ಲಾಕ್ ಡೌನ್ ನಿಯಮದಲ್ಲಿ ಪತಂಜಲಿ ಪರಿವಾರದಿಂದ ವಿಶ್ವ ಯೋಗ ದಿನಾಚರಣೆ

ಹಾಸನ: ಜೂಮ್ ಮೀಟ್ ಮೂಲಕ ನಡೆದ ಅಂತರಾಷ್ಟ್ರೀಯ ಯೋಗ ದಿನದ ಆಚರಣೆಯನ್ನು ಪತಂಜಲಿ ಪರಿವಾರದಿಂದ ನಗರದ ಎಂ.ಜಿ. ರಸ್ತೆ ಬಳಿ ಇರುವ ಶ್ರೀಅನ್ನಪೂರ್ಣೇಶ್ವರಿ ಕಲ್ಯಾಣ ಮಂಟಪದಲ್ಲಿ ಸೇರಿ ಲಾಕ್ ಡೌನ್ ನಿಯಮಗಳ ಪಾಲನೆಯೊಂದಿಗೆ ನೆರವೇರಿಸಲಾಯಿತು.


    ಮೊದಲು ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟನೆ ನೆರವೇರಿಸಲಾಯಿತು. ನಂತರ ಪತಂಜಲಿ ಪರಿವಾರದ ಸಂರಕ್ಷಕರಾದ ಹರಿಹರಪುರ ಶ್ರೀಧರ್ ಅವರ ನೇತೃತ್ವದಲ್ಲಿ ಅಗ್ನಿಹೋತ್ರವನ್ನು ತಮ್ಮ ಮನೆಯಿಂದಲೇ ಮತ್ತು ರಾಜ್ಯದ ಇತರ ಭಾಗಗಳಿಂದ ಯೋಗ ಸಾಧಕರು ಭಾಗವಹಿಸಿದ್ದರು. ಇದಾದ ಬಳಿಕ ಪ್ರೋಟೋಕಾಲ್ ಪ್ರಕಾರ ಅನುಸರಿಸಿ ಒಂದು ಗಂಟೆಗಳ ಕಾಲ ಯೋಗಭ್ಯಾಸ ಮಾಡಲಾಯಿತು.

