ಗಂಡಸಿ ಹೋಬಳಿಯಲ್ಲಿ ನಾಡಕಛೇರಿ ಸಿಬ್ಬಂಧಿಗಳಿಂದ ಸ್ವಾತಂತ್ರೋತ್ಸವ




ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕು ಗಂಡಸಿ ಹೋಬಳಿ ನಾಡಕಛೇರಿ ವತಿಯಿಂದ ಹತ್ತನೇ ತರಗತಿಯಲ್ಲಿ ಹೆಚ್ಚು ಅಂಕಗಳೊಂದಿಗೆ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಸ್ವಾಗತ ಸಮಾರಂಭ’ ಉದ್ಧೇಶಿಸಿ ಮಾತನಾಡಿದ ಅವರು
ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಸದೃಢರಾಗುವುದೂ ಕೂಡಾ ಅತ್ಯವಶ್ಯಕವಾಗಿದೆ. ಕಾಲೇಜಿನ ವಿದ್ಯಾರ್ಥಿನಿಯರೊಂದಿಗೆ ಉತ್ತಮ ಬಾಂಧವ್ಯ ಹೊಂದಿ ಅವರುಗಳನ್ನು ತಮ್ಮ ಮನೆಯ ತಾಯಂದಿರಂತೆ, ಸಹೋದರಿಯರಂತೆ ಗೌರವಿಸುವ ಮನಸ್ಥಿತಿಯನ್ನು ರೂಢಿಸಿಕೊಳ್ಳುವ ಮೂಲಕ ಉತ್ತಮ ವಾತಾವರಣ ರೂಪಿಸಿಕೊಳ್ಳುವಲ್ಲಿ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳುವ ಮೂಲಕ ಜನ್ಮನೀಡಿದ ಪೋಷಕರಿಗೆ, ನಾಡಿಗೆ ಹಾಗೂ ರಾಷ್ಟ್ರಕ್ಕೆ ಕೀರ್ತಿ ತರುವಂತಹ ಉತ್ತಮ ಪ್ರಜೆಗಳಾಗಿ ಹೊರಹೊಮ್ಮಿರಿ ಎಂದು ಕರೆ ನೀಡಿದರು.
ಸಭೆಯಲ್ಲಿ ನಾಡಕಛೇರಿ ಸಿಬ್ಬಂಧಿಗಳು ಮತ್ತು ಮೇಲಾಧಿಕಾರಿಗಳಾದ ಉಮೇಶ್ ನಾಯ್ಕ್ , ಯೋಗೀಶ್, ಪ್ರಕಾಶ್ , ಮತ್ತು ಶಂಭುಲಿಂಗೇಶ್ವರ ಶಾಲೆಯ ಮುಖ್ಯ ಶಿಕ್ಷಕರು ಮತ್ತು ಸಿಬ್ಬಂದಿ ವರ್ಗದವರು ಹಾಜರಿದ್ದರು

Post a Comment

Previous Post Next Post