ಬೇಲೂರಿನಲ್ಲಿ ಗ್ರೀನರಿ ಟ್ರಸ್ಟ್ ವತಿಯಿಂದ ವನಮಹೋತ್ಸವ

  ಬೇಲೂರು : ಗ್ರೀನರಿ ಟ್ರಸ್ಟ್ ವತಿಯಿಂದ ವನಮಹೋತ್ಸವವನ್ನು ಆಚರಿಸಲಾಯಿತು. ಈ ಸಂದರ್ಭ ಗಿಡಗಳ ನೆಟ್ಟು ಮಾತನಾಡಿದ ಟ್ರಸ್ಟ್ ಸದಸ್ಯ ಜ್ಞಾನಚಂದ್ರ, ಗುರಪ್ಪಗೌಡರ ಬೀದಿಯಲ್ಲಿ ಸಾರ್ವಜನಿಕ ಉದ್ಯಾನವನದಲ್ಲಿ ಟ್ರಸ್ಟ್ ವತಿಯಿಂದ ಗಿಡಗಳ ನಡೆಲಾಗಿದೆ. ಇದಕ್ಕೆ ಸ್ಥಳೀಯರು ಸಹಕಾರ ನೀಡಿದ್ದಾರೆ. ಟ್ರಸ್ಟ್ ವತಿಯಿಂದ ಕಳೆದ ೧೨ ವರ್ಷಗಳಿಂದ ಬೇಲೂರು ಪಟ್ಟಣದ ಹಲವು ಭಾಗದಲ್ಲಿ ೩ ಸಾವಿರ ಗಿಡಗಳ ನೆಟ್ಟು ಪೋಷಿಸಿಕೊಂಡು ಬರುತ್ತಿದ್ದೇವೆ. ಇದು ನಿರಂತರವಾಗಿರುತ್ತದೆ ಎಂದು ತಿಳಿಸಿದರು. 

ಬೇಲೂರಿನಲ್ಲಿ ಗ್ರೀನರಿ ಟ್ರಸ್ಟ್ ವತಿಯಿಂದ ವನಮಹೋತ್ಸವ ಆಚರಿಸಲಾಯಿತು

ಟ್ರಸ್ಟ್ ಸದಸ್ಯ ಬಿ.ವಿ.ನಾಗರಾಜ್ ಮಾತನಾಡಿ, ಮಹಾತ್ಮಗಾಂಧೀಜಿ ಹೇಳಿರುವಂತೆ ಪ್ರಕೃತಿ ಮನುಷ್ಯನ ಆಸೆಯನ್ನು ಪೂರೈಸಬಲ್ಲದೆ ವಿನಃ ದುರಾಸೆಯಿಂದಲ್ಲ ಎಂಬುದನ್ನು ಅರಿಯಬೇಕಿದೆ. ಕೊರೊನಾ ಸಂದರ್ಭ ಆಕ್ಸಿಜನ್ ಏಕೆ ಬೇಕೆಂಬುದು ಜನತೆಗೆ ಅರಿವಾಗಿದೆ. ದೇಹದಲ್ಲಿ ಆಕ್ಸಿಜನ್ ಕೊರತೆ ನೀಗಿಸಲು ಹಾಗೂ ಉತ್ತಮ ಆರೋಗ್ಯಕ್ಕಾಗಿ ಗಿಡಗಳ ಬೆಳೆಸುವ ಕೆಲಸ ಪ್ರತಿಯೊಬ್ಬರು ಮಾಡಬೇಕಿದೆ ಎಂದು ಮನವಿ ಮಾಡಿದರು.

ಈ ಸಂದರ್ಭ ಅಧ್ಯಕ್ಷ ಚಂದ್ರಶೇಖರಯ್ಯ, ಉಪಾಧ್ಯಕ್ಷ ಬಿ.ಎಂ.ವೆಂಕಟೇಶ್, ರಿಜ್ವಾನ್‌ಪಾಷ, ಪ್ರಶಾಂತ್, ಪರಮೇಶ್, ಯುವರಾಜ್, ಪ್ರದೀಪ್, ಜವರಯ್ಯ, ಕಾಳೇಗೌಡ, ಡಿ.ವಿ.ಕುಮಾರಸ್ವಾಮಿ ಇತರರು ಇದ್ದರು.


Post a Comment

Previous Post Next Post