ರಾಜ್ಯ ಮಟ್ಟದ ಕೃಷಿ ಪಂಡಿತ ಪ್ರಶಸ್ತಿಗೆ ಅರ್ಜಿ ಆಹ್ವಾನ

ಹೊಳೆನರಸೀಪುರ: ಕೃಷಿ ಕ್ಷೇತ್ರದಲ್ಲಿ ಗಣನೀಯವಾದ ಹೊಸ ಹೊಸ ಪ್ರಯೋಗಗಳನ್ನು ಮಾಡಿದವರಿಗೆ ಮತ್ತು ಸೃಜನಶೀಲತೆಯಿಂದ ಹೊಸ ಅನ್ವೇಷಣೆ ಮಾಡಿ ಪ್ರಗತಿಪರ ಮತ್ತು ಆರ್ಥಿಕವಾಗಿ ಲಾಭದಾಯಕವಾಗಿ ಕೃಷಿ ಮಾಡುತ್ತಿರುವವರು 2021-22 ನೇ ಸಾಲಿನ ಕೃಷಿ ಪಂಡಿತ ಪ್ರಶಸ್ತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ ಎಂದು ಸಹಾಯ ಕೃಷಿ ನಿರ್ದೇಶಕರಾದ ಸಪ್ನ.ಕೆ.ಹೆಚ್. ತಿಳಿಸಿದ್ದಾರೆ



ಅವರು ಇಂದು ಮಾಧ್ಯಮಗಳೊಂದಿಗೆ ಮಾತನಾಡುತ್ತಾ, 2021-22 ನೇ ಸಾಲಿನ ರಾಜ್ಯ ಮಟ್ಟದ ಕೃಷಿ ಪಂಡಿತ ಪ್ರಶಸ್ತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದ್ದು, ರೈತ ಸಮುದಾಯದ ಅಭಿವೃದ್ಧಿಗೆ ಅಪಾರ ಕೊಡುಗೆಯನ್ನು ನೀಡಿ ದಕೃಷಿಕರು ಸಾಧಕರು ಅರ್ಜಿ ಸಲ್ಲಿಸ ಬಹುದಾಗಿದ್ದು, ತಾಲ್ಲೂಕು ಕೃಷಿ ನಿರ್ದೇಶಕರ ಕಛೇರಿಯಲ್ಲಿ ನಿಗದಿತ ನಮೂನೆಯಲ್ಲಿ ಅರ್ಜಿಯನ್ನು ಪ್ರಗತಿಪರ ರೈತರು ನೀಡಬಹುದಾಗಿದೆ ಎಂದು ತಿಳಿಸಿದರು. ರಾಜ್ಯ ಮಟ್ಟದಲ್ಲಿ ನೀಡುವ ಕೃಷಿ ಪಂಡಿತ್ ಪ್ರಶಸ್ತಿಗಳ ವಿವರ. ಪ್ರಥಮ ನಗದು ಬಹುಮಾನ ಒಂದು ಲಕ್ಷದಇಪ್ಪತೈದು ಸಾವಿರರೂ,ದ್ವಿತೀಯ ಬಹುಮಾನ ಒಂದು ಲಕ್ಷರೂಗಳು,ತೃತೀಯ ಬಹುಮಾನ ಎಪ್ಪತ್ತೆದು ಸಾವಿರೂಗಳು,ಅದಲ್ಲದೆ ಕೃಷಿ ಪಂಡಿತ ಉದಯೋನ್ಮುಖರಿಗೆ ಐವತ್ತು ಸಾವಿರರೂ ನಗದು ಬಹುಮಾನವನ್ನು ನೀಡಲು ಅವಕಾಶವಿರುತ್ತದೆ ಎಂದು ಮಾಹಿತಿಯನ್ನು ನೀಡಿದರು,ನಿಬಂಧನೆಗಳು ಇಂತಿದೆ. ಈ ಹಿಂದೆ ಕೃಷಿ ಪಂಡಿತ್ ಪ್ರಶಸ್ತಿಯನ್ನು ಪಡೆದವರು ಸ್ಪರ್ಧಿಸುವಂತಿಲ್ಲ, ಕೇAದ್ರ ಮತ್ತುರಾಜ್ಯ ಸರ್ಕಾರದ ಸೇವೆಯಲ್ಲಿರುವವರಿಗೆ ಅವಕಾಶವಿಲ್ಲ, ವಿಶ್ವವಿದ್ಯಾನಿಲಯ ಸರ್ಕಾರಿ ಸ್ವಯಂ ಸಂಸ್ಥೆಯ ನೌಕರರು ಮತ್ತು ಅವರ ಕುಟುಂಬದ ಸದಸ್ಯರುಗಳು ಭಾಗವಹಿಸುವಂತಿಲ್ಲ, ಕೃಷಿ ಮತ್ತು ಸಂಬAಧಿಸಿದ ಇಲಾಖೆಗಳ ನಿವೃತ್ತತಾಂತ್ರಿಕ ನೌಕರರು ಮತ್ತು ಕುಟುಂಬದ ಸದಸ್ಯರು ಭಾಗವಹಿಸುವಂತಲ್ಲ,ಮೌಲ್ಯ ಮಾಪನದ ವೇಳೆ ಸ್ಪರ್ಧಾಳುಗಳು ಪ್ರಶಸ್ತಿಯನ್ನು ಪಡೆಯಲು ಕನಿಷ್ಠ 65 ಅಂಕಗಳನ್ನು ನಿಗದಿಪಡಿಸಲಾಗಿದೆ.

ಅರ್ಜಿ ಸಲ್ಲಿಸಲು 20-07-2021 ಕೊನೆಯ ದಿನಾಂಕವಾಗಿರುತ್ತದೆ, ಹೆಚ್ಚಿನ ಮಾಹಿತಿಗಾಗಿ ರೈತ ಸಂಪರ್ಕ ಕೇAದ್ರ ಅಥವಾ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರನ್ನು ಸಂಪರ್ಕಿಸಬಹುದಾಗಿದೆ ಎAದು ಸಹಾಯಕ ಕೃಷಿ ನಿರ್ದೇಶಕರಾದ ಸಪ್ನ.ಕೆ.ಹೆಚ್. ಮಾಹಿತಿಯನ್ನು ನೀಡಿದರು.

Post a Comment

Previous Post Next Post