ಜಾವಗಲ್: ಶ್ರಾವಣ ಪ್ರಾರಂಭವಾದರೆ ಹಿಂಧೂಗಳಿಗೆ ಹಬ್ಬದ
ಸಂಭ್ರಮ ವರ್ಷದಿಂದ ವರ್ಷಕ್ಕೆ ನಿತ್ಯ ಬಳಕೆಯ ಅನೇಕ ಪಧಾರ್ಥಗಳ ಬೆಲೆಗಳು ಏರಿಕೆ ಆಗುತ್ತಲೆ
ಇರುತ್ತದೆ, ಆದರೆ ಹಬ್ಬಗಳನ್ನು ಆಚರಿಸದೆ ಇರಲು
ಸಾಧ್ಯವಿಲ್ಲ, ಅನೇಕ ಹಬ್ಬಗಳನ್ನು ನಮ್ಮ ಪೂರ್ವಜರು ಆಚರಿಸಿಕೊಂಡಿ ಬಂದಿದ್ದಾರೆ,
ಸಂಪ್ರದಾಯ ಮರೆಯದ ಹಿಂಧೂಗಳು
ಪ್ರತಿ ಮನೆಯಲ್ಲಿ ತಮ್ಮ ಅನೂಕೂಲಕ್ಕೆ ತಕ್ಕಂತೆ
ವರಮಹಾಲಕ್ಷ್ಮೀ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು,
ಮನೆಯಲ್ಲಿ ಹೆಣ್ಣು ಮಕ್ಕಳು ಸಂಭ್ರಮದಲ್ಲಿ ಇದ್ದು
ವರಮಹಾಲಕ್ಷ್ಮೀಗೆ ಕಳಸಕ್ಕೆ ಸೀರೆ ಉಡಿಸಿ ಸಿಂಗರಿಸಿ ಹೂವಿನ ಅಲಂಕಾರ ಮಾಡಿ ಅನೇಕ ಹಣ್ಣುಗಳನ್ನು
ನೈವೇದ್ಯಕ್ಕಿಟ್ಟು ವರ ಮಹಾಲಕ್ಷ್ಮೀಗೆ ಮಹಾಮಂಗಳಾರತಿ ಮಾಡುತ್ತಿರುವುದು ಸಂಭ್ರಮದಿಂದ ಕೂಡಿತ್ತು ,ಈ ಹಬ್ಬದಲ್ಲಿ ಅಕ್ಕ
ಪಕ್ಕದ ಮುತೈದೆಯರನ್ನು ಕರೆದು ಕುಂಕುಮ ಕೊಡುವ ಪದ್ದತಿ ಕೂಡ ಇದ್ದು ಅನೇಕ ಗೃಹಿಣಿಯರು
ನಗರದಾದ್ಯಂತ ಓಡಾಟ ಮಾಡುತ್ತಿರುವುದು ಎದ್ದು
ಕಾಣುತ್ತಿತ್ತು, ಒಟ್ಟಾರೆ ಈ ಶ್ರಾವಣ ಮಾಸದ ಮೊದಲ
ಹಬ್ಬ ಈ ರಾಜ್ಯದಲ್ಲಿರುವ ಜಲ್ವಂತ ಸಮಸ್ಯೆಗಳನ್ನು
ಪರಿಹರಿಸಲಿ.