ ಉತ್ತಮ ಬರಹವನ್ನು ಪತ್ರಿಕೆಗಳಲ್ಲಿ ಪ್ರಕಟಿಸಿ ಸರಕಾರದ ಗಮನಸೆಳೆದು ನ್ಯಾಯ ಕೊಡಿಸುವಲ್ಲಿ ತಮ್ಮದೆಯಾದ ಸೇವೆಯನ್ನು ನೀಡಿರುವ ಬಗ್ಗೆ ಇದೆ ವೇಳೆ ನೆನಪಿಸಿಕೊಂಡರು.
ಸತತ ೬ ವರ್ಷಗಳ ಕಾಲ ಪತ್ರಿಕಾರಂಗದಲ್ಲೆ ಸೇವೆಯನ್ನು ಸಲ್ಲಿಸಿ ಈಗ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದು, ಹಾಸನದಲ್ಲಿ ಇದ್ದ ಅವಧಿಯೊಳಗೆ ಎಲ್ಲಾರ ಹೃದಯವನ್ನು ಗೆದ್ದಿದ್ದ ಮಲ್ಲಿಕಾರ್ಜುನ್ ಈಗ ಬೆಳಗಾವಿ ಜಿಲ್ಲೆಯಲ್ಲಿ ವಿಜಯವಾಣಿಯಲ್ಲೆ ತಮ್ಮ ಸೇವೆ ಮುಂದುವರೆಸಲು ನಿರ್ಧರಿಸಿದ್ದಾರೆ. ಹಾಸನ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಅಭಿನಂದಿಸಿ ಗೌರವಿಸಲಾಯಿತು.
ಈಸಂದರ್ಭದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಉಪಾಧ್ಯಕ್ಷ ಹಿಂದೂ ಪ್ರಕಾಶ್, ಪ್ರಧಾನ ಕಾರ್ಯದರ್ಶಿ ಕೆ.ಜಿ. ಸುರೇಶ್, ಮಾಜಿ ಅಧ್ಯಕ್ಷರಾದ ಉದಯಕುಮಾರ್, ಬನವಾಸೆ ಮಂಜು, ನಂದೀಶ್, ಹಿಂದೂ ಸತೀಶ್, ಹೆತ್ತೂರ್ ನಾಗರಾಜು ಇತರರು ಉಪಸ್ಥಿತರಿದ್ದರು.