ದಲಿತರಿಗೆ ಸೌಲಭ್ಯ-ಸವಲತ್ತುಗಳ ದೊರಕಿಸಿಕೊಡುವ ಭರವಸೆ

 ಬೇಲೂರು : ಸಮಾಜದಲ್ಲಿ ಹಿಂದುಳಿದವರಿಗೆ ವಿವಿಧ ಇಲಾಖೆಯಿಂದ ದೊರಕುವ ಸೌಲಭ್ಯಗಳು, ಕುಂದುಕೊರತೆಗಳ ಕುರಿತು ಚರ್ಚಿಸಲು ಸಭೆ ನಡೆಸಲಾಗುತ್ತಿದೆ ಎಂದು ಸಿಪಿಐ ಯೋಗೇಶ್ ತಿಳಿಸಿದರು.

ಬೇಲೂರಿನ ಪೊಲೀಸ್ ಠಾಣೆ ಆವರಣದಲ್ಲಿ ಏರ್ಪಡಿಸಿದ್ದ ಪರಿಶಿಷ್ಟಜಾತಿ ವರ್ಗದವರ ಸಭೆಯಲ್ಲಿ ಸಿಪಿಐ ಯೋಗೇಶ್ ಹಾಗೂ ಇತರ ದಲಿತ ಮುಖ್ಯಂಡರು ಮಾತನಾಡಿದರು


ನಮ್ಮ ಇಲಾಖೆಯಿಂದ ಆಗಬೇಕಾದ ಕೆಲಸಕಾರ್ಯಗಳೇನು ಎಂಬುದನ್ನು ತಿಳಿಸಿದರೆ ಕಾರ್ಯೋನ್ಮುಖರಾಗಬಹುದು. ನಮ್ಮ ವ್ಯಾಪ್ತಿಯಲ್ಲಿ ಆಗುವುದಿದ್ದರೆ ನಾವೆ ಮಾಡುತ್ತೇವೆ, ಆಗದಿದ್ದ ಪಕ್ಷದಲ್ಲಿ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು. ಇತರ ಇಲಾಖೆಗಳಿಂದ ಆಗಬೇಕಾದ ಕೆಲಸಗಳ ಬಗ್ಗೆ ಸಂಬಂಧಪಟ್ಟ ಇಲಾಖೆ ಮುಖ್ಯಸ್ಥರಿಗೆ ತಿಳಿಸುವ ಕೆಲಸ ಮಾಡಲಾಗುವುದು ಎಂದರು.

ಕರವೇ ತಾ.ಅಧ್ಯಕ್ಷ ಚಂದ್ರಶೇಖರ್ ಮಾತನಾಡಿ, ಇದೀಗ ಸಭೆ ನಡೆಸುತ್ತಿರುವುದು ಸಂತೋಷವಾಗಿದೆ, ಪ್ರತಿತಿಂಗಳು ಸಭೆ ನಡೆಸಬೇಕು ಹಾಗೂ ಸಭೆ ನಡೆಸುವಾಗ ಒಂದು ದಿನ ಮುಂಚೆಯೆ ಸಭೆ ಬಗ್ಗೆ ತಿಳಿಸಿದರೆ ಹೆಚ್ಚುಜನರು ಬರಲು ಅನುಕೂಲ ಆಗಲಿದೆ ಎಂದರು. ಠಾಣೆಗೆ ಸಮಸ್ಯೆ ಹೇಳಿಕೊಂಡು ಆಗಮಿಸುವ ದಲಿತ ಜನರಿಗೆ ಅನುಕೂಲ ಕಲ್ಪಿಸಕೊಡುವಂತೆಕೋರಿದರು. ತಾ.ಪಂ. ಮಾಜಿ ಸದಸ್ಯ ಮಂಜುನಾಥ್ ಮಾತನಾಡಿ, ದಲಿತ ಸಮುದಾಯದವರು ಗಲಾಟೆ, ಅದು ಇದು ಮಾಡಿಕೊಂಡುಬಂದ ವೇಳೆ ದಿಢೀರ್ ಆಗಿ ಕೇಸು ಹಾಕುವುದಕ್ಕಿಂತ ಮುಂಚೆ ರಾಜಿಪ್ರಯತ್ನ ಮಾಡುವುದು ಒಳ್ಳೆಯದು ಎಂದು ಇತ್ತೀಚಿನ ಕಾಂಗ್ರೆಸ್ ಹಾಗೂ ಜಾ.ದಳ ಪ್ರಮುಖರ ನಡುವಿನ ಗಲಾಟೆಯನ್ನು ಉದಾಹರಿಸಿದರು. ಎಂ.ಜಿ.ವೆಂಕಟೇಶ್ ಮಾತನಾಡಿದರು. ಎಸ್.ಜೆ.ಪಾಟೀಲ್ ಇದ್ದರು.

Post a Comment

Previous Post Next Post