        ಭಾರತ್ ಸ್ವಾಭಿಮಾನ್ ಟ್ರಸ್ಟ್ ಜಿಲ್ಲಾ ಪ್ರಭಾರಿ ಶೇಷಪ್ಪ ಅವರು ಉದ್ದೇಶಿಸಿ ಮಾತನಾಡುತ್ತಾ, ಕಳೆದ ೨೫ ವರ್ಷಗಳಿಂದ ನಿರಂತರವಾಗಿ ಮನೆ ಮನೆಗೆ ಯೋಗವನ್ನು ತಲುಪಿಸುವ ಕೆಲಸವನ್ನು ಸ್ವಾಮೀಜಿಯವರು ಮಾಡುತ್ತಿದ್ದಾರೆ. ಕಳೆದ ವರ್ಷದಿಂದ ಇಡೀ ವಿಶ್ವಕ್ಕೆ ಕೊರೋನಾ ರೋಗ ಹರಡಿದ್ದು, ಅದನ್ನು ತಡೆಗಟ್ಟಲು ಉತ್ತಮವಾದ ಸಾಧನೆ ಮತ್ತು ತಪಸ್ಸು ಎಂದರೆ ಯೋಗ. ಯೋಗದಿಂದ ಮನುಷ್ಯ, ದೈಹಿಕವಾಗಿ, ಮಾನಸಿಕವಾಗಿ ಸದೃಢರಾಗಬಹುದು ಎಂದು ಕಿವಿಮಾತು ಹೇಳಿದರು. ಯೋಗದಿಂದ ಸಿಗುವ ಲಾಭದ ಬಗ್ಗೆ ಮೆಡಿಕಲ್ ನಿಂದಲೇ ಸಾಬೀತಾಗಿದೆ. ಯೋಗಕ್ಕೆ ಯಾವುದೇ ಕಟ್ಟುಪಾಡುಗಳಿಲ್ಲ. ಕೊರೋನಾ ಹಿನ್ನಲೆಯಲ್ಲಿ ಸಾಮಾಜಿಕ ಅಂತರ ಪಾಲಿಸಿ ಮನೆ ಮನೆಯಲ್ಲಿ ಯೋಗವನ್ನು ಮಾಡಬಹುದು ಎಂದು ಸಲಹೆ ನೀಡಿದರು. ಅನ್ನಪೂರ್ಣೇಶ್ವರಿ ಕಲ್ಯಾಣ ಮಂಟಪವನ್ನು ಒಂದು ತಿಂಗಳ ಕಾಲಯೋಗಕ್ಕಾಗಿ ಉಚಿತವಾಗಿ ಕೊಟ್ಟಿರುವ ಇಂತಹ ಸದುಪಯೋಗವನ್ನು ಪಡೆದುಕೊಳ್ಳಬಹುದಾಗಿದೆ. ಸಾಮಾಜಿಕ ಅಂತರದಲ್ಲೆ ನೂರು ಜನರು ಯೋಗದಲ್ಲಿ ಪಾಲ್ಗೊಳ್ಳಬಹುದಾಗಿದೆ ಎಂದರು. ಯೋಗ ಸಾಧಕರಿಗೆ ಮತ್ತು ಯೋಗವನ್ನು ಕಲಿಯುವವರಿಗೆ ಒಳ್ಳೆಯ ವೇದಿಕೆಯಾಗಿದೆ. ಪ್ರತಿದಿನ ಬೆಳಿಗ್ಗೆ ೫ ರಿಂದ ೬:೩೦ರ ವರೆಗೂ ಯೋಗಭ್ಯಾಸದಲ್ಲಿ ಪಾಲ್ಗೊಳ್ಳಬಹುದಾಗಿದೆ ಎಂದು ಮಾಹಿತಿ ನೀಡಿದರು. ಪ್ರತಿನಿತ್ಯ ಕೆಲ ಸಮಯ ಯೋಗಕ್ಕಾಗಿ ಮೀಸಲಿಟ್ಟು ತಮ್ಮ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ. ಇಡೀ ವಿಶ್ವಕ್ಕೆ ಆರೋಗ್ಯವನ್ನು ಕೊಡುವ ಸಾಧನ ಎಂದರೇ ಅದು ಯೋಗ. ದಿನನಿತ್ಯ ಸಲ್ಪ ಯೋಗಕ್ಕಾಗಿ ಸಮಯವನ್ನು ನೀಡಿದರೇ ರೋಗಮುಕ್ತ ಸಮಾಜ ಮತ್ತು ರಾಷ್ಟçವನ್ನು ಮಾಡೋಣ ಎಂದು ಕರೆ ಕೊಟ್ಟರು.

   ಈಸಂದರ್ಭದಲ್ಲಿ ಪತಂಜಲಿ ಪರಿವಾರದ ಹಿರಿಯ ಸದಸ್ಯರು ರಂಗನಾಥ್, ಜಿಲ್ಲಾ ಪ್ರಭಾರಿ ಗಿರೀಶ್, ಯುವ ಭಾರತ್ ಜಿಲ್ಲಾ ಪ್ರಭಾರಿ ಸುರೇಶ್ ಪ್ರಜಾಪತಿ, ಯುವ ಭಾರತ್ ಜಿಲ್ಲಾ ಸಹಪ್ರಭಾರಿ ಡಿ. ಮಂಜುನಾಥ್, ಪತಂಜಲಿ ಜಿಲ್ಲಾ ಸಹ ಪ್ರಭಾರಿ ದೊರೆಸ್ವಾಮಿ, ರುಕ್ಮಿಣಿ, ಬಾಬಾಣ್ಣ, ಶಾರದ, ಮಂಜೂಳ, ಸರ್ವಮಂಗಳ, ಸುಜಾತ, ಅಶ್ವಿನಿ ಸೇರಿದಂತೆ ಇತರರು ಪಾಲ್ಗೊಂಡಿದ್ದರು.


Post a Comment

Previous Post Next Post