ಹುಲ್ಲಳ್ಳಿ ಸುರೇಶ್ ಅವರಿಂದ ದಿನಸಿ ಪದಾರ್ಥಗಳ ವಿತರಣೆ

ಬೇಲೂರು ವಿಧಾನಸಭಾ ಕ್ಷೇತ್ರದ ಜಾವಗಲ್ ನಲ್ಲಿ ಇಂದು ಇಡೀ ಜಗತ್ತನ್ನೇ ತಲ್ಲಣಗೊಳಿಸಿದ ಕೋರೋನಾ ವೈರಸ್ ಮಹಾಮಾರಿ ವಿರುದ್ದ ತಮ್ಮ ಪ್ರಾಣದ ಹಂಗು ತೊರೆದು ಹೋರಾಡಿದ ಕೋರೋನಾ ವಾರಿಯರ್ಸ್ ಗಳಿಗೆ, ಆಶಾ ಕಾರ್ಯಕರ್ತೆಯರಿಗೆ, ಅಂಗನವಾಡಿ ಶಿಕ್ಷಕಿಯರಿಗೆ, ಕಾರ್ಯಕರ್ತೆಯರಿಗೆ, ಗ್ರಾಮ ಪಂಚಾಯಿತಿ ನೌಕರರಿಗೆ, ನೀರು ಗಂಟಿಗಳಿಗೆ, ಹಾಗೂ ಅಂಗವಿಕಲರಿಗೆ ಭಾರತೀಯ ಜನತಾ ಪಾರ್ಟಿಯ ಜಿಲ್ಲಾಧ್ಯಕ್ಷರಾದ ಹೆಚ್.ಕೆ. ಸುರೇಶ್(ಹುಲ್ಲಳ್ಳಿ ಸುರೇಶ್) ರವರು ದಿನಸಿ ಪದಾರ್ಥಗಳ ಕಿಟ್ ಗಳನ್ನು ಹಾಗೂ ಸುರಕ್ಷತೆಗೆ ಸ್ವೆಟರ್ ಹಾಗೂ ಛತ್ರಿಗಳನ್ನು ಜಾವಗಲ್ ನಗರದ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನದ ಆವರಣದಲ್ಲಿ ವಿತರಣೆ ಮಾಡಿದರು.



ಈ ಸಂದರ್ಭದಲ್ಲಿ ಜಾವಗಲ್ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಪ್ರಿಯಾಂಕ ಚೇತನ್, ಅರಸೀಕೆರೆ ತಾಲ್ಲೂಕು ಕೆಡಿಪಿ ಸದಸ್ಯರಾದ ಸಿದ್ದಪ್ಪ, ಮಂಡಲ ಅಧ್ಯಕ್ಷರಾದ ಅಡಗೂರು ಆನಂದ್, ತಾಲ್ಲೂಕು ಉಪಾಧ್ಯಕ್ಷರಾದ ಡಿಶಾಂತ್ ಕುಮಾರ್, ಎಪಿಎಂಸಿ ಸದಸ್ಯರಾದ ರೇಣುಕಾ ಪ್ರಸಾದ್, ಮಂಡಲ ಪ್ರಧಾನ ಕಾರ್ಯದರ್ಶಿಯಾದ ದಿಲೀಪ್ ಕುಮಾರ್, ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ರಮೇಶ್, ಪ್ರಧಾನ ಕಾರ್ಯದರ್ಶಿಯಾದ ನವೀನ್ ಕುಮಾರ್, ಯುವಮೋರ್ಚಾ ಉಪಾಧ್ಯಕ್ಷರಾದ ಮಧುಸೂದನ್, ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಅಶೋಕ್, ಅರುಣ್, ದೊರೆಸ್ವಾಮಿ, ಶಾರದಮ್ಮ, ನಾಗಶ್ರೀ, ಮಂಜಮ್ಮ, 

Advertisement

ಮುಖಂಡರುಗಳಾದ ರವಿಯಣ್ಣ, ಚಂದ್ರಶೇಖರ್, ಮೋಹನ್, ದೇವರಾಜ್, ಕುಮಾರ್, ಕೃಷ್ಮಮೂರ್ತಿ, ಸೋಮಶೇಖರ್, ವಿಜಯ್ ಕುಮಾರ್, ಪ್ರಸನ್ನ, ನಂದೀಶ್, ರಣಧೀರ, ಮಹೇಶ್, ವಿನಯ್, ಸೋಮಶೇಖರ್, ಬಸವರಾಜ್, ಪ್ರಣೀತ್, ಶಿವಕುಮಾರ್, ಪ್ರಭಣ್ಣ, ಚೇತನ್, ದೀನೇಶ್, ಹರ್ಷ ಹಾಗೂ ಇನ್ನೀತರರು ಉಸಸ್ಥಿತರಿದ್ದರು.

Advertisement



Post a Comment

Previous Post Next Post