ಬಾಲಿವುಡ್‌ನ ಪ್ರತಿಭಾವಂತ ನಟಿ ತಾಪ್ಸಿ ಪನ್ನು ತಮ್ಮ ಮದುವೆ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ. ಪೋಷಕರಿಗೆ ತನ್ನ ಮದುವೆಯದ್ದೇ ಚಿಂತೆ ಎಂದು ತಾಪ್ಸಿ ಇತ್ತೀಚಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಒಂದಲ್ಲೊಂದು ವಿಚಾರಕ್ಕೆ ತಾಪ್ಸಿ ಸದಾ ಸುದ್ದಿಯಲ್ಲಿರುತ್ತಾರೆ. ನಟಿ ಕಂಗನಾ ಮತ್ತು ತಾಪ್ಸಿ ನಡುವಿನ ವಾಗ್ವಾದ ಆಗಾಗ ಚರ್ಚೆಯ ಕೇಂದ್ರ ಬಿಂದುವಾಗಿರುತ್ತೆ. ತಾಪ್ಸಿ ವಿರುದ್ಧ ಕಂಗನಾ ಸದಾ ಆರೋಪ ಮಾಡುತ್ತಾ ಕಾಲೆಳೆಯುತ್ತಿರುತ್ತಾರೆ.
ಇದೀಗ ತಾಪ್ಸಿ ಮದುವೆ ವಿಚಾರವಾಗಿ ಚರ್ಚೆಯಲ್ಲಿದ್ದಾರೆ. ತಾಪ್ಸಿ ಅವಿವಾಹಿತರಾಗಿ ಹಾಗೆ ಉಳಿದುಬಿಡುತ್ತಾರಾ ಎನ್ನುವ ಚಿಂತೆ ಅವರ ಪೋಷಕರಿಗೆ ಕಾಡುತ್ತಿದೆಯಂತೆ. ಹಾಗಾಗಿ ಯಾರಾದರೂ ಪರವಾಗಿಲ್ಲ ಮದುವೆಯಾಗಲಿ ಎಂದು ಪೋಷಕರು ಬಯಸುತ್ತಿದ್ದಾರೆ ಎಂದು ತಾಪ್ಸಿ ಬಹಿರಂಗ ಪಡಿಸಿದ್ದಾರೆ. ಮುಂದೆ ಓದಿ...
ಬ್ಯಾಡ್ಮಿಂಟನ್ ಆಟಗಾರನ ಜೊತೆ ತಾಪ್ಸಿ ಪ್ರೀತಿ
ತಾಪ್ಸಿ ಮಾಜಿ ಬ್ಯಾಡ್ಮಿಂಟನ್ ಆಟಗಾರ ಮತ್ತು ತರಬೇತುದಾರ ಮಥೀಶ್ ಬೋ ಜೊತೆ ಪ್ರೀತಿಯಲ್ಲಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಈ ಬಗ್ಗೆ ತಾಪ್ಸಿ ಎಲ್ಲಿಯೂ ಬಹಿರಂಗ ಪಡಿಸದಿದ್ದರೂ ಇಬ್ಬರ ಸಂಬಂಧ ಗುಟ್ಟಾಗಿ ಉಳಿದಿಲ್ಲ. ವೃತ್ತಿಜೀವನದಲ್ಲಿ ದೊಡ್ಡ ಸಾಧನೆ ಮಾಡದ ಹೊರತು ಮದುವೆಯಾಗಲ್ಲ ಎಂದು ಈ ಹಿಂದೆ ಬಹಿರಂಗ ಪಡಿಸಿದ್ದರು.
ತಾತ್ಕಾಲಿಕ ಸಂಬಂಧಗಳ ಬಗ್ಗೆ ಆಸಕ್ತಿ ಇಲ್ಲ
ಸದ್ಯ ತಾಪ್ಸಿ ಉತ್ತಮ ಸಿನಿಮಾಗಳನ್ನು ಮಾಡುತ್ತಿದ್ದು, ತನ್ನ ಕೈಯಲ್ಲಿ ಸಾಲು ಸಾಲು ಸಿನಿಮಾಗಳನ್ನು ಇಟ್ಟುಕೊಂಡಿದ್ದಾರೆ. ತಾಪ್ಸಿ ತನ್ನ ವೃತ್ತಿ ಜೀವನದ ಉತ್ತುಂಗಕ್ಕೆ ಏರುತ್ತಿದ್ದಾರೆ. ಅದ್ಭುತ ಸಿನಿಮಾಗಳ ಮೂಲಕ ಅಭಿಮಾನಿಗಳನ್ನು ಸೆಳೆಯುತ್ತಿದ್ದಾರೆ. ಇತ್ತೀಚಿಗೆ ಮದುವೆ ಬಗ್ಗೆ ಮಾತಾಡಿರುವ ತಾಪ್ಸಿ "ತಾತ್ಕಾಲಿಕ ಸಂಬಂಧಗಳ ಬಗ್ಗೆ ಆಸಕ್ತಿ ಇಲ್ಲ" ಎಂದು ಹೇಳಿದ್ದಾರೆ.
ಪೋಷಕರಿಗೆ ನನ್ನ ಮದುವೆಯದ್ದೇ ಚಿಂತೆ
ಇದೇ ಸಮಯದಲ್ಲಿ ಮಾತನಾಡಿದ ತಾಪ್ಸಿ "ನನ್ನ ಪೋಷಕರು ದಯವಿಟ್ಟು ಮದುವೆಯಾಗು, ಯಾರೊಂದಿಗಾದರು ಆಗು ಎಂದು ಅವರು ಚಿಂತೆ ಮಾಡುತ್ತಿದ್ದಾರೆ. ನಾನು ಕೊನೆವರೆಗೂ ಮದುವೆಯಾಗದೆ ಹಾಗೆ ಉಳಿದಿರುತ್ತೇನೆ ಎಂದು ಅವರ ಚಿಂತೆ" ಎಂದು ತಾಪ್ಸಿ ಹೇಳಿದ್ದಾರೆ.
ತಾಪ್ಸಿ ಬಳಿ ಇರುವ ಸಿನಿಮಾಗಳು
ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ ಇತ್ತೀಚಿಗೆ ಬಿಡುಗಡೆಯಾದ ಹಸೀನ್ ದಿಲ್ ರುಬಾ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ತಾಪ್ಸಿ ಅಭಿನಯಕ್ಕೆ ಶ್ಲಾಘನೆ ವ್ಯಕ್ತವಾಗುತ್ತಿದೆ. ರೊಮ್ಯಾಂಟಿಕ್ ಥ್ರಿಲ್ಲರ್ ಸಿನಿಮಾ ನೆಟ್ ಫ್ಲಿಕ್ಸ್ ನಲ್ಲಿ ಜುಲೈ 2ರಂದು ಬಿಡುಗಡೆಯಾಗಿದೆ. ಇನ್ನು 4 ವರ್ಷಗಳ ಬಳಿಕ ಮತ್ತೆ ತಾಪ್ಸಿ ಟಾಲಿವುಡ್ ಗೆ ಮರಳುತ್ತಿದ್ದಾರೆ. ಮಿಷನ್ ಇಂಪಾಸಿಬಲ್ ಚಿತ್ರದ ಮೂಲಕ ಮತ್ತೆ ತೆಲುಗು ಅಭಿಮಾನಿಗಳನ್ನು ರಂಜಿಸಲು ಸಜ್ಜಾಗುತ್ತಿದ್ದಾರೆ. ಇನ್ನು ಶಾರುಖ್ ಖಾನ್ ಜೊತೆ ನಟಿಸಲಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ.